ಲಕ್ಷ್ಮೀಪುರಂ ಪೊಲೀಸ್‍ರಿಂದ ಅಪರಾಧ ತಡೆ ಮಾಸ ಆಚರಣೆ
ಮೈಸೂರು

ಲಕ್ಷ್ಮೀಪುರಂ ಪೊಲೀಸ್‍ರಿಂದ ಅಪರಾಧ ತಡೆ ಮಾಸ ಆಚರಣೆ

December 23, 2020

ಮೈಸೂರು, ಡಿ.22(ಎಂಕೆ)- ಮೈಸೂರಿನ ಕೃಷ್ಣ ಮೂರ್ತಿಪುರಂನಲ್ಲಿರುವ ಶ್ರೀ ರಾಮ ಮಂದಿರ ದಲ್ಲಿ ಮೈಸೂರು ನಗರ ಪೊಲೀಸ್ ಮತ್ತು ಲಕ್ಷ್ಮೀ ಪುರಂ ಪೊಲೀಸ್ ಠಾಣೆಯಿಂದ `ಅಪರಾಧ ತಡೆ ಮಾಸ’ ಆಚರಣೆ ಅಂಗವಾಗಿ ಠಾಣೆ ವ್ಯಾಪ್ತಿಯ ಸಾರ್ವಜನಿಕರೊಂದಿಗೆ ಸಭೆ ನಡೆಸಿ ಅಪರಾಧ ಪ್ರಕರಣಗಳು ನಡೆಯದಂತೆ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಜಾಗೃತಿ ಮೂಡಿ ಸಲಾಯಿತು. ಎಸಿಪಿ ಪೂರ್ಣಚಂದ್ರ ತೇಜಸ್ವಿ ಮಾತನಾಡಿ, ಸಾರ್ವಜನಿಕರು ಸರಗಳವು ನಡೆಯ ದಂತೆ ಎಚ್ಚರ ವಹಿಸುವುದು ಅಗತ್ಯ. ಸರಗಳವು ನಡೆದಾಗ ಯಾವ ಕ್ರಮ ತೆಗೆದುಕೊಳ್ಳಬೇಕು ಎಂಬ ಬಗೆಗೂ ತಿಳಿದುಕೊಂಡಿರಬೇಕು ಎಂದರು.

ಶಾಲಾ-ಕಾಲೇಜಿಗೆ ತೆರಳುವ ಹೆಣ್ಣು ಮಕ್ಕಳು ಸಾಮಾಜಿಕ ಜಾಲತಾಣ ಬಳಸುವಾಗ ಎಚ್ಚರದಿಂ ದಿರಬೇಕು. ಆನ್‍ಲೈನ್ ಚಿಟೀಂಗ್‍ನಂತಹ ಅಪ ರಾಧಗಳ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿ ಕೊಟ್ಟರು. ‘ತುರ್ತು ಸ್ಪಂದನಾ ಸಹಾಯ ವ್ಯವಸ್ಥೆ-112 (ಇಖSS – 112) ದೂರವಾಣಿ ಸಂಖ್ಯೆ ಬಳಕೆ ಕುರಿತು ಮಾಹಿತಿ ನೀಡಿದರು.

ಈ ವೇಳೆ ಲಕ್ಷ್ಮೀಪುರಂ ಪೊಲೀಸ್ ಠಾಣೆ ಇನ್‍ಸ್ಪೆಕ್ಟರ್ ವೆಂಕಟೇಶ್ ಉಪಸ್ಥಿತರಿದ್ದರು.

 

Translate »