ಸಂವಿಧಾನದ ಆಶಯದಂತೆ ಸಮಾಜದಲ್ಲಿರುವ ಮೌಢ್ಯ ತೊಲಗಿಸಲು ಕಾರ್ಯಪ್ರವೃತ್ತರಾಗಬೇಕು
ಮೈಸೂರು

ಸಂವಿಧಾನದ ಆಶಯದಂತೆ ಸಮಾಜದಲ್ಲಿರುವ ಮೌಢ್ಯ ತೊಲಗಿಸಲು ಕಾರ್ಯಪ್ರವೃತ್ತರಾಗಬೇಕು

December 23, 2020

ಮೈಸೂರು, ಡಿ.22(ಪಿಎಂ)- ಸಂವಿ ಧಾನದಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಿ ಕೊಳ್ಳುವುದು ಪ್ರತಿ ಪ್ರಜೆಯ ಮೂಲಭೂತ ಕರ್ತವ್ಯಗಳಲ್ಲಿ ಪ್ರಮುಖವೆಂದು ಹೇಳ ಲಾಗಿದ್ದು, ಈ ಬಗ್ಗೆ ಪ್ರತಿಯೊಬ್ಬರು ವಿಚಾರ ಮಾಡಿ ಮೌಢ್ಯ ತೊಲಗಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರೂ ಆದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ದೇವಮಾನೆ ಹೇಳಿದರು.

ಮೈಸೂರಿನ ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ಆಯುರ್ವೇದ ವೈದ್ಯಕೀಯ ಕಾಲೇಜಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂ ಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಗ್ರಾಹಕರ ದಿನಾಚರಣೆ ಹಾಗೂ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮಲ್ಲಿ ಬಹಳಷ್ಟು ಕಾನೂನುಗಳಿದ್ದು, ಎಲ್ಲವನ್ನೂ ಸಮಗ್ರವಾಗಿ ತಿಳಿದುಕೊಳ್ಳು ವುದು ಕಷ್ಟಸಾಧ್ಯ. ಆದರೆ ನಮ್ಮ ದಿನನಿತ್ಯ ಜೀವನ, ದೇಶದ ಅಭಿವೃದ್ಧಿ, ಪರಿಸರ ಸಂರಕ್ಷಣೆ, ನಮ್ಮ ಸುತ್ತಮುತ್ತಲ ನಾಗರಿಕರ ಹಕ್ಕುಗಳ ರಕ್ಷಣೆ, ಸಮಾಜದ ಶಾಂತಿಗೆ ಸಂಬಂ ಧಿಸಿದ ಕಾನೂನುಗಳ ಬಗ್ಗೆ ಬಹುಮುಖ್ಯ ವಾಗಿ ಅರಿವಿರಬೇಕು. ಸಂವಿಧಾನ ವಿಧಿಸಿ ರುವ ಕರ್ತವ್ಯಗಳನ್ನು ಪ್ರತಿಯೊಬ್ಬರು ಪಾಲಿಸಿದರೆ ಸ್ವಾಸ್ಥ್ಯ ಸಮಾಜ ನಿರ್ಮಾಣ ವಾಗಲಿದೆ ಎಂದು ತಿಳಿಸಿದರು.

`ಗ್ರಾಹಕರ ಹಿತರಕ್ಷಣಾ ಕಾಯ್ದೆ’ ಕುರಿತು ಉಪನ್ಯಾಸ ನೀಡಿದ ಜಿಲ್ಲಾ ಕಾನೂನು ಸೇವೆ ಗಳ ಪ್ರಾಧಿಕಾರದ ಹಿರಿಯ ಪ್ಯಾನೆಲ್ ವಕೀಲ ಎನ್.ಸುಂದರ್‍ರಾಜ್, ಈ ಕಾಯ್ದೆ ಅಗತ್ಯವೇ? ಎಂಬ ಪ್ರಶ್ನೆ ಹಾಕಿಕೊಂಡು ಇತ್ತೀಚಿನ ಬೆಳ ವಣಿಗೆ ಅವಲೋಕಿಸಿದರೆ ಈ ಕಾಯ್ದೆ ಅತ್ಯ ಗತ್ಯ ಎಂಬ ಅಂಶ ಮನದಟ್ಟಾಗುತ್ತದೆ. 1986 ರಲ್ಲಿ ಈ ಕಾಯ್ದೆ ಜಾರಿಗೆ ಬಂದಿತು. 2019 ರಲ್ಲಿ ತಿದ್ದುಪಡಿಗೊಂಡು ಹಲವು ಸುಧಾರಣೆ ಗಳೊಂದಿಗೆ ಜಾರಿಗೊಂಡಿತು ಎಂದರು.

