ಒಂದೇ ವೇದಿಕೆಯಲ್ಲಿ ಕೂತು ಸಿದ್ದರಾಮಯ್ಯ, ಈಶ್ವರಪ್ಪ, ವಿಶ್ವನಾಥ್ ಆತ್ಮೀಯ ಹರಟೆ
ಮೈಸೂರು ಗ್ರಾಮಾಂತರ

ಒಂದೇ ವೇದಿಕೆಯಲ್ಲಿ ಕೂತು ಸಿದ್ದರಾಮಯ್ಯ, ಈಶ್ವರಪ್ಪ, ವಿಶ್ವನಾಥ್ ಆತ್ಮೀಯ ಹರಟೆ

January 21, 2020

ಕೆ.ಆರ್.ನಗರ,ಜ.20(ಭೇರ್ಯ ಮಹೇಶ್) – ಈ ಮೂವರು ರಾಜಕೀಯ ಧುರೀ ಣರು ರಾಜಕೀಯವಾಗಿ ಬದ್ಧ ವೈರಿಗಳು. ಆಗಾಗ ಪರಸ್ಪರ ವಾಗ್ಬಾಣಗಳ ಬಿಡುವವರು. ಒಬ್ಬರು, ಅವರು ದುರಹಂಕಾರಿ ಎಂದರೆ, ಮತ್ತೊಬ್ಬರು, ಅವರಿಗೆ ತಲೆಯೇ ಇಲ್ಲ, ತಲೆ ಇದ್ದರೂ ಮೆದುಳಿಲ್ಲ ಎನ್ನುತ್ತಿದ್ದರು. ಇನ್ನೊ ಬ್ಬರು ರಾಜಕೀಯವಾಗಿ ಅವರಿಗೆ ಪುನ ರ್ಜನ್ಮ ನೀಡಿದ್ದೇ ನಾನು ಅಂದ್ರೆ, ಅವರಿಗೇ ನೆಲೆ ಇರಲಿಲ್ಲ, ನನಗೆಲ್ಲಿಂದ ನೆಲೆ ಕಲ್ಪಿಸಲು ಸಾಧ್ಯ ಎನ್ನುತ್ತಿದ್ದರು. ಇದೆಲ್ಲಾ ಬರೀ ಸ್ಯಾಂಪಲ್. ಆದರೆ ಸದಾ ವಾಗ್ಬಾಣದ ಮೂಲಕ ಇವರ ನಡುವೆ ಎಷ್ಟು ದ್ವೇಷಾಸೂಯೆ ಇರ ಬಹುದು… ಇವರು ಮೊದಲಿನಿಂದಲೂ ಹೀಗೇನಾ… ಮುಂದೆಯೂ ಇವರು ಬದ್ಧ ವೈರಿಗಳಾಗಿಯೇ ಇರುತ್ತಾರೆ… ಹೀಗೆಲ್ಲಾ ಯೋಚಿಸುವವರು ಬೇಸ್ತು ಬೀಳುವುದು ಗ್ಯಾರಂಟಿ. ಅದಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಾಲಿ ಸಚಿವ ಕೆ.ಎಸ್. ಈಶ್ವರಪ್ಪ ಹಾಗೂ ಮಾಜಿ ಸಚಿವ ಹೆಚ್. ವಿಶ್ವನಾಥ್ ಸಂಗಮವೇ ಸಾಕ್ಷಿ. ಒಬ್ಬರು ಕಾಂಗ್ರೆಸ್ ನಾಯಕರು, ಮತ್ತಿ ಬ್ಬರು ಬಿಜೆಪಿ ನಾಯಕರು. ಈ ಮೂವರು ಒಂದು ವೇದಿಕೆ ಏರುವುದೇ ಇಲ್ಲ ಎಂಬ ನಂಬಿಕೆ ಸ್ವತಃ ಕಾರ್ಯಕ್ರಮ ಆಯೋಜಕರಿಗೆ ಇದ್ದಂತಿಲ್ಲ ಎಂಬುದು ಆಹ್ವಾನ ಪತ್ರಿಕೆ ನೋಡಿದ್ದವರಿಗೆಲ್ಲಾ ಅನ್ನಿಸದೇ ಇರದು. ಆದರೆ ಅವರ ಅನಿಸಿಕೆ ಸುಳ್ಳಾಗಿದೆ. ಈ ಮೂವರೂ ಒಂದೇ ವೇದಿಕೆ ಏರಿ ಭಾನು ವಾರ ದಾಖಲೆ ಬರೆದಿದ್ದಾರೆ. ನೆರೆದ ಜನತೆಯ ಸಂತೋಷಕ್ಕೆ ಪಾರವೇ ಇಲ್ಲದಂತೆ ಮಾಡಿ ದ್ದಾರೆ. ಒಟ್ಟಾರೆ ಇಡೀ ಗ್ರಾಮದಲ್ಲಿ ಹಬ್ಬ ಆಚರಣೆಗೂ ಈ ಮೂವರು ನಾಯಕರು ಕಾರಣರಾಗಿದ್ದಾರೆ. ಅಂತಹ ಅಪರೂಪದ ಸಮ್ಮಿಲನಕ್ಕೆ ಸಾಕ್ಷಿಯಾಗಿದ್ದು ಕೆ.ಆರ್.ನಗರ ತಾಲೂಕು ದೊಡ್ಡಕೊಪ್ಪಲು ಗ್ರಾಮ. ಈ ನಾಯಕರು ಒಗ್ಗೂಡಿದ್ದು ಮಹಾನ್ ಸ್ವಾತಂತ್ರ್ಯ ಹೋರಾಟಗಾರ, ಬ್ರಿಟಿಷರಿಗೆ ಸಿಂಹಸ್ವಪ್ನ ವಾಗಿದ್ದ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾ ವರಣದಂತಹ ಪವಿತ್ರ ಕಾರ್ಯಕ್ರಮದಲ್ಲಿ.

