ನಿವೇಶನಕ್ಕೆ ಒತ್ತಾಯಿಸಿ ಹಲ್ಲೆಗೆರೆ, ಮೋಳೆ ಗ್ರಾಮಸ್ಥರ ಪ್ರತಿಭಟನೆ
ಮಂಡ್ಯ

ನಿವೇಶನಕ್ಕೆ ಒತ್ತಾಯಿಸಿ ಹಲ್ಲೆಗೆರೆ, ಮೋಳೆ ಗ್ರಾಮಸ್ಥರ ಪ್ರತಿಭಟನೆ

March 4, 2020

ಮಂಡ್ಯ,ಮಾ.3(ನಾಗಯ್ಯ)- ತಾಲೂ ಕಿನ ಹಲ್ಲೇಗೆರೆ, ಮೋಳೆ ಗ್ರಾಮದ ನಿವೇ ಶನ ರಹಿತ ಫಲಾನುಭವಿಗಳಿಗೆ ಸರ್ಕಾರಿ ಭೂಮಿ ಅಳತೆ ಮಾಡಿ ಗ್ರಾಪಂಗೆ ಹಸ್ತಾಂ ತರಿಸಿ ನಿವೇಶನ ಹಂಚಿಕೆ ಮಾಡಬೇಕು ಎಂದು ಆಗ್ರಹಿಸಿ ನಿವೇಶನ ರಹಿತ ಗ್ರಾಮ ಸ್ಥರು ನಗರದಲ್ಲಿ ಮಂಗಳವಾರ ಪ್ರತಿ ಭಟನೆ ನಡೆಸಿದರು.

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಹಾಗೂ ಬೆಸ್ತರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ನಗರದ ತಾಲೂಕು ತಹಶೀಲ್ದಾರ್ ಕಚೇರಿ ಮುಂದೆ ಜಮಾ ಯಿಸಿದ ಪ್ರತಿಭಟನಾಕಾರರು ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ದಸಂಸ ಮುಖಂಡ ಎಂ.ಬಿ.ಶ್ರೀನಿ ವಾಸ್ ಮಾತನಾಡಿ, ಹಲ್ಲೇಗೆರೆ, ಮೋಳೆ ಗ್ರಾಮಗಳಲ್ಲಿ ನಿವೇಶನವಿಲ್ಲದೆ ಇರುವ ನೊಂದ ಹಾಗೂ ಬಡಜನರು ಸುಮಾರು 280 ರಿಂದ 300 ಕುಟುಂಬಗಳಿದ್ದು, ಮೂರ್ನಾಲ್ಕು ವರ್ಷಗಳಿಂದ ಸರ್ಕಾರಿ ಭೂಮಿ ಗುರುತಿಸಿ ನಿವೇಶನ ನೀಡಬೇಕು ಎಂದು ಮನವಿ ನೀಡಿ ಒತ್ತಾಯಿಸುತ್ತಾ ಬಂದರೂ, ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ನಿವೇಶನವಿಲ್ಲದೆ ಜೀವನ ನಡೆಸಲು ತುಂಬಾ ಕಷ್ಟಕರವಾಗಿದೆ. ಆದ್ದರಿಂದ ಕೂಡಲೇ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಹಲ್ಲೇಗೆರೆ ಗ್ರಾಮದ ಸರ್ವೆ ನಂ.156/ಪಿ15ರಲ್ಲಿ 6ಎಕರೆ ಸರ್ಕಾರಿ ಬೀಳು ಜಮೀನು, ಸರ್ವೆ ನಂ.10/ಪಿರಲ್ಲಿ 20ಗುಂಟೆ, ಸರ್ವೆ ನಂ.11ರಲ್ಲಿ 20 ಗುಂಟೆ, ಸರ್ವೆ ನಂ. 153ರಲ್ಲಿ 1.2 ಎಕರೆ ಹಾಗೂ ಹಲ್ಲೇಗೆರೆ ಹಳೆ ಮೋಳೆ ಗ್ರಾಮಕ್ಕೆ ಸೇರಿದ 4 ಎಕರೆ ಸರ್ಕಾರಿ ಭೂಮಿ ಇದ್ದು, ಇದನ್ನು ಅಳತೆ ಮಾಡಿ ಗ್ರಾಪಂಗೆ ಹಸ್ತಾಂತರಿಸಿ ನಂತರ ನಿವೇಶನ ನೀಡುವ ಮೂಲಕ ಬಡವರಿಗೆ ಅನುಕೂಲ ಮಾಡಿ ಕೊಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಬೆಸ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಮಂಜುನಾಥ, ಎಂ.ಡಿ.ಸಂತೋಷ್, ಹೆಚ್.ಪಿ.ಜವರಯ್ಯ, ಹನುಮಂತ, ಕೆ.ಮಂಚಯ್ಯ, ಕೌಶಿಕ್, ಎಂ.ಎಂ.ದೇವರಾಜ, ಎ.ಮಂಚಯ್ಯ, ಜೈಕುಮಾರಿ, ಪ್ರೇಮಲತಾ ಸೇರಿದಂತೆ ನೂರಾರು ಮಹಿಳೆಯರು ಭಾಗವಹಿ ಸಿದ್ದರು.

 

Translate »