ಗ್ರಾಹಕರಿಗೆ ನ್ಯಾಯ ನೀಡುವ ಉದ್ದೇಶ ದಿಂದ ದೇಶದಲ್ಲಿ ಈ ಕಾಯ್ದೆ ಜಾರಿಗೊಳಿಸ ಲಾಗಿದೆ. ಗ್ರಾಹಕರು ಉತ್ಪನ್ನ ಖರೀದಿಸಿ ಖಾತರಿ (ವಾರಂಟಿ) ಅವಧಿಗೂ ಮುನ್ನವೇ ಅದು ದುರಸ್ತಿಗೆ ಬಂದು ಬದಲಿ ಉತ್ಪನ್ನ ನೀಡಲು ನಿರಾಕರಿಸುವ ಸಂದರ್ಭದಲ್ಲಿ ಮಾರಾಟಗಾರರ ವಿರುದ್ಧ ದೂರು ದಾಖಲಿ ಸಲು ಇದರಲ್ಲಿ ಅವಕಾಶವಿದೆ. ದೂರು ನೀಡಲು ಉತ್ಪನ್ನ ಖರೀದಿಯ ರಶೀದಿ ಹೊಂದಿರಬೇಕು. 5 ಲಕ್ಷ ರೂ.ವರೆಗೆ ಹಕ್ಕು ಪ್ರತಿಪಾದಿಸುವುದಾದರೆ ನ್ಯಾಯಾಲಯದ ಶುಲ್ಕ ಇರುವುದಿಲ್ಲ ಎಂದು ತಿಳಿಸಿದರು.

ಈ ಕಾಯ್ದೆಯಲ್ಲಿ `ಎಂಆರ್‍ಪಿ(ಗರಿಷ್ಠ ಚಿಲ್ಲರೆ ಬೆಲೆ)’ ಬೆಲೆ ಸಂಬಂಧ ಚೌಕಾಶಿ ಮಾಡಲು ಅವಕಾಶ ನೀಡಿದೆ. ದೂರು ದಾಖ ಲಿಸಿದ ಕೂಡಲೇ ತ್ವರಿತ ನ್ಯಾಯ ದೊರೆ ಯುವ ಅವಕಾಶ ಇಲ್ಲಿದೆ. ಉತ್ಪನ್ನದ ಮೌಲ್ಯ 1 ಕೋಟಿ ರೂ. ಇದ್ದ ಸಂದರ್ಭದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ವೇದಿಕೆ ವ್ಯಾಪ್ತಿಯಲ್ಲಿ ದೂರು ನೀಡಬಹುದು. 1 ಕೋಟಿ ರೂ. ಮೇಲ್ಪಟ್ಟು 10 ಕೋಟಿ ರೂ.ವರೆಗೆ ಇದ್ದರೆ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, 10 ಕೋಟಿ ರೂ. ಮೇಲ್ಪಟ್ಟಿದ್ದರೆ ರಾಷ್ಟ್ರೀಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ವ್ಯಾಪ್ತಿಯಲ್ಲಿ ದೂರು ಸಲ್ಲಿಸ ಬಹುದು. ಮೈಸೂರಿನ ಕುವೆಂಪುನಗರದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಇದ್ದು, ದೂರು ನೀಡಬೇಕಿದ್ದರೆ ಇಲ್ಲಿಗೆ ಭೇಟಿ ನೀಡಬಹುದು ಎಂದು ಹೇಳಿದರು. ಕಾಲೇಜಿನ ಪ್ರಾಂಶುಪಾಲ ಡಾ.ಗಜಾನನ ಹೆಗಡೆ, ಸಹಾಯಕ ಪ್ರಾಧ್ಯಾಪಕ ಡಾ. ಆದರ್ಶ್ ಮತ್ತಿತರರು ಹಾಜರಿದ್ದರು.

 

 

Translate »