ಕೆ.ಆರ್.ನಗರ ತಾಲೂಕು ದೊಡ್ಡ ಕೊಪ್ಪಲು ಗ್ರಾಮದಲ್ಲಿ ನಡೆದ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ ಕಾರ್ಯ ಕ್ರಮದಲ್ಲಿ ಈ ಮೂವರು ರಾಜಕೀಯ ಮುಖಂಡರು ವೇದಿಕೆಯಲ್ಲಿ ಅಕ್ಕಪಕ್ಕವೇ ಕುಳಿತು ಆತ್ಮೀಯವಾಗಿ ಮಾತನಾಡುತ್ತಾ, ಆಗಾಗ ಹಾಸ್ಯ ಚಟಾಕಿ ಹಾರಿಸುತ್ತಾ, ನಗುತ್ತಾ ನೆರೆದ ಸಾವಿರಾರು ಜನರ ಗಮನ ಸೆಳೆ ದರು. ಅಲ್ಲದೇ ಸಿದ್ದರಾಮಯ್ಯ ಮತ್ತು ಈಶ್ವ ರಪ್ಪ ಗ್ರಾಮಕ್ಕೆ ಒಂದೇ ಕಾರಿನಲ್ಲಿ ಬಂದಾಗ ಗ್ರಾಮಸ್ಥರು ಸಂಭ್ರಮದಿಂದ ಸ್ವಾಗತಿಸಿ ದರು. ಇಡೀ ಕಾರ್ಯಕ್ರಮದುದ್ದಕ್ಕೂ ಈ ಮೂವರು ನಾಯಕರು ರಾಜಕೀಯ ವೈಷಮ್ಯ, ಗೊಂದಲ ಮರೆತು ನಗು ನಗುತ್ತಾ ಮಾತ ನಾಡುತ್ತಿದ್ದುದು ಕಂಡು ಬಂತು. ಜಿ.ಪಂ ಸದಸ್ಯ ಡಿ.ರವಿಶಂಕರ್, ಮಾಜಿ ಸಂಸದ ವಿರುಪಾಕ್ಷಪ್ಪ, ಮಾಜಿ ಶಾಸಕರಾದ ಎಂ.ಕೆ. ಸೋಮಶೇಖರ್, ಕೆ.ಸಿ.ಪುಟ್ಟ ಸಿದ್ದಶೆಟ್ಟಿ, ಕೆಪಿಸಿಸಿ ಕಾರ್ಯಕಾರಿಣ ಸದಸ್ಯ ದೊಡ್ಡ ಸ್ವಾಮೇಗೌಡ, ಜಿ.ಪಂ ಮಾಜಿ ಅಧ್ಯಕ್ಷ ಮರಿಗೌಡ, ಮಾಜಿ ಉಪಾಧ್ಯಕ್ಷ ಎ.ಎಸ್. ಚನ್ನಬಸಪ್ಪ, ಸದಸ್ಯರಾದ ಅಚ್ಚುತಾನಂದ, ಅಮಿತ್.ವಿ.ದೇವರಹಟ್ಟಿ, ತಾ.ಪಂ ಅಧ್ಯಕ್ಷ ಎಂ.ನಾಗರಾಜು, ಉಪಾ ಧ್ಯಕ್ಷೆ ಸಿದ್ದಮ್ಮ, ಮಾಜಿ ಸದಸ್ಯ ನಾಗಣ್ಣ, ಎಐಸಿಸಿ ವಕ್ತಾರೆ ಐಶ್ವರ್ಯ ಮಹದೇವ್, ಪುರಸಭೆ ಸದಸ್ಯ ರಾದ ಕೋಳಿ ಪ್ರಕಾಶ್, ನಟರಾಜು, ಮುಖಂಡ ರಾದ ಡಿ.ಕೆ.ರಾಜೇಗೌಡ, ಕಾಂತರಾಜು, ಜಾಣೇಗೌಡ, ಅಡಗೂರು ಗ್ರಾ.ಪಂ. ಅಧ್ಯಕ್ಷ ಡಿ.ರಾಜೇಗೌಡ, ಸದಸ್ಯರಾದ ಅಂಬಿಕಾ ಮಹ ದೇವ್, ಸೌಮ್ಯ ರವಿ, ಅನ್ನಪೂರ್ಣ, ವನ ಜಾಕ್ಷಿ, ಶ್ರೀನಿವಾಸ್, ಎಂ.ಎಸ್.ಮಹದೇವ್, ತಾಲೂಕು ಕುರುಬರ ಸಂಘದ ಅಧ್ಯಕ್ಷ ಶಿವಣ್ಣ ಸೇರಿದಂತೆ ಸಂಗೊಳ್ಳಿ ರಾಯಣ್ಣ ಯುವಕರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Translate »