ವಿದೇಶಿ ಹೂಡಿಕೆ ಆಕರ್ಷಿಸಲು ಸಿಎಂ ಯಡಿಯೂರಪ್ಪ ನಿಯೋಗ ದಾವೋಸ್ ಪ್ರಯಾಣ
ಮೈಸೂರು

ವಿದೇಶಿ ಹೂಡಿಕೆ ಆಕರ್ಷಿಸಲು ಸಿಎಂ ಯಡಿಯೂರಪ್ಪ ನಿಯೋಗ ದಾವೋಸ್ ಪ್ರಯಾಣ

January 20, 2020

ಬೆಂಗಳೂರು,ಜ.19-ರಾಜ್ಯದಲ್ಲಿ ವಿದೇಶಿ ಬಂಡವಾಳ ಹೂಡಿಕೆ ಆಕರ್ಷಿಸಲು ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ನಿಯೋಗ ಸ್ವಿಟ್ಜರ್‍ಲ್ಯಾಂಡ್‍ನ ದಾವೋಸ್‍ಗೆ ಇಂದು ಬೆಳಿಗ್ಗೆ ಪ್ರಯಾಣ ಬೆಳೆಸಿದೆ.

ಸೋಮವಾರದಿಂದ ದಾವೋಸ್‍ನಲ್ಲಿ ನಡೆಯಲಿರುವ ವಿಶ್ವ ಆರ್ಥಿಕ ಸಮ್ಮೇ ಳನದಲ್ಲಿ ಭಾಗವಹಿಸಲು ತೆರಳುತ್ತಿರುವ ಈ ನಿಯೋಗವು ಜ.22ರಂದು ಕರ್ನಾ ಟಕದಲ್ಲಿ ವಿದೇಶಿ ಹೂಡಿಕೆ ಸಂಬಂಧ ನಡೆಯಲಿರುವ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಉದ್ಯಮಿಗಳ ಜೊತೆ ಸಭೆ ಗಳನ್ನು ನಡೆಸಲಿದೆ.

ಮುಖ್ಯಮಂತ್ರಿಗಳೊಡನೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗ ದೀಶ್ ಶೆಟ್ಟರ್, ಸರ್ಕಾರದ ಮುಖ್ಯ ಕಾರ್ಯ ದರ್ಶಿ ಟಿ.ಎಂ.ವಿಜಯ ಭಾಸ್ಕರ್, ಹೆಚ್ಚು ವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣ ರೆಡ್ಡಿ, ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತ, ಮುಖ್ಯಮಂತ್ರಿಗಳ ಕಾರ್ಯದರ್ಶಿ ಡಾ. ಎಸ್.ಸೆಲ್ವಕುಮಾರ್, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಇಲಾಖೆ ಆಯುಕ್ತ ಗುಂಜಾನ್ ಕೃಷ್ಣ, ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರ ಎಂ.ಬಿ.ಮರಂ ಕಲ್, ಮುಖ್ಯಮಂತ್ರಿಗಳ ವಿಶೇಷಾಧಿಕಾರಿ ಕೆ.ಪಿ.ರುದ್ರಪಯ್ಯ ತೆರಳಿದರು.

ಇಂದು ಬೆಳಿಗ್ಗೆ 10.25ಕ್ಕೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ದಿಂದ ದುಬೈಗೆ ತೆರಳಿ, ಅಲ್ಲಿಂದ ಸ್ವಿಟ್ಜರ್ ಲೆಂಡ್‍ನ ಜೂರಿಚ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಜೆ 7.50ಕ್ಕೆ ತಲು ಪಿದ ನಿಯೋಗ, ಅಲ್ಲಿಂದ ರಸ್ತೆ ಮೂಲಕ ದಾವೋಸ್‍ಗೆ ತೆರಳಿದೆ. ಸೋಮವಾರ ದಂದು ವಿಶ್ವ ಆರ್ಥಿಕ ಒಕ್ಕೂಟದ ವಾರ್ಷಿಕ ಸಭೆ ಜರುಗಲಿದ್ದು, ಅಂದೇ ಕರ್ನಾಟಕ ಮಳಿಗೆಯ ಉದ್ಘಾಟನೆಯೂ ನಡೆಯ ಲಿದೆ. ಮಂಗಳವಾರ ವಿಶ್ವ ಆರ್ಥಿಕ ಒಕ್ಕೂಟದ ಸಭೆಗಳು ನಡೆಯಲಿದ್ದು, ಬುಧವಾರ ಕರ್ನಾಟಕದಲ್ಲಿ ವಿದೇಶಿ ಬಂಡವಾಳ ಹೂಡಿಕೆ ಸಂಬಂಧ ಪೂರ್ವಭಾವಿ ಸಮಾವೇಶ ಜರುಗಲಿದೆ. ಈ ವೇಳೆ ಉದ್ಯಮಿಗಳ ಜೊತೆ ವೈಯಕ್ತಿಕ ಸಭೆಗಳು ನಡೆಯಲಿವೆ. ಸದಾ ಬಿಳಿ ಸಫಾರಿಯಲ್ಲಿ ಕಾಣಿಸಿಕೊಂಡಿದ್ದ ಯಡಿಯೂರಪ್ಪ ಇಂದು ಶೂ ಧರಿಸಿದ್ದರು. ನೇವಿ ಗ್ರೇ ಕಲರ್ ಕೋಟು, ಬ್ಲಾಕ್ ಕಲರ್ ಪ್ಯಾಂಟ್, ಬ್ಲಾಕ್ ಕಲರ್ ಶೂ ಧರಿಸಿ ಬೆಂಗಳೂ ರಿನ ತಮ್ಮ ಧವಳಗಿರಿ ನಿವಾಸದಿಂದ ಅವರು ಹೊರಟರು. ಈ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಮುಖ್ಯಮಂತ್ರಿಗಳು, ಅಮಿತ್ ಶಾ ಅವರ ಜೊತೆ ಅರ್ಧ ಗಂಟೆ ಮಾತುಕತೆ ನಡೆಸಿದರು. ಉತ್ತಮ ಸ್ಪಂದನೆ ದೊರೆತಿದೆ. ದಾವೋಸ್‍ನಿಂದ ಬಂದ ಎರಡು ದಿನದಲ್ಲಿ ಸಂಪುಟ ವಿಸ್ತರಣೆ ಮಾಡಲಾಗುತ್ತದೆ ಎಂದು ಹೇಳಿದರು.

Translate »