ಜ.9ರಂದು ರಾಜ್ಯದಲ್ಲಿ ರೈಲು ತಡೆ, ಜೈಲ್ ಭರೋ ಚಳವಳಿ
ಮೈಸೂರು

ಜ.9ರಂದು ರಾಜ್ಯದಲ್ಲಿ ರೈಲು ತಡೆ, ಜೈಲ್ ಭರೋ ಚಳವಳಿ

December 23, 2020

ಮೈಸೂರು, ಡಿ.22(ಪಿಎಂ)- ರಾಜ್ಯ ಸರ್ಕಾರ ಮರಾಠ ಅಭಿವೃದ್ಧಿ ನಿಗಮದ ಆದೇಶ ಹಿಂಪಡೆಯ ಬೇಕೆಂದು ಆಗ್ರಹಿಸಿ ಜ.9ರಂದು ರಾಜ್ಯಾದ್ಯಂತ ರೈಲು ತಡೆ ಹಾಗೂ ಜೈಲ್ ಭರೋ ಚಳವಳಿ ನಡೆಸ ಲಾಗುವುದು ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ತಿಳಿಸಿದರು.

ಸಿದ್ಧಗಂಗಾ ಮಠದ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿ ಅವರಿಗೆ `ಭಾರತ ರತ್ನ’ ನೀಡಬೇ ಕೆಂದು ಹಾಗೂ ಮರಾಠ ಅಭಿವೃದ್ಧಿ ನಿಗಮದ ಆದೇಶ ಹಿಂಪಡೆಯಬೇಕೆಂದು ಒತ್ತಾಯಿಸಿ ಮೈಸೂರು ರೈಲ್ವೆ ನಿಲ್ದಾಣದ ಎದುರು ಮಂಗಳವಾರ ಬೆಂಬಲಿ ಗರೊಂದಿಗೆ ಪ್ರತಿಭಟನೆ ನಡೆಸಿ, ಬಳಿಕ ಮಾಧ್ಯಮ ದವರೊಂದಿಗೆ ಅವರು ಮಾತನಾಡಿದರು.

ಮರಾಠ ಅಭಿವೃದ್ಧಿ ನಿಗಮದ ಆದೇಶ ಹಿಂಪಡೆ ಯಲು ಆಗ್ರಹಿಸಿ ಜ.9ರಂದು ಎರಡನೇ ಹಂತದ ಚಳವಳಿ ಹಮ್ಮಿಕೊಳ್ಳಲಾಗಿದೆ. ಅಂದು ಇಡೀ ರಾಜ್ಯ ದಲ್ಲಿ ರೈಲು ತಡೆ ಚಳವಳಿ ಮಾಡಲಾಗುವುದು. ಸುಮಾರು 1 ಸಾವಿರ ಸ್ಥಳಗಳಲ್ಲಿ ಸತ್ಯಾಗ್ರಹ ನಡೆಸಲಿ ದ್ದೇವೆ. ಹಳಿಗಳ ಮೇಲೆ ಎಲ್ಲೆಂದರಲ್ಲಿ ಕುಳಿತು ಹೋರಾಟ ಮಾಡಲಾಗುವುದು. ಅಂದು ರಾಜ್ಯದ ಜನತೆ ಯಾವುದೇ ಕಾರಣಕ್ಕೂ ರೈಲ್ವೆ ನಿಲ್ದಾಣಕ್ಕೆ ಬರುವುದು ಬೇಡವೆಂದು ಮನವಿ ಮಾಡಿದರು.

ಅಲ್ಲದೆ ಅಂದು ಸಾವಿರಾರು ಜನರು ಜೈಲ್ ಭರೊ ಚಳವಳಿ ನಡೆಸಲಿದ್ದಾರೆ. ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ತೀವ್ರ ಹೋರಾಟಕ್ಕೆ ನಿರ್ಧಾರ ಮಾಡಿ ದ್ದೇವೆ ಎಂದರು. ಬೆಳಗಾವಿ, ನಿಪ್ಪಾಣಿ ಸೇರಿದಂತೆ ಹಲವು ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಬೇ ಕೆಂದು ಶಿವಸೇನೆ ವತಿಯಿಂದ ಸುಪ್ರೀಂ ಕೋರ್ಟ್ ನಲ್ಲಿ ಮೊಕದ್ದಮೆ ಹೂಡಲಾಗಿದೆ. ಇಂತಹ ಸನ್ನಿ ವೇಶದಲ್ಲಿ ಮರಾಠ ಭಾಷೆ ಹೆಸರಿನಲ್ಲಿ ನಿಗಮ ಸ್ಥಾಪನೆ ಯಾವುದೇ ಕಾರಣಕ್ಕೂ ಆಗಕೂಡದು. ಒಂದು ವೇಳೆ ಆದಲ್ಲಿ ಇದು ಕರ್ನಾಟಕಕ್ಕೆ ದೊಡ್ಡ ಕಳಂಕ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಆನ್ ಲೈನ್ ತರಗತಿ ಬಂದ್ ಅಸ್ತ್ರ ಬಳಸಿದ್ದ ರುಪ್ಸಾ (ಆರ್ ಯುಪಿಎಸ್‍ಎ-ಮಾನ್ಯತೆ ಪಡೆದ ಅನುದಾನರಹಿತ ಖಾಸಗಿ ಶಾಲೆಗಳ ಸಂಘ) ಸಂಬಂಧ ಪ್ರತಿಕ್ರಿಯೆ ನೀಡಿದ ವಾಟಾಳ್ ನಾಗರಾಜ್, ಆನ್‍ಲೈನ್ ಕ್ಲಾಸ್ ಸ್ಥಗಿತ ಎನ್ನುವ ಮೂಲಕ ಖಾಸಗಿ ಶಿಕ್ಷಣ ಸಂಸ್ಥೆಗಳು ಪಾಳೇಗಾರರಂತೆ ವರ್ತಿಸಿವೆ. ಸಿಎಂ ಯಡಿಯೂರಪ್ಪ ಹಾಗೂ ಶಿಕ್ಷಣ ಸಚಿವ ಸುರೇಶ್‍ಕುಮಾರ್ ಅವರಿಗೆ ಏನು ಮಾಡಬೇಕು ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ರಾಷ್ಟೀಕರಣ ಮಾಡಬೇಕು ಎಂದು ಒತ್ತಾಯಿಸಿದರು. ಕನ್ನಡಪರ ಹೋರಾಟ ಗಾರರಾದ ಮೂಗೂರು ನಂಜುಂಡಸ್ವಾಮಿ, ತಾಯೂರು ವಿಠ್ಠಲಮೂರ್ತಿ ಮತ್ತಿತರರಿದ್ದರು.

 

 

 

Translate »