ಮೈಸೂರು ಗ್ರಾಮಾಂತರ

ರಾಷ್ಟ್ರೀಯ ಹೆದ್ದಾರಿ-275ರ ಭೂ ಸ್ವಾಧೀನ ಪ್ರಕ್ರಿಯೆ ಸಂಬಂಧ ರೈತ ಸಂಘದ ಸಭೆ: ಫೆ.24ಕ್ಕೆ ಡಿಸಿ ಕಚೇರಿ ಎದುರು ಪ್ರತಿಭಟನೆಗೆ ನಿರ್ಧಾರ
ಮೈಸೂರು ಗ್ರಾಮಾಂತರ

ರಾಷ್ಟ್ರೀಯ ಹೆದ್ದಾರಿ-275ರ ಭೂ ಸ್ವಾಧೀನ ಪ್ರಕ್ರಿಯೆ ಸಂಬಂಧ ರೈತ ಸಂಘದ ಸಭೆ: ಫೆ.24ಕ್ಕೆ ಡಿಸಿ ಕಚೇರಿ ಎದುರು ಪ್ರತಿಭಟನೆಗೆ ನಿರ್ಧಾರ

February 4, 2020

ಹುಣಸೂರು, ಫೆ.3(ಕೆಕೆ)- ತಾಲೂ ಕಿನ ಮೂಲಕ ಹಾದು ಹೋಗುವ ಉದ್ದೇಶಿತ ರಾಷ್ಟ್ರೀಯ ಹೆದ್ದಾರಿ-275ರ ಸಂಬಂಧ ಭೂ ಸ್ವಾಧೀನ ಪ್ರಕ್ರಿಯೆ ಕೈ ಬಿಡುವಂತೆ ಒತ್ತಾಯಿಸಿ ಮೈಸೂರು ಜಿಲ್ಲಾ ಧಿಕಾರಿ ಕಚೇರಿ ಎದುರು ಫೆ.24ರಂದು ಪ್ರತಿಭಟಿಸಲು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತೀರ್ಮಾನಿಸಿದ್ದು, ಹೋರಾಟ ಸಮಿತಿ ರಚಿಸಲಾಯಿತು. ತಾಲೂಕಿನ ಹೆಜ್ಜೊಡ್ಲು ಗ್ರಾಮದ ರೈಸ್ ಮಿಲ್ ಆವರಣದಲ್ಲಿ ಭಾನುವಾರ ಕರ್ನಾ ಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಅಧ್ಯಕ್ಷತೆಯಲ್ಲಿ ನಡೆದ ರೈತರ…

ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ಅಗತ್ಯ
ಮೈಸೂರು ಗ್ರಾಮಾಂತರ

ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ಅಗತ್ಯ

February 4, 2020

ತಿ.ನರಸೀಪುರ, ಫೆ.3(ಎಸ್‍ಕೆ)-ಸಮಾಜ ದಲ್ಲಿ ಜವಾಬ್ದಾರಿಯುತ ಪ್ರಜೆಯಾಗಿ ರೂಪುಗೊಳ್ಳಲು ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ಅಗತ್ಯ ಎಂದು ವರುಣಾ ಶಾಸಕ ಡಾ.ಎಸ್.ಯತೀಂದ್ರ ಅಭಿಪ್ರಾಯಪಟ್ಟರು. ಪಟ್ಟಣದ ಟಿಎಪಿಸಿಎಂಎಸ್ ರೈತ ಭವನ ಆವರಣದಲ್ಲಿ ನಡೆದ ಎನ್‍ಕೆಎಫ್ ಪಬ್ಲಿಕ್ ಪೂರ್ವ ಮತ್ತು ಹಿರಿಯ ಪ್ರಾಥಮಿಕ ಶಾಲೆಯ 11ನೇ ವಾರ್ಷಿಕೋತ್ಸವ ಹಾಗೂ ಸಾಧಕರ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಾಮಾಜಿಕ ಜವಾಬ್ದಾರಿ ಮರೆ ಯಾಗುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡಬೇಕಾದ ಜವಾ ಬ್ದಾರಿ ಶಿಕ್ಷಕರ ಮೇಲಿದೆ. ವಿದ್ಯಾರ್ಥಿಗಳ ಪ್ರತಿಭೆ ಯನ್ನು ಗುರುತಿಸಿ…

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಶೀಘ್ರ ಡಿಜಿಟಲೀಕರಣ
ಮೈಸೂರು ಗ್ರಾಮಾಂತರ

