ಮಹಾರಾಜ ಕಾಲೇಜಿನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ
ಮೈಸೂರು

ಮಹಾರಾಜ ಕಾಲೇಜಿನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

July 29, 2018

ಮೈಸೂರು: ಆರೋಗ್ಯ ಮತ್ತು ಓದಿನ ಕಡೆ ಗಮನ ನೀಡುವಂತೆ ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ. ಆರ್.ರಾಜಣ್ಣ ಕರೆ ನೀಡಿದರು.

ಮಹಾರಾಜ ಕಾಲೇಜಿನ ಹೊಸ ಕಟ್ಟಡ ದಲ್ಲಿ ಶನಿವಾರ ಐಕ್ಯುಎಸಿ, ವಿಶ್ವಮಾನವ ಮೈಸೂರು ವಿಶ್ವವಿದ್ಯಾನಿಲಯ ನೌಕರರ ವೇದಿಕೆ ಮತ್ತು ಡಿಆರ್‍ಎಂ ಮಲ್ಟಿ ಸ್ಪೆಷಾ ಲಿಟಿ ಆಸ್ಪತ್ರೆಯ ಸಹಯೋಗದಲ್ಲಿ ಏರ್ಪಡಿ ಸಿದ್ದ ಉಚಿತ ಆರೋಗ್ಯ ತಪಾಸಣಾ ಹಾಗೂ `ಆಂದೋಲನ’ ಸಂಸ್ಥಾಪಕ ಸಂಪಾದಕ ರಾಜ ಶೇಖರ ಕೋಟಿ ಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಈಗ ಚಿಕ್ಕ ವಯಸ್ಸಿನಲ್ಲಿಯೇ ಬಿಪಿ, ಶುಗರ್ ಮತ್ತಿತರ ರೋಗಗಳು ಬರತೊಡಗಿವೆ. ಆದ್ದರಿಂದ ಪ್ರತಿಯೊಬ್ಬರೂ ವರ್ಷಕ್ಕೊಮ್ಮೆ ನಿಯಮಿತವಾಗಿ ಆರೋಗ್ಯ ತಪಾಸಣೆ ಗೊಳಗಾಗುವುದು ಒಳ್ಳೆಯದು ಎಂದರು.

ಪ್ರತಿಷ್ಠಿತ ಮಹಾರಾಜ ಕಾಲೇಜಿನಲ್ಲಿ ಓದುವುದೇ ಹೆಮ್ಮೆ. ವಿದ್ಯಾರ್ಥಿಗಳು ಇಲ್ಲಿ ರುವ ಸೌಲಭ್ಯಗಳು, ಅದರಲ್ಲೂ ಗ್ರಂಥಾಲಯ ಸೌಲಭ್ಯವನ್ನು ಉತ್ತಮವಾಗಿ ಬಳಸಿ ಕೊಂಡು ಜ್ಞಾನ ಸಂಪತ್ತು ಹೆಚ್ಚಿಸಿಕೊಳ್ಳ ಬೇಕು ಎಂದು ಸಲಹೆ ಮಾಡಿದರು.

ಡಿಆರ್‌ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮುಖ್ಯಸ್ಥರೂ ಆದ ನಗರ ಬಿಜೆಪಿ ಅಧ್ಯಕ್ಷ ಡಾ.ಬಿ.ಎಚ್.ಮಂಜುನಾಥ್ ಮಾತನಾಡಿ, ದೇಶದಲ್ಲಿರುವ ಜನಸಂಖ್ಯೆಯಲ್ಲಿ ಶೇ.75 ರಷ್ಟು ಮಂದಿ 40ಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದು, ಆರೋಗ್ಯಕರ ಭಾರತ ನಿರ್ಮಾಣ ದತ್ತ ಗಮನಹರಿಸಬೇಕು ಎಂದರು.

