ರೋಟರಿ ಸಂಸ್ಥೆಯಿಂದ ಶವಾಗಾರದ ಬಳಿ ವಿಶ್ರಾಂತಿ ತಂಗುದಾಣ
Uncategorized

ರೋಟರಿ ಸಂಸ್ಥೆಯಿಂದ ಶವಾಗಾರದ ಬಳಿ ವಿಶ್ರಾಂತಿ ತಂಗುದಾಣ

December 22, 2020

ಮೈಸೂರು,ಡಿ.21(ಆರ್‍ಕೆ)-ಸಾರ್ವಜನಿಕರು ವಿಶ್ರಾಂತಿ ಪಡೆ ಯಲು ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಆವರಣದ ಶವಾಗಾರದ ಬಳಿ ರೋಟರಿ ಮೈಸೂರು ಮಿಡ್ ಟೌನ್ ಸಂಸ್ಥೆಯು ವಿಶ್ರಾಂತಿ ತಂಗುದಾಣ ನಿರ್ಮಿಸಿಕೊಟ್ಟಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ತರುವವರು ಮಳೆ, ಬಿಸಿಲಿನಿಂದ ರಕ್ಷಿಸಿಕೊಳ್ಳಲು ನಿರ್ಮಿಸಿರುವ ವಿಶ್ರಾಂತಿ ತಂಗು ದಾಣವನ್ನು ರೋಟರಿ 3181 ಡಿಸ್ಟ್ರಿಕ್ಟ್ ಗವರ್ನರ್ ರೊ.ರಂಗನಾಥ ಭಟ್ ನಾಳೆ(ಡಿ.22) ಬೆಳಗ್ಗೆ 10 ಗಂಟೆಗೆ ಉದ್ಘಾಟಿಸುವರು.

ನಮ್ಮ ಬಾಹುಬಲಿ ಖ್ಯಾತಿಯ ಪತ್ರಕರ್ತ ಸ್ವಾತಿ ಚಂದ್ರಶೇಖರ್, ಡಿಸ್ಟ್ರಿಕ್ಟ್ ಗವರ್ನರ್ ಎಲೆಕ್ಟ್ ರೊ.ಎ.ಆರ್.ರವೀಂದ್ರಭಟ್, ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಡೀನ್ ಅಂಡ್ ಡೈರೆಕ್ಟರ್ ಡಾ.ಸಿ.ಪಿ.ನಂಜರಾಜ್, ರೋಟರಿ ಮೈಸೂರು ಮಿಡ್ ಟೌನ್ ಅಧ್ಯಕ್ಷ ರೊ. ಎ.ಎನ್.ಅಯ್ಯಣ್ಣ ಹಾಗೂ ಕಾರ್ಯದರ್ಶಿ ರೊ.ಹೆಚ್.ಎಸ್.ವೀರೇಶ್ ಈ ಸಂದರ್ಭ ಪಾಲ್ಗೊಳ್ಳುವರು.

Translate »