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಶೀಘ್ರ ಡಿಜಿಟಲೀಕರಣ

January 30, 2020

ತಿ.ನರಸೀಪುರ, ಜ.29(ಎಸ್‍ಕೆ)-ಗ್ರಾಮೀಣ ಭಾಗದ ರೈತರಿಗೆ ಆರ್ಥಿಕ ಸಹಕಾರ ನೀಡುತ್ತಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ(ಪಿಎಸಿಸಿಎಸ್)ಗಳನ್ನು ಸದ್ಯದಲ್ಲೇ ಡಿಜಿಟಲೀಕರಣಗೊಳಿಸಲಾಗುವುದು ಎಂದು ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ(ಎಂಸಿಡಿಸಿಸಿ) ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್‍ಗೌಡ ಹೇಳಿದರು. ಪಟ್ಟಣದ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಬುಧವಾರ ಭೇಟಿ ನೀಡಿ, ಸನ್ಮಾನ ಸ್ವೀಕರಿಸಿದ ಅವರು ಬಳಿಕ ಸಂಘದ ನಿರ್ದೇಶಕರು ಹಾಗೂ ವಿವಿಧ ಸಂಘಗಳ ಸಿಇಓಗಳೊಂದಿಗೆ ಸಮಾಲೋಚನೆ ನಡೆಸಿದರು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಸಮಗ್ರ ಅಭಿವೃದ್ಧಿಗೆ ಉತ್ತೇಜನ…

ಹುಣಸೂರು ನಗರಸಭೆ ಚುನಾವಣೆ: 143 ನಾಮಪತ್ರಗಳು ಕ್ರಮಬದ್ಧ
ಮೈಸೂರು ಗ್ರಾಮಾಂತರ

ಹುಣಸೂರು ನಗರಸಭೆ ಚುನಾವಣೆ: 143 ನಾಮಪತ್ರಗಳು ಕ್ರಮಬದ್ಧ

January 30, 2020

ಹುಣಸೂರು, ಜ.29(ಕೆಕೆ)-ಇಲ್ಲಿನ ನಗರಸಭೆಗೆ ಫೆ.9ರಂದು ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಬುಧವಾರ ನಗರಸಭೆ ಕಚೇರಿಯಲ್ಲಿ ನಾಮಪತ್ರ ಪರಿಶೀಲನೆ ಪ್ರಕ್ರಿಯೆ ನಡೆಯಿತು. ಜ.21ರಿಂದ 28ರ ವರೆಗೆ 31 ವಾರ್ಡ್‍ಗಳಿಂದ ವಿವಿಧÀ ಪಕ್ಷಗಳು ಸೇರಿದಂತೆ ಮತ್ತು ಸ್ವತಂತ್ರ ಅಭ್ಯರ್ಥಿಗಳಿಂದ ಸಲ್ಲಿಕೆಯಾಗಿದ್ದ 176 ನಾಮಪತ್ರಗಳಲ್ಲಿ 33 ತಿರಸ್ಕೃತಗೊಂಡು, 143 ನಾಮಪತ್ರಗಳು ಸಿಂಧುವಾದವು. ಈ ಬಗ್ಗೆ ಚುನಾವಣಾಧಿಕಾರಿಯೂ ಆದ ತಹಸಿಲ್ದಾರ್ ಬಸವರಾಜು ಸುದ್ದಿಗಾರರಿಗೆ ಮಾಹಿತಿ ನೀಡಿ, ನಾಮಪತ್ರ ವಾಪಸ್ ಪಡೆಯಲು ಜ.31 ಕಡೇ ದಿನ. ಅಂದೇ ಮಧ್ಯಾಹ್ನ 4 ಗಂಟೆಗೆ ಅಂತಿಮವಾಗಿ ಕಣದಲ್ಲಿ ಉಳಿಯುವ…

