ಒಂದೇ ಬೆಳೆ ಬದಲು ಪರ್ಯಾಯ ಬೆಳೆಯಿಂದ ಅಧಿಕ ಲಾಭ
ಮಂಡ್ಯ

ಒಂದೇ ಬೆಳೆ ಬದಲು ಪರ್ಯಾಯ ಬೆಳೆಯಿಂದ ಅಧಿಕ ಲಾಭ

March 4, 2020

ಮಂಡ್ಯ,ಮಾ.3-ಹಲವು ರೈತರು ಒಂದೇ ಬೆಳೆಯನ್ನು ಹಾಕುವುದರಿಂದ ಆರ್ಥಿಕ ವಾಗಿ ನಷ್ಟ ಉಂಟಾಗುತ್ತದೆ. ಯಾವುದೇ ಬೆಳೆಯನ್ನು ಇತರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ನಮ್ಮ ಜಿಲ್ಲೆಯಲ್ಲಿ ಶೇ. 40 ರಷ್ಟು ಗುಣಮಟ್ಟದ ಇಳುವರಿ ಪಡೆಯಲು ಸಾಧ್ಯ ವಿಲ್ಲ. ಇದರಿಂದ ಸಾಮಾನ್ಯವಾಗಿ ಹೊರೆ ಯಾಗುತ್ತ್ತಿದೆ ಎಂದು ಜಂಟಿ ಕೃಷಿ ನಿರ್ದೇಶಕ ಡಾ.ಬಿ.ಎಸ್.ಚಂದ್ರಶೇಖರ್ ಹೇಳಿದರು.

ನಗರದ ಕ್ಯಾತುಂಗೆರೆ ಬಡಾವಣೆ ವಿಕಸನ ತರಬೇತಿ ಸಂಸ್ಥೆಯಲ್ಲಿ, ಜಿಪಂ, ಕೃಷಿ ಇಲಾಖೆ, ಜಲಾನಯನ ಅಭಿವೃದ್ಧಿ ಇಲಾಖೆ, ವಿಕಸನ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆಯಿಂದ ನಡೆದ ರೈತ ಉತ್ಪಾದಕ ಸಂಸ್ಥೆಯ ಸದಸ್ಯರಿಗೆ ಸಾಮಥ್ರ್ಯ ಅಭಿವೃದ್ಧಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರೈತರು ಲಾಭವನ್ನು ಪಡೆಯಲು ಉತ್ಪಾದಕ ಸಂಸ್ಥೆಯಲ್ಲಿ ಪಾಲಿಸಬೇಕಾದ ನಿಬಂಧನೆ, ಸ್ವಾತಂತ್ರ್ಯ, ಮಾರುಕಟ್ಟೆ ಮೌಲ್ಯ ಗಳ ಬಗ್ಗೆ ಈ ಕಾರ್ಯಕ್ರಮದ ಮೂಲಕ ಅರಿವು ಮೂಡಿಸಲಾಗುವುದು. ಇದಕ್ಕಾಗಿ ಸರ್ಕಾರ ಅತಿ ಹೆಚ್ಚಿನ ಒತ್ತು ನೀಡಿದೆ ಎಂದರು.

ರೈತರು ಹೊಂದಿರುವ ಸಣ್ಣ ಭೂಮಿ ಯಲ್ಲಿ ಉತ್ತಮವಾಗಿ ಬೆಳೆದರೂ ಸರಿ ಯಾದ ಬೆಲೆ ದೊರೆಕದೆ ಕಂಗಾಲಾ ಗಿದ್ದಾರೆ. ಈರುಳ್ಳಿ ಬೆಲೆ ಹೆಚ್ಚಾಗಿರುವುದನ್ನು ಹೊರತು ಪಡಿಸಿದರೆ ಯಾವ ಬೆಳೆಗೂ ಹೆಚ್ಚಿನ ಬೆಲೆ ದೊರಕುತ್ತಿಲ್ಲ. ಇದಕ್ಕೆ ಹಲವಾರು ಕಾರಣ ಗಳಿದ್ದು, ಮಂಡ್ಯ ಜಿಲ್ಲೆಯ ಶೇ. 48ರಷ್ಟು ನೀರಾವರಿ ಹಾಗೂ ಶೇ. 52ರಷ್ಟು ಮಳೆ ಯಾಶ್ರಿತ ಪ್ರದೇಶವಾಗಿದ್ದು, ಮಳೆಯಾಶ್ರಿತ ಪ್ರದೇಶದ ರೈತರಿಗೆ ಹೆಚ್ಚಿನ ಒತ್ತಡವಿರು ತ್ತದೆ. ನೀರಾವರಿ ಪ್ರದೇಶದ ರೈತರು ಸಾಮಾನ್ಯವಾಗಿ ಕಾರ್ಯನಿರ್ವಹಿಸು ತ್ತಾರೆ. ಮಳೆಯಾಶ್ರಿತ ಪ್ರದೇಶದಲ್ಲಿ ಮಳೆಯ ಜೊತೆಗೆ ನೀರಾವರಿ ಮೂಲ ಗಳನ್ನು ನಂಬಿಕೊಂಡು ಬೆಳೆ ಬೆಳೆಯ ಬೇಕಾಗಿದೆ. ಈ ನಿಟ್ಟಿನಲ್ಲಿ ತಿಳಿವಳಿಕೆ ಕೊರತೆಯಿಂದ ನಷ್ಟ ಅನುಭವಿಸುತ್ತಿದ್ದಾರೆ ಎಂದು ತಿಳಿಸಿದರು.

ರೈತರಿಗೆ ಉತ್ತಮ ಬೆಲೆ ದೊರಕಬೇಕಾ ದರೆ ಮೌಲ್ಯವರ್ಧನೆ ಮಾಡಬೇಕಾಗಿದೆ. ರಾಗಿಯಲ್ಲಿ ವಿವಿಧ ರೀತಿಯ ಉತ್ಪನ್ನ ಗಳನ್ನು ತಯಾರಿಸಿ ಮಾಡಿದರೆ ಆದಾಯ ಹೆಚ್ಚಿಸಿಕೊಳ್ಳಬಹುದು. ಇದೇ ರೀತಿ ಎಲ್ಲಾ ಬೆಳೆಗಳ ಮೌಲ್ಯವರ್ಧನೆಯನ್ನು ನಿರ್ಧಾರ ಮಾಡಬೇಕು ಇದಕ್ಕಾಗಿ ರೈತ ಉತ್ಪಾದಕರ ಸಂಸ್ಥೆಯನ್ನು ಹುಟ್ಟು ಹಾಕಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕೃಷಿ ಅಧಿಕಾರಿ ಕೃಷ್ಣೇಗೌಡ, ವಿಕಸನ ಸಂಸ್ಥೆ ನಿರ್ದೇಶಕ ಮಹೇಶ್‍ಚಂದ್ರಗುರು, ಸಂಪನ್ಮೂಲ ವ್ಯಕ್ತಿಗಳಾದ ಕೆಂಪಯ್ಯ, ಭಾನುಪ್ರಕಾಶ್, ರಮೇಶ್, ಕೆ.ಆರ್.ಅಮೃತ, ಎಂ.ಎನ್. ರವಿ ಇತರರು ಭಾಗವಹಿಸಿದ್ದರು.

Translate »