ಸಮಾಜದ ಬದಲಾವಣೆಗೆ ಶ್ರಮಿಸಿದ ಮಹಾನ್ ಚೇತನ ಬಸವಣ್ಣ
ಮೈಸೂರು ಗ್ರಾಮಾಂತರ

ಸಮಾಜದ ಬದಲಾವಣೆಗೆ ಶ್ರಮಿಸಿದ ಮಹಾನ್ ಚೇತನ ಬಸವಣ್ಣ

January 13, 2020

ಬನ್ನೂರು, ಜ12(ಪ್ರಭು)-12ನೇ ಶತಮಾನದಲ್ಲಿ ಸಮಾನತೆ, ಅಕ್ಷರ ಕ್ರಾಂತಿ, ವಚನ ಕ್ರಾಂತಿ, ಅನ್ನದಾಸೋಹದಂತಹ ಕಾರ್ಯಕ್ರಮವನ್ನು ನೀಡುವ ಮೂಲಕ ಸಮಾಜದ ಬದಲಾವಣೆಗೆ ಶ್ರಮಿಸಿದ ಮಹಾನ್ ಚೇತನ ಬಸವಣ್ಣನವರು ಎಂದು ಮಾಜಿ ಸಂಸದ ಆರ್.ಧ್ರುವನಾರಾಯಣ್ ತಿಳಿಸಿದರು.

ಪಟ್ಟಣದ ಬಸ್‍ನಿಲ್ದಾಣದ ಸಮೀಪದಲ್ಲಿ ನೂತನ ಬಸವ ಭವನ ಉದ್ಘಾಟನೆ ಹಾಗೂ ಬಸವೇಶ್ವರ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಳಮಟ್ಟದಿಂದ ಮೇಲ್ವರ್ಗವರೆಗೆ ಎಲ್ಲರನ್ನು ಸಮಾನವಾಗಿ ಕಾಣುವ ಮೂಲಕ ಬಸವಣ್ಣನವರು ಅಸ್ಪøಶ್ಯದಂತ ಅನಿಷ್ಟ ಪದ್ಧತಿಯ ನಿರ್ಮೂಲನಕ್ಕೆ ನಾಂದಿ ಹಾಡಿದರು. ತಮ್ಮ ವಚನದ ಸಮಾಜದ ಬದಲಾವಣೆಗೆ ಶ್ರಮಿಸಿದರು ಎಂದರು.

ನಂತರ ಮಾತನಾಡಿದ ಶಾಸಕ ಎಂ.ಅಶ್ವಿನ್‍ಕುಮಾರ್, ಪಟ್ಟಣದಲ್ಲಿ ಬಸವಣ್ಣನವರ ಪುತ್ಥಳಿ ಅನಾವರಣವಾಗಿರುವುದು ಸಂತಸದ ಸಂಗತಿ. ಬಸವಣ್ಣನವರ ಆಶಯದಂತೆ ಇಂದಿಗೂ ವಿವಿಧ ಮಠದಲ್ಲಿ ಸರ್ವರಿಗೂ ಶಿಕ್ಷಣ, ಅನ್ನ ದಾಸೋಹದಂತ ಕಾರ್ಯವನ್ನು ಮಠಾಧೀಶರು ಇಂದಿಗೂ ಮುಂದುವರೆಸಿಕೊಂಡು ಬರುತ್ತಿದ್ದಾರೆ ಎಂದು ಶ್ಲಾಘಿಸಿಸಿದರು.

ಪರಿಸರ ಜಾಗೃತಿ ವೇದಿಕೆ ಅಧ್ಯಕ್ಷ ಡಾ.ಮಹೇಂದ್ರಸಿಂಗ್‍ಕಾಳಪ್ಪ ಮಾತನಾಡಿ, ಬಸವಣ್ಣನವರ ಕೊಡುಗೆ ಸಮಾಜಕ್ಕ ಅಪಾರ. ವಚನದ ಸಾಹಿತ್ಯದ ಮೂಲಕ ಲೋಕದ ಸತ್ಯವನ್ನು ಅರ್ಥವಾಗುವಂತೆ ತಿಳಿಸಿ ಹೊಸ ಶಕೆಗೆ ನಾಂದಿ ಹಾಡಿದರು. ಅವರ ನಡೆ-ನುಡಿ ಹಾಗೂ ಅವರು ತೋರಿದ ಹಾದಿಯನ್ನು ನಾವೆಲ್ಲರೂ ಅನುಸರಿಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಸ್.ಕೃಷ್ಣಪ್ಪ, ಶ್ರೀ ರಾಜಶೇಖರ ಸ್ವಾಮೀಜಿ, ಶ್ರೀ ಗುರುಪಾದ ಶಿವಚಾರ್ಯ ಸ್ವಾಮೀಜಿ, ವಿವೇಕಾನಂದ ಟ್ರಸ್ಟಿ ಎಂ.ಪ್ರಕಾಶ್, ಪುರಸಭಾ ಮಾಜಿ ಅಧ್ಯಕ್ಷ ಡಿ.ಪದ್ಮನಾಭ್, ಕೃಷ್ಣೇಗೌಡ, ಮುನಾವರ್‍ಪಾಷ, ಎಪಿಎಂಸಿ ಅಧ್ಯಕ್ಷ ವೆಂಕಟೇಶ್, ಲಿಂಗಾಯಿತ ಮಹಾಸಭಾದ ತಾಲೂಕು ಅಧ್ಯಕ್ಷ ತೊಟ್ಟವಾಡಿ ಮಹದೇವಸ್ವಾಮಿ ಸೇರಿದಂತೆ ವೀರಶೈವ ಲಿಂಗಾಯಿತ ಸೇವಾ ಸಮಿತಿಯ ಸದಸ್ಯರು, ನಿರ್ದೇಶಕರು ಹಲವರಿದ್ದರು.

Translate »