ಹೆಚ್.ಡಿ.ಕೋಟೆ ತಾಪಂ ಸ್ಥಾಯಿ ಸಮಿತಿಗೆ ಸುಧಾ ಅಧ್ಯಕ್ಷೆ
ಮೈಸೂರು ಗ್ರಾಮಾಂತರ

ಹೆಚ್.ಡಿ.ಕೋಟೆ ತಾಪಂ ಸ್ಥಾಯಿ ಸಮಿತಿಗೆ ಸುಧಾ ಅಧ್ಯಕ್ಷೆ

January 30, 2020

ಹೆಚ್.ಡಿ.ಕೋಟೆ, ಜ. 29(ಮಂಜು)-ತಾಲೂಕು ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತರಾದ ಸುಧಾ ಬಸವರಾಜು ಅವಿರೋಧವಾಗಿ ಆಯ್ಕೆಯಾದರು. ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ಸಾಮಾಜಿಕ ಹಾಗೂ ಹಣಕಾಸು ಸ್ಥಾಯಿ ಸಮಿತಿಗಳ ಸದಸ್ಯರು ಮತ್ತು ಅಧ್ಯಕ್ಷರ ಚುನಾವಣೆ ಪ್ರಕ್ರಿಯೆಯಲ್ಲಿ ಯಾವ ಸದಸ್ಯರೂ ನಾಮಪತ್ರ ಸಲ್ಲಿಸಲಿಲ್ಲ. ಬಳಿಕ ನಡೆದ ಸಮಿತಿ ಸದಸ್ಯರ ಸ್ಥಾನಗಳಿಗೆ ಕಾಂಗ್ರೆಸ್ ಬೆಂಬಲಿತ ಸ್ಟ್ಯಾನಿ, ಅಂಕನಾಯಕ, ಗೀತಾ, ಸಣ್ಣಮ್ಮ ನಾಮಪತ್ರ ಸಲ್ಲಿಸಿದರೆ, ಜೆಡಿಎಸ್ ಮತ್ತು ಬಿಜೆಪಿ ಪರವಾಗಿ ಟಿ.ವೆಂಕಟೇಶ್, ನಂಜೇಗೌಡ, ರವಿ,…

ಕಳೆಕಟ್ಟಿದ ಸುತ್ತೂರು ಜಾತ್ರಾ ಮಹೋತ್ಸವ
ಮೈಸೂರು ಗ್ರಾಮಾಂತರ

ಕಳೆಕಟ್ಟಿದ ಸುತ್ತೂರು ಜಾತ್ರಾ ಮಹೋತ್ಸವ

January 22, 2020

ಮುಂಜಾನೆಯಿಂದಲೇ ಧಾರ್ಮಿಕ ಕೈಂಕರ್ಯ ಕಂಗೊಳಿಸುತ್ತಿರುವ ಕ್ಷೇತ್ರದಲ್ಲಿ ಜನವೋ-ಜನ ಆರು ದಿನಗಳ ಕಾಲ ಮೇಳೈಸುವ ಕಾರ್ಯಕ್ರಮಗಳು ಭಕ್ತರಿಗೆ ವಿಧ-ವಿಧವಾದ ಪ್ರಸಾದ ವಿತರಣೆ ಸ್ವಚ್ಛತೆಗೆ ಆದ್ಯತೆ, ಪ್ಲಾಸ್ಟಿಕ್‍ಗೆ ನಿಷೇಧ ಮೈಸೂರು, ಜ.21(ರವಿ/ಎಲ್‍ಎಂಡಿ)-ಇಂದಿನಿಂದ ಆರಂಭವಾದ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವಕ್ಕೆ ರಾಜ್ಯದ ವಿವಿಧೆಡೆ ಯಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತಾದಿ ಗಳು ಆಗಮಿಸಿದ್ದಾರೆ. ಎಲ್ಲೆಡೆ ಸಡಗರ ಸಂಭ್ರಮ ಮನೆ ಮಾಡಿದೆ. 6 ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವದಲ್ಲಿ ನಿತ್ಯವೂ ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ….

ಕಲುಷಿತ ನೀರು ಸೇವಿಸಿ: ಅಸ್ವಸ್ಥರ ಸಂಖ್ಯೆ 120ಕ್ಕೆ ಏರಿಕೆ ಕಡಕೊಳಕ್ಕೆ ಶಾಸಕ ಜಿ.ಟಿ.ದೇವೇಗೌಡ ಭೇಟಿ
ಮೈಸೂರು ಗ್ರಾಮಾಂತರ

ಕಲುಷಿತ ನೀರು ಸೇವಿಸಿ: ಅಸ್ವಸ್ಥರ ಸಂಖ್ಯೆ 120ಕ್ಕೆ ಏರಿಕೆ ಕಡಕೊಳಕ್ಕೆ ಶಾಸಕ ಜಿ.ಟಿ.ದೇವೇಗೌಡ ಭೇಟಿ

