ಮೈಸೂರು ವಕೀಲರ ಸಂಘದ ಗ್ರಂಥಾಲಯ ವಿಸ್ತೃತ  ಕಟ್ಟಡದ ಮುಂದುವರೆದ ಕಾಮಗಾರಿಗೆ ಚಾಲನೆ
ಮೈಸೂರು

ಮೈಸೂರು ವಕೀಲರ ಸಂಘದ ಗ್ರಂಥಾಲಯ ವಿಸ್ತೃತ ಕಟ್ಟಡದ ಮುಂದುವರೆದ ಕಾಮಗಾರಿಗೆ ಚಾಲನೆ

February 16, 2021

ಮೈಸೂರು,ಫೆ.15(ಪಿಎಂ)- ಮೈಸೂರಿನ ನ್ಯಾಯಾಲಯ ಆವರಣದ ಮೈಸೂರು ವಕೀಲರ ಸಂಘದ ಗ್ರಂಥಾಲಯದ ವಿಸ್ತøತ ಕಟ್ಟಡದ ಮುಂದುವರೆದ ಕಾಮ ಗಾರಿಗೆ ಶಾಸಕ ಎಲ್.ನಾಗೇಂದ್ರ ಸೋಮ ವಾರ ಚಾಲನೆ ನೀಡಿದರು.

ಮೈಸೂರು ವಕೀಲರ ಸಂಘದ ಮೊದಲ ಮಹಡಿಯಲ್ಲಿ ಶಾಸಕರ ಸ್ಥಳೀಯ ಪ್ರದೇ ಶಾಭಿವೃದ್ಧಿ ನಿಧಿಯ ಅನುದಾನ 10 ಲಕ್ಷ ರೂ. ವೆಚ್ಚದಲ್ಲಿ ಈ ಕಾಮಗಾರಿ ಕೈಗೆತ್ತಿ ಕೊಳ್ಳಲಾಗಿದೆ. ಕಾಮಗಾರಿಗೆ ಚಾಲನೆ ನೀಡಿದ ಶಾಸಕರು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಗ್ರಂಥಾಲಯದ ವಿಸ್ತøತ ಕಟ್ಟಡದ ಮುಂದುವರೆದ ಕಾಮಗಾರಿಗೆ ಇಂದು ಚಾಲನೆ ನೀಡಲಾಗಿದೆ. ಈ ಕಾಮ ಗಾರಿ ಕಳೆದ 6 ತಿಂಗಳ ಹಿಂದೆಯೇ ಪ್ರಾರಂಭವಾಗಬೇಕಿತ್ತು. ಆದರೆ ಕೊರೊನಾ ಹಿನ್ನೆಲೆಯಲ್ಲಿ ಕಾಮಗಾರಿಗೆ ಚಾಲನೆ ನೀಡಲು ಆಗಿರಲಿಲ್ಲ. ಇದೀಗ ಕಾಮಗಾರಿ ಆರಂಭಿ ಸಲು ಅನುಮತಿ ದೊರೆತು ಚಾಲನೆ ಸಹ ನೀಡಲಾಗಿದೆ. ನಿರ್ಮಿತಿ ಕೇಂದ್ರದಿಂದ ಕಾಮಗಾರಿ ನಡೆಯಲಿದ್ದು, ಮೂರು ತಿಂಗಳ ಒಳಗೆ ಕಾಮಗಾರಿ ಪೂರ್ಣಗೊಳಿಸಲು ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.

10 ಲಕ್ಷ ರೂ. ಮಹಾನಗರ ಪಾಲಿಕೆ ಅನುದಾನದಲ್ಲಿ ಈ ವಿಸ್ತøತ ಕಟ್ಟಡದ ಕಾಮ ಗಾರಿ ಈ ಹಿಂದೆಯೇ ಆರಂಭವಾಗಿತ್ತು. ಇದೀಗ ಮುಂದುವರೆದ ಕಾಮಗಾರಿಗೆ ಶಾಸ ಕರ ಸ್ಥಳೀಯ ಪ್ರದೇಶಾಭಿವೃದ್ಧಿಯಿಂದ ಅನುದಾನ ಕಲ್ಪಿಸಲಾಗಿದೆ ಎಂದರು.

