`ಮೈಸೂರು ವಿಮಾನ ನಿಲ್ದಾಣ ಅಂತಾರಾಷ್ಟ್ರೀಯ ಮಟ್ಟಕ್ಕೇರಿಸಲು ಹಲವು ಹಂತದ ಕಾಮಗಾರಿ’
ಮೈಸೂರು

`ಮೈಸೂರು ವಿಮಾನ ನಿಲ್ದಾಣ ಅಂತಾರಾಷ್ಟ್ರೀಯ ಮಟ್ಟಕ್ಕೇರಿಸಲು ಹಲವು ಹಂತದ ಕಾಮಗಾರಿ’

December 23, 2020

‘ಅಂತಾರಾಷ್ಟ್ರೀಯ ವಾಯುಯಾನ ತಾಣವಾಗಿ  ಮೈಸೂರು-ಮಾರ್ಗಸೂಚಿ’ ಸಂವಾದದಲ್ಲಿ ಮಂಜುನಾಥ್
ಮೈಸೂರು, ಡಿ.22(ಎಂಕೆ)- ಮಂಡಕಳ್ಳಿ ಬಳಿ ಇರುವ ಮೈಸೂರು ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನಾಗಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಕಾಮಗಾರಿಗಳು ಹಂತ ಹಂತವಾಗಿ ನಡೆಯುತ್ತಿವೆ ಎಂದು ಮೈಸೂರು ವಿಮಾನ ನಿಲ್ದಾಣ ನಿರ್ದೇಶಕ ಆರ್.ಮಂಜುನಾಥ್ ಹೇಳಿದರು.

ನಗರದ ಖಾಸಗಿ ಹೋಟೆಲ್‍ನಲ್ಲಿ ನ್ಯಾಷನಲ್ ರಿಯಲ್ ಎಸ್ಟೇಟ್ ಡೆವಲಪ್‍ಮೆಂಟ್ ಕೌನ್ಸಿಲ್(ನರೆಡ್ಕೊ)ದಿಂದ ನಡೆದ ‘ಅಂತಾರಾಷ್ಟ್ರೀಯ ವಾಯುಯಾನ ತಾಣವಾಗಿ ಮೈಸೂರು-ಮಾರ್ಗಸೂಚಿ’ ಸಂವಾದದಲ್ಲಿ ಭಾಗವಹಿಸಿದ್ದ ಅವರು, ವಿಮಾನ ನಿಲ್ದಾಣ ಅಭಿವೃದ್ಧಿ ನಿಟ್ಟಿನಲ್ಲಿ ಮುಂದಿನ 30 ವರ್ಷದ ಯೋಜನೆ ಸಿದ್ಧಪಡಿಸಲಾಗಿದೆ ಎಂದರು.

ಮೇಯರ್ ತಸ್ನೀಂ ಮಾತನಾಡಿ, ಮೇಯರ್ ಆದ ಬಳಿಕ ಮೊದಲ ಬಾರಿಗೆ ಇಂಥ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಖುಷಿ ತಂದಿದೆ. ಮುಂದಿನ ದಿನಗಳಲ್ಲಿ ಮೈಸೂರು ಅಭಿವೃದ್ಧಿಗಾಗಿ ನರೆಡ್ಕೊ ಸಂಸ್ಥೆಗೆ ಸಹಕಾರ ನೀಡುವೆ. ಪಾಲಿಕೆಯಿಂದ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ವೆಸ್ಟ್ ಕ್ಲೀನಿಂಗ್ ಯಂತ್ರಗಳನ್ನು ಖರೀದಿಸಿ, ಬಳಸಲಾಗುತ್ತಿದೆ ಎಂದರು.

ಬಳಿಕ ಆರ್.ಮಂಜುನಾಥ್ ಹಾಗೂ ತಸ್ನೀಂ ಅವರಿಗೆ `ನರೆಡ್ಕೊ’ ವತಿಯಿಂದ ಸನ್ಮಾನಿಸಲಾಯಿತು. ‘ಅಂತಾರಾಷ್ಟ್ರೀಯ ವಾಯುಯಾನ ತಾಣವಾಗಿ ಮೈಸೂರು ಮಾರ್ಗಸೂಚಿ’ ಕುರಿತು ನರೆಡ್ಕೊ ಮೈಸೂರು ವಿಭಾಗದ ಸದಸ್ಯ ಸುಧೀಂದ್ರ ಉಪನ್ಯಾಸ ನೀಡಿದರು. ನರೆಡ್ಕೊ ರಾಜ್ಯಾಧ್ಯಕ್ಷ ಎಂ.ಸತೀಶ್‍ಕುಮಾರ್, ಜಿಲ್ಲಾಧ್ಯಕ್ಷ ಟಿ.ಜಿ.ಆದಿಶೇಷ, ಮುಖ್ಯಸ್ಥ ಎನ್.ದಿವ್ಯೇಶ್, ಕಾರ್ಯದರ್ಶಿ ಎಂ.ಎಲ್.ನಾಗೇಶ್ ಮತ್ತಿತರರಿದ್ದರು.

Translate »