ಸಮುದಾಯ ಭವನಗಳು ಜ್ಞಾನ ಕೇಂದ್ರಗಳಾಗಬೇಕು
ಮೈಸೂರು ಗ್ರಾಮಾಂತರ

ಸಮುದಾಯ ಭವನಗಳು ಜ್ಞಾನ ಕೇಂದ್ರಗಳಾಗಬೇಕು

January 22, 2020

ಹೊಸಹೊಳಲು ಅಂಬೇಡ್ಕರ್ ಭವನ ಉದ್ಘಾಟಿಸಿದ ಮಾಜಿ ಸಂಸದ ಆರ್.ಧ್ರುವನಾರಾಯಣ್

ಹೆಚ್.ಡಿ.ಕೋಟೆ, ಜ.21(ಮಂಜು)- ಅಂಬೇಡ್ಕರ್ ಸಮುದಾಯ ಭವನಗಳು ಜ್ಞಾನದ ಚಟುವಟಿಕಾ ಕೇಂದ್ರಗಳಾಗಿರ ಬೇಕು ಎಂದು ಮಾಜಿ ಸಂಸದ ಆರ್. ಧ್ರುವನಾರಾಯಣ್ ತಿಳಿಸಿದರು

ಹೊಸಹೊಳಲು ಗ್ರಾಮದಲ್ಲಿ ಅಂಬೇ ಡ್ಕರ್ ಭವನ ಉದ್ಘಾಟಿಸಿ ಅವರು ಮಾತ ನಾಡಿದರು. ಭವನಗಳನ್ನು ಸಾರ್ವ ಜನಿಕರು, ಸಂಘ-ಸಂಸ್ಥೆಯವರು ಸದು ಪಯೋಗಪಡಿಸಿಕೊಳ್ಳಬೇಕು. ಮೂಢ ನಂಬಿಕೆಗಳಿಗೆ ಒಳಗಾಗದೆ ಅಂಬೇಡ್ಕರ್ ಅವರÀ ತತ್ವ ಸಿದ್ಧಾಂತ ಹಾಗೂ ದೇಶದ ಮಹಾನ್ ನಾಯಕರ ಆದರ್ಶಗಳನ್ನು ಮುಂದಿನ ಪೀಳಿಗೆಗೆ ತಿಳಿಸುವಂತಹ ಕಾರ್ಯಕ್ರಮ ರೂಪಿಸಬೇಕು ಎಂದರು.

ತಾಲೂಕಿನಲ್ಲಿ ದಲಿತ ಸಂಘಟನೆಗಳು ಹಾಗೂ ಮುಖಂಡರು ಒಗ್ಗಟ್ಟಿನಿಂದ ಸಂಘ ಟನೆಯಲ್ಲಿ ತೊಡಗಿದ್ದಾರೆ ಎಂದು ಮಾಜಿ ಸಂಸದ ಧ್ರುವನಾರಾಯಣ್ ಮೆಚ್ಚುಗೆ ವ್ಯಕ್ತಪಡಿಸಿದರು.

ತಾಲೂಕಿನಲ್ಲಿ  ಸಮುದಾಯ ಭವನಗಳಿಗೆ ಬೇಡಿಕೆಗಳು ಹೆಚ್ಚು ಇವೆ. ಆದ್ದರಿಂದ ನಾವು ಹಾಗೂ ಶಾಸಕ ದಿ.ಚಿಕ್ಕಮಾದು ಅರೊಂದಿಗೆ ಈ ಹಿಂದೆ ಭವನಗಳ ನಿರ್ಮಾಣಕ್ಕೆ ಸಾಕಷ್ಟು ಅನುದಾನ ತಂದಿದ್ದೇವೆ. ಸರಗೂರು, ಹಂಪಾಪುರ, ಅಂತರಸಂತೆ ಅಂಬೇಡ್ಕರ್ ಭವನ ಕಾಮಗಾರಿಗಳು ಸುಮಾರು 15 ವರ್ಷಗಳಿಂದ ಕುಂಠಿತವಾಗಿವೆ. ಅವು ಗಳಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿಸಲಾಗುವುದು ಎಂದರು.

ಹೆಚ್.ಡಿ.ಕೋಟೆ ಪಟ್ಟಣದ ಅಂಬೇ ಡ್ಕರ್ ಭವನಕ್ಕೆ ಈಗಾಗಲೇ 2 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿಸಿ ದ್ದೇವೆ. ಸದ್ಯ ಭವನ ಎಲ್ಲಾ ರೀತಿಯಲ್ಲೂ ವ್ಯವಸ್ಥಿತವಾಗಿದೆ. ಯಾವುದೇ ಸರ್ಕಾರಿ ಕಾರ್ಯಕ್ರಮಗಳು ನಡೆಯಬೇಕಿದ್ದರೂ ಅದು ಆ ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಅನಿಲ್ ಚಿಕ್ಕಮಾದು ಮಾತ ನಾಡಿದರು.  ಸಾರನಾಥ ಬುದ್ಧ ವಿಹಾರದ ಮಾತಾ ಗೌತಮಿ ಬಂತೇಜಿ, ಬೆಂಗಳೂರು ನಾಗಸೇನಾ ಬುದ್ಧ ವಿಹಾರದ ಭಿಕ್ಷುಣಿ ಬುದ್ಧಮ್ಮ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು.

ಮಾಜಿ ಜಿಪಂ ಉಪಾಧ್ಯಕ್ಷೆ ನಂದಿನಿ, ಪುರಸಭಾ ಸದಸ್ಯರಾದ ಹೆಚ್.ಸಿ.ನರಸಿಂಹ ಮೂರ್ತಿ, ಪ್ರೇಮ್ ಸಾಗರ್, ಜೆಡಿಎಸ್ ಮುಖಂಡ ವಾಸು,  ಗ್ರಾಪಂ ಅಧ್ಯಕ್ಷೆ ಸುಲೋ ಚನಾ ಮಂಜು, ಪಿಡಿಓ ಮಹೇಶ, ವೆಂಕಟೇಶ, ನಿಂಗರಾಜು, ಬಸವರಾಜು ಕೃಷ್ಣ, ಅಣ್ಣಯ್ಯ, ನಾಗಮ್ಮ ದೊಡ್ಡಮ್ಮ ಹಾಜರಿದ್ದರು.

Translate »