45-50 ಲಕ್ಷ ಜನಸಂಖ್ಯೆ ಇರುವ ಸಿಂಗಪೋರ್ ದಂತ ಚಿಕ್ಕ ದೇಶದಲ್ಲಿ ಎಲ್ಲರಿಗೂ ಆರೋಗ್ಯ ಸೌಲಭ್ಯ ಕಲ್ಪಿಸುವುದು ಸುಲಭ. ಆದರೆ ಬೆಂಗಳೂರು ಜನಸಂಖ್ಯೆ ಸಿಂಗಾಪುರ್‌ನ ಮೂರರಷ್ಟಿದೆ. ದೇಶದ ಜನ ಸಂಖ್ಯೆ 135 ಕೋಟಿಯಷ್ಟಿದೆ. ಆದ್ದರಿಂದ ಕೇವಲ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದಲೇ ಎಲ್ಲರಿಗೂ ಆರೋಗ್ಯ ಭಾಗ್ಯ ಕಲ್ಪಿಸಲಾಗದು. ಆದ್ದರಿಂದ ಖಾಸಗಿ ಸಂಸ್ಥೆಗಳು ಏರ್ಪಡಿ ಸುವ ಇಂಥ ಶಿಬಿರಗಳ ಪ್ರಯೋಜನ ಪಡೆ ಯುವಂತೆ ಅವರು ಮನವಿ ಮಾಡಿದರು.

ಮೈಸೂರು ವಿವಿ ಸಂಜೆ ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಆಂಜನೇಯ, ಮಹಾ ರಾಜ ಕಾಲೇಜಿನ ಆಡಳಿತಾಧಿಕಾರಿ ಡಾ.ಸಿ. ರಾಮಸ್ವಾಮಿ, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮುಖ್ಯ ಅತಿಥಿಗಳಾಗಿ ದ್ದರು. ಐಕ್ಯುಐಸಿ ಸಂಚಾಲಕ ಪ್ರೊ. ಲ್ಯಾನ್ಸಿ ಡಿಸೋಜ ಮಾತನಾಡಿ, ಆಂತರಿಕ ಗುಣಮಟ್ಟ ಹೆಚ್ಚಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳ ಲಾಗಿದೆ. ಆರೋಗ್ಯ ಕೂಡ ಇದರ ವ್ಯಾಪ್ತಿಗೆ ಬರುತ್ತದೆ. ವಿದ್ಯಾರ್ಥಿಗಳಲ್ಲಿ ನಿದ್ರೆ ಕಡಿಮೆ ಯಾಗುತ್ತಿದೆ. ಇದಕ್ಕೆ ಮೊಬೈಲ್ ಕಾರಣ. ನಿದ್ರೆಯನ್ನೇ ಮಾಡದಿದ್ದಲ್ಲಿ ಓದಿನ ಕಡೆ ಗಮನಹರಿಸಲಾಗದು. ಆದ್ದರಿಂದ ವಿದ್ಯಾರ್ಥಿ ಗಳು ಈ ಬಗ್ಗೆ ಎಚ್ಚರ ವಹಿಸಬೇಕು, ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.

ಪ್ರಾಚ್ಯವಿದ್ಯಾ ಸಂಶೋಧನಾಲಯದ ನಿರ್ದೇಶಕ ಪ್ರೊ.ಎಸ್. ಶಿವರಾಜಪ್ಪ ಸ್ವಾಗತಿ ಸಿದರು. ಎನ್‍ಎಸ್‍ಎಸ್ ಕಾರ್ಯಕ್ರಮ ಅಧಿ ಕಾರಿ ಡಾ.ಆಶಾಕುಮಾರಿ ವಂದಿಸಿದರು. ಎನ್‍ಎಸ್‍ಎಸ್ ವಿದ್ಯಾರ್ಥಿಗಳು ನಾಡ ಗೀತೆ ಹಾಡಿದರು. ವಿಶ್ವಮಾನವ ಮೈಸೂರು ವಿಶ್ವವಿದ್ಯಾನಿಲಯ ನೌಕರರ ವೇದಿಕೆ ಅಧ್ಯಕ್ಷ ಆರ್.ವಾಸುದೇವ, ಕಾರ್ಯದರ್ಶಿ ವಿನೋದ್, ಡಿಆರ್‍ಎಂ ಆಸ್ಪತ್ರೆ ವೈದ್ಯರಾದ ಸುಹಾಸ್, ಕಿರಣ್, ನಂದೀಶ್, ಅಧ್ಯಾಪಕರು, ಅಧ್ಯಾ ಪಕೇತರು, ವಿದ್ಯಾರ್ಥಿಗಳು ಇದ್ದರು. ನಂತರ ಡಿಆರ್‍ಎಂ ಆಸ್ಪತ್ರೆಯ ತಜ್ಞ ವೈದ್ಯರು ಮತ್ತು ಸಿಬ್ಬಂದಿ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ನಡೆಸಿದರು.

Translate »