ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ: ಸಿಸಿಟಿವಿ ಕಣ್ಗಾವಲು
ಹಾಸನ

ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ: ಸಿಸಿಟಿವಿ ಕಣ್ಗಾವಲು

March 4, 2020

ಹಾಸನ, ಮಾ.3- ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭಗೊಳ್ಳಲಿದ್ದು, ಮುಂಜಾಗ್ರತಾ ಕ್ರಮ ಕೈಗೊಂಡು ಪ್ರಶ್ನೆ ಪತ್ರಿಕೆ ಸೋರಿಕೆಯಾಗದಂತೆ ಎಚ್ಚರ ವಹಿಸಲಾಗಿದೆ.

ಈ ಬಾರಿಯೂ ಜಿಲ್ಲಾ ಖಜಾನೆಯಲ್ಲಿ ಸಿಸಿಟಿವಿ ಅಳವಡಿಸಲಿದ್ದು ಅದರ ವೀಕ್ಷಣೆಯನ್ನು ಜಿಲ್ಲಾ ಖಜಾನೆ ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ ನಿರ್ವಹಿಸಲಾಗುತ್ತಿದೆ. ಅಲ್ಲದೇ ವಿಶೇಷ ವಾಗಿ ಈ ಬಾರಿ ಜಿಲ್ಲಾಧಿಕಾರಿಗಳ ಕಚೇರಿ ಯಲ್ಲಿಯೂ ಸಹ ವೀಕ್ಷಣೆ ಮಾಡ ಲಾಗುತ್ತದೆ ಎಂದು ಇಲಾಖೆ ತಿಳಿಸಿದೆ.

ಈ ವರ್ಷ ಒಟ್ಟು 17,363 ವಿದ್ಯಾರ್ಥಿ ಗಳು ಪರೀಕ್ಷೆಯಲ್ಲಿ ಭಾಗವಹಿಸಲಿದ್ದಾರೆ. ಸರ್ಕಾರಿ ಕಾಲೇಜಿನ 8,557 ವಿದ್ಯಾರ್ಥಿ ಗಳು, ಅನುದಾನಿತ ಕಾಲೇಜುಗಳ 2,395 ವಿದ್ಯಾರ್ಥಿಗಳು ಹಾಗೂ ಅನುದಾನ ರಹಿತ ಕಾಲೇಜುಗಳ 6,411 ವಿದ್ಯಾರ್ಥಿಗಳು ಈ ಬಾರಿಯ ಪರೀಕ್ಷೆ ಬರೆಯಲಿದ್ದಾರೆ.

ಹಿಂದಿನ ಬಾರಿ ಅನುತ್ತೀರ್ಣರಾದ 1,521 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಯಲ್ಲಿ ಭಾಗವಹಿಸಲಿದ್ದು, 15,231 ಹೊಸ ವಿದ್ಯಾರ್ಥಿಗಳಾಗಿದ್ದಾರೆ. ಇನ್ನು 611 ಖಾಸಗಿ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸುತ್ತಿ ದ್ದಾರೆ. ಕಲಾ ವಿಭಾಗದಲ್ಲಿ 5096, ವಾಣಿಜ್ಯ ವಿಭಾಗದಲ್ಲಿ 6970 ಹಾಗೂ ವಿಜ್ಞಾನ ವಿಭಾಗದಲ್ಲಿ 5297 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಜಿಲ್ಲೆಯಲ್ಲಿ 30 ಪರೀಕ್ಷಾ ಕೇಂದ್ರಗಳಿದ್ದು, ತಾಲೂಕುವಾರಗಳಲ್ಲಿ ಆಲೂರು 1, ಸಕಲೇಶಪುರ 1, ಹೊಳೆ ನರಸೀಪುರ 2, ಅರಕಲಗೂಡು 3, ಅರಸೀಕೆರೆ 5, ಜಾವಗಲ್ 1, ಬೇಲೂರು 2, ಹಾಸನ 11 ಹಾಗೂ ಚೆನ್ನರಾಯಪಟ್ಟಣದಲ್ಲಿ 4 ಪರೀಕ್ಷಾ ಕೇಂದ್ರಗಳಿವೆ. ಒಟ್ಟಾರೆ ದ್ವಿತೀಯ ಪಿ.ಯು.ಸಿ ಪರೀಕ್ಷೆಗೆ ಸಾಕಷ್ಟು ತಯಾರಿ ಗಳನ್ನು ಇಲಾಖೆ ನಡೆಸಿದ್ದು, ಪರೀಕ್ಷೆಯು ಮಾ. 4ರಿಂದ ಪ್ರಾರಂಭಗೊಂಡು ಮಾ.23 ರವರೆಗೆ ನಡೆಯಲಿದೆ.

Translate »