ವಿಭಾಗ ಸ್ಥಳಾಂತರಕ್ಕೆ ಆಗ್ರಹ; ಅಪರಾಧ ಶಾಸ್ತ್ರ-ನ್ಯಾಯವಿಜ್ಞಾನ ವಿದ್ಯಾರ್ಥಿಗಳ ಪ್ರತಿಭಟನೆ
ಮೈಸೂರು

ವಿಭಾಗ ಸ್ಥಳಾಂತರಕ್ಕೆ ಆಗ್ರಹ; ಅಪರಾಧ ಶಾಸ್ತ್ರ-ನ್ಯಾಯವಿಜ್ಞಾನ ವಿದ್ಯಾರ್ಥಿಗಳ ಪ್ರತಿಭಟನೆ

February 12, 2021

ಮೈಸೂರು, ಫೆ.11(ಎಂಟಿವೈ)- ಮಹಾರಾಜ ಕಾಲೇಜಿನ ಅಪರಾಧ ಶಾಸ್ತ್ರ ಮತ್ತು ನ್ಯಾಯವಿಜ್ಞಾನದ ವಿಭಾಗ ವನ್ನು ಸ್ಥಳಾಂತರಿಸುವಂತೆ ಒತ್ತಾಯಿಸಿ, ಎಂಎಸ್‍ಸಿ ಅಪರಾಧ ಶಾಸ್ತ್ರ ಹಾಗೂ ನ್ಯಾಯವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಮೈವಿವಿಯ ಕ್ರಾಫರ್ಡ್ ಭವನದ ಮುಂದೆ ಗುರು ವಾರ ಬೆಳಿಗ್ಗೆ ಪ್ರತಿಭಟಿಸಿದರು.

ಕಟ್ಟಡದ ಮೇಲ್ಛಾವಣ ಯ ಗಾರೆ ಚಕ್ಕೆಯಾಗಿ ಉದುರಿ ಬಿದ್ದಿದ್ದರಿಂದ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಹಾಗಿದ್ದರೂ ಅದೇ ಕೊಠಡಿಯಲ್ಲಿ ತರ ಗತಿಗೆ ಹಾಜರಾಗುವಂತೆ ಸೂಚಿಸ ಲಾಗಿದೆ. ಕುಲಪತಿಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣ ಸಬೇಕು. ಅಪರಾಧಶಾಸ್ತ್ರ ವಿಭಾಗವನ್ನು ಬೇರೆ ಕಟ್ಟಡಕ್ಕೆ ಸ್ಥಳಾಂತರಿಸಬೇಕು ಎಂದು ಮನವಿ ಮಾಡಿದರು. ಅಪರಾಧ ಶಾಸ್ತ್ರ ಮತ್ತು ನ್ಯಾಯ ವಿಜ್ಞಾನ ವಿಭಾಗಕ್ಕೆ ಹಲವು ವರ್ಷಗಳಿಂದ ಮುಖ್ಯಸ್ಥರಿಲ್ಲ. 3ನೇ ಸೆಮಿಸ್ಟರ್ ವೇಳಾಪಟ್ಟಿಯನ್ನೂ ಪ್ರಕಟಿಸಿಲ್ಲ. ಸೂಕ್ತ ಪ್ರಯೋಗಾಲಯ ವಿಲ್ಲ. ಪ್ರಯೋಗಕ್ಕೆ ಉಪಕರಣಗಳು, ರಾಸಾಯನಿಕಗಳ ಕೊರತೆ ಇದೆ. ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲ. ಶೌಚಾಲಯ ಸರಿಯಿಲ್ಲ. ಪ್ರಾಧ್ಯಾಪಕರ ಕೊರತೆಯಿದೆ. ಸ್ನಾತಕೋತ್ತರ ಪದವಿಗೆ ಸಂಬಂಧಪಟ್ಟ ಆಡಳಿತ ವರ್ಗದಲ್ಲಿ ಸಿಬ್ಬಂದಿ ಕೊರತೆ ಇದೆ. ಎಲ್ಲಾ ಸಮಸ್ಯೆ ಗಳನ್ನು ಕೂಡಲೇ ಪರಿಹರಿಸ ಬೇಕೆಂದು ಒತ್ತಾಯಿಸಿದರು.

Translate »