ಕಲುಷಿತ ನೀರು ಸೇವಿಸಿ: ಅಸ್ವಸ್ಥರ ಸಂಖ್ಯೆ 120ಕ್ಕೆ ಏರಿಕೆ ಕಡಕೊಳಕ್ಕೆ ಶಾಸಕ ಜಿ.ಟಿ.ದೇವೇಗೌಡ ಭೇಟಿ
ಮೈಸೂರು ಗ್ರಾಮಾಂತರ

ಕಲುಷಿತ ನೀರು ಸೇವಿಸಿ: ಅಸ್ವಸ್ಥರ ಸಂಖ್ಯೆ 120ಕ್ಕೆ ಏರಿಕೆ ಕಡಕೊಳಕ್ಕೆ ಶಾಸಕ ಜಿ.ಟಿ.ದೇವೇಗೌಡ ಭೇಟಿ

January 22, 2020

ಕಡಕೊಳ, ಜ.20-ಮೈಸೂರು ತಾಲೂ ಕಿನ ಕಡಕೊಳ ಗ್ರಾಮದ ಜನತಾ ಕಾಲೋನಿ ಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥ ಗೊಂಡವರ ಸಂಖ್ಯೆ 120ಕ್ಕೆ ಏರಿಕೆ ಯಾಗಿದೆ. ಈ ಹಿನ್ನೆಲೆಯಲ್ಲಿ ಮಂಗಳ ವಾರ ಗ್ರಾಮಕ್ಕೆ ಶಾಸಕ ಜಿ.ಟಿ.ದೇವೇಗೌಡ ಭೇಟಿ ನೀಡಿ, ಪರಿಸ್ಥಿತಿ ಅವಲೋಕಿಸಿದರು.

ನಂತರ ಪ್ರಾಥಮಿಕ ಆರೋಗ್ಯ ಕೇಂದ್ರ ದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಶಾಸಕರು, ಕಲುಷಿತ ನೀರು ಸೇವನೆಯಿಂದ ಗ್ರಾಮಸ್ಥರಿಗೆ ವಾಂತಿ-ಭೇದಿ ಕಾಣಿಸಿಕೊಂಡಿರುವ ಪ್ರಕರಣ ಸಂಬಂಧ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದರು.

ಈ ವೇಳೆ ಗ್ರಾಮಸ್ಥರು, ಮುಡಾ ನಿರ್ಮಿ ಸಿರುವ ಒಳಚರಂಡಿಯ ಸೆಪ್ಟಿಕ್ ಟ್ಯಾಂಕ್ ನಿಂದ ಬರುವ ನೀರು ಕೊಳವೆ ಬಾವಿಗೆ ಸೇರುತ್ತಿದೆ. ಈ ನೀರನ್ನು ಸೇವಿಸಿಯೇ ಜನರು ಅಸ್ವಸ್ಥಗೊಂಡಿದ್ದಾರೆ ಎಂದು ದೂರಿದರು.

ಕೂಡಲೇ ವೈಜ್ಞಾನಿಕ ರೀತಿಯಲ್ಲಿ ಒಳ ಚರಂಡಿ ನಿರ್ಮಾಣ ಮಾಡಿಸಿಕೊಡಬೇಕು. ಗ್ರಾಮಕ್ಕೆ ಓವರ್‍ಹೆಡ್ ಟ್ಯಾಂಕ್ ನಿರ್ಮಿಸಿ, ಕಬಿನಿ ನೀರು ಪೂರೈಸಲು ಕ್ರಮ ಕೈಗೊಳ್ಳ ಬೇಕು ಎಂದು ಮನವಿ ಮಾಡಿದರು.

ಇದಕ್ಕೆ ಸ್ಪಂದಿಸಿದ ಶಾಸಕರು, ಮುಡಾ ಆಯುಕ್ತ ಕಾಂತರಾಜು ಹಾಗೂ ಜಿಪಂ ಅಭಿಯಂತರರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿ ದರು. ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರ ಜೊತೆಯೂ ಮಾತನಾಡಿ, ಕಡಕೊಳ ಗ್ರಾಮಕ್ಕೆ ಅಗತ್ಯ ವೈದ್ಯಕೀಯ ಸೌಲಭ್ಯ ಕಲ್ಪಿಸಲು ಸೂಚಿಸಿದರು. ಬಳಿಕ ಆಸ್ಪತ್ರೆ ಹಾಗೂ ಅಸ್ವಸ್ಥರ ಮನೆಗಳಿಗೆ ಭೇಟಿ ನೀಡಿದ ಜಿ.ಟಿ.ದೇವೇ ಗೌಡರು, ಆರೋಗ್ಯ ವಿಚಾರಿಸಿ ಕುಟುಂಬಸ್ಥರಿಗೆ ಧೈರ್ಯ ತುಂಬಿದರು.

ಈ ಸಂದರ್ಭದಲ್ಲಿ ತಾಲೂಕು ವೈದ್ಯಾ ಧಿಕಾರಿ ಮಹದೇವಪ್ರಸಾದ್, ಡಿಟಿಓ ರವಿ ಕುಮಾರ್, ತಾಪಂ ಇಓ ಕೃಷ್ಣಕುಮಾರ್, ಗ್ರಾಪಂ ಅಧ್ಯಕ್ಷ ರಮೇಶ್, ತಾಪಂ ಸದಸ್ಯ ಶ್ರೀಕಂಠ, ಕನ್ನಡ ಗೆಳೆಯರ ಬಳಗದ ಸಂಚಾಲಕ ಕಡಕೊಳ ಕುಮಾರಸ್ವಾಮಿ, ಗ್ರಾಪಂ ಸದಸ್ಯರಾದ ಮುಖಂಡ ಗೆಜ್ಜಗಳ್ಳಿ ಲೋಕೇಶ್, ಪಿಡಿಓ ಶಾಂತಮ್ಮ, ಗ್ರಾಮದ ಮುಖಂಡರಾದ ರಂಗಪ್ಪ, ಯಲ್ಲಪ್ಪನಾಯಕ್, ನಂಜಪ್ಪ, ನಾಗರಾಜ್, ಸ್ವಾಮಿ, ನಾಯಕ್, ಮಾದೇಶ್ ಮುಂತಾದವ ರಿದ್ದರು. ಕಳೆದ ಕೆಲ ದಿನಗಳಿಂದ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ 8 ಮಕ್ಕಳು ಹಾಗೂ 25 ಮಹಿಳೆಯರು ಸೇರಿದಂತೆ 48 ಮಂದಿಗೆ ವಾಂತಿ ಭೇದಿ ಕಾಣಿಸಿಕೊಂಡು ಗ್ರಾಮದ ಸಮುದಾಯ ಕೇಂದ್ರ ಸೇರಿದಂತೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಹೆಚ್ಚುವರಿಗೆ ಚಿಕಿತ್ಸೆಗಾಗಿ ಮೂವರು ಮೈಸೂರಿನ ಕೆ.ಆರ್.ಆಸ್ವತ್ರೆಗೆ ದಾಖಲು ಮಾಡಲಾಗಿತ್ತು. ಸದ್ಯ ಆರೋಗ್ಯ ಇಲಾಖೆ ಅಧಿಕಾರಿಗಳು ಗ್ರಾಮದಲ್ಲೇ ಬೀಡು ಬಿಟ್ಟಿದ್ದಾರೆ.

Translate »