January 22, 2020

ಕಡಕೊಳ, ಜ.20-ಮೈಸೂರು ತಾಲೂ ಕಿನ ಕಡಕೊಳ ಗ್ರಾಮದ ಜನತಾ ಕಾಲೋನಿ ಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥ ಗೊಂಡವರ ಸಂಖ್ಯೆ 120ಕ್ಕೆ ಏರಿಕೆ ಯಾಗಿದೆ. ಈ ಹಿನ್ನೆಲೆಯಲ್ಲಿ ಮಂಗಳ ವಾರ ಗ್ರಾಮಕ್ಕೆ ಶಾಸಕ ಜಿ.ಟಿ.ದೇವೇಗೌಡ ಭೇಟಿ ನೀಡಿ, ಪರಿಸ್ಥಿತಿ ಅವಲೋಕಿಸಿದರು. ನಂತರ ಪ್ರಾಥಮಿಕ ಆರೋಗ್ಯ ಕೇಂದ್ರ ದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಶಾಸಕರು, ಕಲುಷಿತ ನೀರು ಸೇವನೆಯಿಂದ ಗ್ರಾಮಸ್ಥರಿಗೆ ವಾಂತಿ-ಭೇದಿ ಕಾಣಿಸಿಕೊಂಡಿರುವ ಪ್ರಕರಣ ಸಂಬಂಧ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದರು. ಈ ವೇಳೆ ಗ್ರಾಮಸ್ಥರು, ಮುಡಾ…

ಸಮುದಾಯ ಭವನಗಳು ಜ್ಞಾನ ಕೇಂದ್ರಗಳಾಗಬೇಕು
ಮೈಸೂರು ಗ್ರಾಮಾಂತರ

ಸಮುದಾಯ ಭವನಗಳು ಜ್ಞಾನ ಕೇಂದ್ರಗಳಾಗಬೇಕು

January 22, 2020

ಹೊಸಹೊಳಲು ಅಂಬೇಡ್ಕರ್ ಭವನ ಉದ್ಘಾಟಿಸಿದ ಮಾಜಿ ಸಂಸದ ಆರ್.ಧ್ರುವನಾರಾಯಣ್ ಹೆಚ್.ಡಿ.ಕೋಟೆ, ಜ.21(ಮಂಜು)- ಅಂಬೇಡ್ಕರ್ ಸಮುದಾಯ ಭವನಗಳು ಜ್ಞಾನದ ಚಟುವಟಿಕಾ ಕೇಂದ್ರಗಳಾಗಿರ ಬೇಕು ಎಂದು ಮಾಜಿ ಸಂಸದ ಆರ್. ಧ್ರುವನಾರಾಯಣ್ ತಿಳಿಸಿದರು ಹೊಸಹೊಳಲು ಗ್ರಾಮದಲ್ಲಿ ಅಂಬೇ ಡ್ಕರ್ ಭವನ ಉದ್ಘಾಟಿಸಿ ಅವರು ಮಾತ ನಾಡಿದರು. ಭವನಗಳನ್ನು ಸಾರ್ವ ಜನಿಕರು, ಸಂಘ-ಸಂಸ್ಥೆಯವರು ಸದು ಪಯೋಗಪಡಿಸಿಕೊಳ್ಳಬೇಕು. ಮೂಢ ನಂಬಿಕೆಗಳಿಗೆ ಒಳಗಾಗದೆ ಅಂಬೇಡ್ಕರ್ ಅವರÀ ತತ್ವ ಸಿದ್ಧಾಂತ ಹಾಗೂ ದೇಶದ ಮಹಾನ್ ನಾಯಕರ ಆದರ್ಶಗಳನ್ನು ಮುಂದಿನ ಪೀಳಿಗೆಗೆ ತಿಳಿಸುವಂತಹ ಕಾರ್ಯಕ್ರಮ ರೂಪಿಸಬೇಕು ಎಂದರು….