ಕೊರೊನಾ ಹಿನ್ನೆಲೆಯಲ್ಲಿ ಅಭಿವೃದ್ಧಿ ಕೆಲಸಗಳಿಗೆ ವೇಗ ನೀಡಲು ಸಾಧ್ಯವಾಗಿರ ಲಿಲ್ಲ. ಇದೀಗ ಸೋಂಕಿನ ಪ್ರಮಾಣ ಕಡಿಮೆ ಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಹಂತ-ಹಂತವಾಗಿ ಅಭಿವೃದ್ಧಿ ಕೆಲಸಗಳನ್ನು ಮುಂದು ವರೆಸಲಾಗುತ್ತಿದೆ. ವಿಧಾನಸಭೆ ಅಧಿವೇಶನ ದಲ್ಲೂ ದೇವರಾಜ ಮಾರುಕಟ್ಟೆ, ಲ್ಯಾನ್ಸ್ ಡೌನ್ ಬಿಲ್ಡಿಂಗ್ ಸಂರಕ್ಷಣೆ ಹಾಗೂ ಕೆಆರ್ ಆಸ್ಪತ್ರೆ ಅಭಿವೃದ್ಧಿ ಸಂಬಂಧ ಪ್ರಸ್ತಾ ಪಿಸಿ ಸರ್ಕಾರದ ಗಮನಕ್ಕೆ ತಂದಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆ ಯಡಿ ಮೈಸೂರು ಆಯ್ಕೆ ಕೈತಪ್ಪಿದೆ. ಇದು ಕೈಗೂಡಿದ್ದರೆ ಸುಮಾರು 3 ಸಾವಿರ ಕೋಟಿ ರೂ. ಅನುದಾನ ನಗರದ ಅಭಿವೃದ್ಧಿಗೆ ಲಭ್ಯ ವಾಗುತ್ತಿತ್ತು. ಈಗಲೂ ಈ ಯೋಜನೆಗೆ ಮೈಸೂರು ನಗರ ಸೇರಿಸಬೇಕೆಂಬ ಪ್ರಯತ್ನ ಮುಂದುವರೆದಿದೆ ಎಂದು ಹೇಳಿದರು.

ಅಗ್ನಿಶಾಮಕ ಕಟ್ಟಡ ದುರಸ್ತಿಗೆ ಸಭೆ: 135 ವರ್ಷದ ಇತಿಹಾಸ ಹೊಂದಿರುವ ಸರಸ್ವತಿ ಪುರಂನ ಅಗ್ನಿಶಾಮಕ ಠಾಣೆ ಕಟ್ಟಡದ ಕೆಲ ಭಾಗ ಕುಸಿದಿದೆ. ಇದರ ದುರಸ್ತಿ ಸಂಬಂಧ ಈ ವಾರದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದೇನೆ. ಬಳಿಕ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದು ಸೂಕ್ತ ಪರಿಹಾರ ಕಂಡುಕೊಳ್ಳಲಾಗುವುದು. ಮಹಾರಾಜ ಕಾಲೇಜು ಕಟ್ಟಡದಲ್ಲೂ ಮೇಲ್ಛಾವಣಿ ಗಾರೆ ಉದುರಿದ್ದರ ಬಗ್ಗೆ ಮೈಸೂರು ವಿವಿ ಕುಲಪತಿಗಳ ಗಮನಕ್ಕೆ ತಂದಿದ್ದೇನೆ. ಮಹಾ ರಾಜ ಕಾಲೇಜು ಮೈಸೂರು ವಿವಿ ಅಧೀನಕ್ಕೆ ಬರುವ ಕಾರಣ ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆ ಆಗದಿರುವ ರೀತಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಅವರಿಗೆ ನಿರ್ದೇಶನ ನೀಡಿದ್ದೇನೆ ಎಂದು ಶಾಸಕ ಎಲ್. ನಾಗೇಂದ್ರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.

ಮೈಸೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಾಮಚಂದ್ರ ಡಿ.ಉದ್ದಾರ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ದೇವರಾಜ್, ಮೈಸೂರು ವಕೀಲರ ಸಂಘದ ಅಧ್ಯಕ್ಷ ಎಸ್. ಆನಂದ್‍ಕುಮಾರ್, ಉಪಾಧ್ಯಕ್ಷ ಎಸ್.ಜಿ. ಶಿವಣ್ಣೇಗೌಡ, ಕಾರ್ಯದರ್ಶಿ ಬಿ.ಶಿವಣ್ಣ, ಪಾಲಿಕೆ ಸದಸ್ಯ ಶಿವಕುಮಾರ್, ಪಾಲಿಕೆ ವಲಯ ಕಚೇರಿ-3ರ ಸಹಾಯಕ ಆಯುಕ್ತ ಟಿ.ಎಸ್.ಸತ್ಯಪ್ರಕಾಶ್, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಮಂಜುನಾಥ್ ಮತ್ತಿತರರು ಹಾಜರಿದ್ದರು.

Translate »