ತಿಮ್ಮಯ್ಯ ನಾಪಂಡ `ಅತ್ಯಂತ ಭರವಸೆಯ ಬಿಸಿನೆಸ್ ಲೀಡರ್’
ಮೈಸೂರು

ತಿಮ್ಮಯ್ಯ ನಾಪಂಡ `ಅತ್ಯಂತ ಭರವಸೆಯ ಬಿಸಿನೆಸ್ ಲೀಡರ್’

December 23, 2020

ಮೈಸೂರು, ಡಿ.22- ಇಕನಾಮಿಕ್ ಟೈಮ್ಸ್‍ನ ಎಡ್ಜ್ ವತಿಯಿಂದ ಕೊಡಮಾಡುವ `ಅತ್ಯಂತ ಭರವಸೆಯ ಬಿಸಿನೆಸ್ ಲೀಡರ್ 2020-21’ ಬಿರುದಿಗೆ ಮೆರಿಟರ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ವ್ಯವಸ್ಥಾಪಕ ನಿರ್ದೇಶಕರು ಹಾಗೂ ಮೆರಿಟರ್ ಇಂಕ್‍ನ ಇಂಡಿಯಾ ಮತ್ತು ಆಸ್ಟ್ರೇಲಿಯಾದ ಉಪಾಧ್ಯಕ್ಷ ತಿಮ್ಮಯ್ಯ ನಾಪಂಡ ಪಾತ್ರರಾಗಿ ದ್ದಾರೆ. ವಿಶೇಷವಾಗಿ ಉತ್ಪನ್ನ ವಲಯ ಹಾಗೂ ಕಾಪೆರ್Çರೇಟ್ ವಲಯಕ್ಕೆ ತಿಮ್ಮಯ್ಯ ನೀಡಿರುವ ಕೊಡುಗೆ ಹಾಗೂ ಸಾಧನೆ ಪರಿಗಣಿಸಿ ಅವರನ್ನು ಗೌರವಿಸಿದ್ದು, ಇತ್ತೀಚೆಗೆ ನಡೆದ ವರ್ಚು ವಲ್ ಕಾರ್ಯಕ್ರಮದಲ್ಲಿ ಘೋಷಿಸಲಾಗಿದೆ. ದೂರದೃಷ್ಟಿಯಿಂದ ವ್ಯವಹಾರ ವಿಸ್ತರಣೆಗೆ ಅವರು ಹೆಚ್ಚು ಒತ್ತು ನೀಡಿ, ದೇಶವು ಆರ್ಥಿಕ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಸಹಕಾರಿಯಾಗಬಹುದಾದ ಅರ್ಥಿಕ ನೀತಿಗಳನ್ನು ಅಳವಡಿಸಿಕೊಂಡಿರುವುದು ತಿಮ್ಮಯ್ಯ ಅವರ ವಿಶೇಷತೆ. ವಿಶೇಷ ಗೌರವ ಸಂದಿರುವ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಅವರು, ತಮ್ಮ ಮತ್ತು ಸಂಸ್ಥೆಯ ಏಳು ಬೀಳಿನಲ್ಲಿ ಸಹಕಾರ ನೀಡಿದವರಿಗೆ ಕೃತಜ್ಞತೆ ತಿಳಿಸಿದ್ದಾರೆ.

Translate »