ಒಂದೇ ವೇದಿಕೆಯಲ್ಲಿ ಕೂತು ಸಿದ್ದರಾಮಯ್ಯ, ಈಶ್ವರಪ್ಪ, ವಿಶ್ವನಾಥ್ ಆತ್ಮೀಯ ಹರಟೆ
ಮೈಸೂರು ಗ್ರಾಮಾಂತರ

ಒಂದೇ ವೇದಿಕೆಯಲ್ಲಿ ಕೂತು ಸಿದ್ದರಾಮಯ್ಯ, ಈಶ್ವರಪ್ಪ, ವಿಶ್ವನಾಥ್ ಆತ್ಮೀಯ ಹರಟೆ

January 21, 2020

ಕೆ.ಆರ್.ನಗರ,ಜ.20(ಭೇರ್ಯ ಮಹೇಶ್) – ಈ ಮೂವರು ರಾಜಕೀಯ ಧುರೀ ಣರು ರಾಜಕೀಯವಾಗಿ ಬದ್ಧ ವೈರಿಗಳು. ಆಗಾಗ ಪರಸ್ಪರ ವಾಗ್ಬಾಣಗಳ ಬಿಡುವವರು. ಒಬ್ಬರು, ಅವರು ದುರಹಂಕಾರಿ ಎಂದರೆ, ಮತ್ತೊಬ್ಬರು, ಅವರಿಗೆ ತಲೆಯೇ ಇಲ್ಲ, ತಲೆ ಇದ್ದರೂ ಮೆದುಳಿಲ್ಲ ಎನ್ನುತ್ತಿದ್ದರು. ಇನ್ನೊ ಬ್ಬರು ರಾಜಕೀಯವಾಗಿ ಅವರಿಗೆ ಪುನ ರ್ಜನ್ಮ ನೀಡಿದ್ದೇ ನಾನು ಅಂದ್ರೆ, ಅವರಿಗೇ ನೆಲೆ ಇರಲಿಲ್ಲ, ನನಗೆಲ್ಲಿಂದ ನೆಲೆ ಕಲ್ಪಿಸಲು ಸಾಧ್ಯ ಎನ್ನುತ್ತಿದ್ದರು. ಇದೆಲ್ಲಾ ಬರೀ ಸ್ಯಾಂಪಲ್. ಆದರೆ ಸದಾ ವಾಗ್ಬಾಣದ ಮೂಲಕ ಇವರ ನಡುವೆ ಎಷ್ಟು ದ್ವೇಷಾಸೂಯೆ…

`ಮನೆ ಬಾಗಿಲಿಗೆ ತಾಲೂಕು ಆಡಳಿತ’ ವಿಶೇಷ ಕಾರ್ಯಕ್ರಮಕ್ಕೆ ಶಾಸಕ ಹೆಚ್.ಪಿ.ಮಂಜುನಾಥ್ ಚಾಲನೆ
ಮೈಸೂರು ಗ್ರಾಮಾಂತರ

`ಮನೆ ಬಾಗಿಲಿಗೆ ತಾಲೂಕು ಆಡಳಿತ’ ವಿಶೇಷ ಕಾರ್ಯಕ್ರಮಕ್ಕೆ ಶಾಸಕ ಹೆಚ್.ಪಿ.ಮಂಜುನಾಥ್ ಚಾಲನೆ

January 21, 2020

ಹುಣಸೂರು, ಜ.20(ಕೆಕೆ)- ಸರ್ವರ್ ಸಮಸ್ಯೆಯಿಂದ ಸರ್ಕಾರಿ ಸೌಲಭ್ಯ ಪಡೆ ಯಲಾಗದೇ ಸಾರ್ವಜನಿಕರು ಕಂಗಾಲಾ ಗಿದ್ದು, ಮುಂದಿನ ದಿನಗಳಲ್ಲಿ ಸಮಸ್ಯೆ ಸರಿಪಡಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಹೆಚ್.ಪಿ.ಮಂಜುನಾಥ್ ಭರವಸೆ ನೀಡಿದರು. ಹುಣಸೂರು ತಾಲೂಕು ಕಟ್ಟೆಮಳಲ ವಾಡಿ ಗ್ರಾಮದ ಅಂಬೇಡ್ಕರ್ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ `ಮನೆ ಬಾಗಿಲಿಗೆ ತಾಲೂಕು ಆಡಳಿತ’ ವಿಶೇಷ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಉಪಚುನಾವಣೆಯ ಸಂದರ್ಭದಲ್ಲಿ ತಾಲೂಕು ಆಡಳಿತವನ್ನು ನಿಮ್ಮ ಮನೆಯ ಬಾಗಿಲಿಗೆ ಕರೆ ತರುತ್ತೇನೆ ಎಂದು ಭರವಸೆ ನೀಡಿದ್ದೆ. ಅದರಂತೆ ಇಂದು…

1 15 16 17 18
Translate »