ರಾಜಕೀಯ ಪ್ರವೇಶ ಊಹಾಪೋಹಕ್ಕೆ ತೆರೆ ಎಳೆದ ಯುವರಾಜ
ಹಾಸನ

ರಾಜಕೀಯ ಪ್ರವೇಶ ಊಹಾಪೋಹಕ್ಕೆ ತೆರೆ ಎಳೆದ ಯುವರಾಜ

September 9, 2018

ಹಾಸನ:  ಮೈಸೂರು ಯುವರಾಜರು ರಾಜಕೀಯ ಪ್ರವೇಶ ಮಾಡುತ್ತಾರೆ ಎಂಬ ಊಹಾಪೋಹಕ್ಕೆ ಸ್ವತಃ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರೇ ತೆರೆ ಎಳೆದಿದ್ದಾರೆ.

ಜಿಲ್ಲಾ ಕಸಾಪದಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿಲು ಮೊದಲ ಬಾರಿಗೆ ನಗರಕ್ಕೆ ಆಗಮಿಸಿದ್ದ ಅವರು, ಸುದ್ದಿಗಾರರಿಗೆ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ರಾಜಕೀಯದ ಬಗ್ಗೆ ಸದ್ಯಕ್ಕೆ ನನಗೆ ಆಸಕ್ತಿಯಿಲ್ಲ. ಹಿಂದಿನಿಂದಲೂ ಜನರೊಂದಿಗೆ ರಾಜಪರಂಪರೆಯ ನಂಟು ಇದೆ. ಆ ಸಂಬಂಧವನ್ನು ಮುಂದುವರಿಸಿಕೊಂಡು ಹೋಗೋದಷ್ಟೇ ನನ್ನ ಮುಂದಿರುವ ಜವಾಬ್ದಾರಿ ಎಂದು ಸ್ಪಷ್ಟಪಡಿಸಿದರು.

ಮಂಡ್ಯದಿಂದ ಲೋಕಸಭೆಗೆ ಸ್ಪರ್ಧೆ ಮಾಡುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಯುವರಾಜರು, ಸದ್ಯ ಅದೆಲ್ಲಾ ಬರೀ ಊಹಾಪೋಹ. ಅಂಥಹ ಯಾವುದೇ ಪ್ರಸ್ತಾಪ ನನ್ನ ಮುಂದೆ ಇಲ್ಲ. ಮೈಸೂರಿನ ಪಾರಂಪರಾಗತ ಪರಂಪರೆ ಉಳಿಸಿಕೊಳ್ಳೋದು ಜೊತೆಗೆ ತಾನು ಸಮಾಜಸೇವೆ ಮುಂದುವರಿಸುವುದಾಗಿ ಹೇಳಿದರು.

Translate »