ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ಅಗತ್ಯ
ಮೈಸೂರು ಗ್ರಾಮಾಂತರ

ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ಅಗತ್ಯ

February 4, 2020

ತಿ.ನರಸೀಪುರ, ಫೆ.3(ಎಸ್‍ಕೆ)-ಸಮಾಜ ದಲ್ಲಿ ಜವಾಬ್ದಾರಿಯುತ ಪ್ರಜೆಯಾಗಿ ರೂಪುಗೊಳ್ಳಲು ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ಅಗತ್ಯ ಎಂದು ವರುಣಾ ಶಾಸಕ ಡಾ.ಎಸ್.ಯತೀಂದ್ರ ಅಭಿಪ್ರಾಯಪಟ್ಟರು.

ಪಟ್ಟಣದ ಟಿಎಪಿಸಿಎಂಎಸ್ ರೈತ ಭವನ ಆವರಣದಲ್ಲಿ ನಡೆದ ಎನ್‍ಕೆಎಫ್ ಪಬ್ಲಿಕ್ ಪೂರ್ವ ಮತ್ತು ಹಿರಿಯ ಪ್ರಾಥಮಿಕ ಶಾಲೆಯ 11ನೇ ವಾರ್ಷಿಕೋತ್ಸವ ಹಾಗೂ ಸಾಧಕರ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಾಮಾಜಿಕ ಜವಾಬ್ದಾರಿ ಮರೆ ಯಾಗುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡಬೇಕಾದ ಜವಾ ಬ್ದಾರಿ ಶಿಕ್ಷಕರ ಮೇಲಿದೆ. ವಿದ್ಯಾರ್ಥಿಗಳ ಪ್ರತಿಭೆ ಯನ್ನು ಗುರುತಿಸಿ ಪ್ರೋತ್ಸಾಹಿಸಿದ್ದಲ್ಲಿ ಸಾಧನೆ ಮಾಡಲು ಸಹಕಾರಿಯಾಗುತ್ತದೆ ಎಂದರು.

ಶಾಸಕ ಎಂ.ಅಶ್ವಿನ್‍ಕುಮಾರ್ ಮಾತ ನಾಡಿದರು. ಸಮಾರಂಭದ ಸಾನ್ನಿಧ್ಯ ವಹಿಸಿದ್ದ ವಾಟಾಳು ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.

ಕಾರ್ಯಕ್ರಮದಲ್ಲಿ ವಿವಿಧ ವಾಹನ ಚಾಲನೆ ಯಲ್ಲಿ ವಿಶ್ವ ಚಾಂಪಿಯನ್ ಪಡೆದು ಗಿನ್ನಿಸ್ ದಾಖಲೆ ಸೇರಿರುವ ರಿಫಾ ತಸ್ಕಿನ್ ಸೇರಿ ದಂತೆ ಕುರುಬೂರು ನಿರ್ವಾಣಸ್ವಾಮಿ ಪ್ರೌಢಶಾಲೆಯ ರಾಷ್ಟ್ರೀಯ ಖೋ ಖೋ ಕ್ರೀಡಾಪಟುಗಳ ತಂಡ, ಕಳೆದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿನಿ ಯಶಸ್ವಿನಿ ರಾಜ್, ಸಾರ್ವಜನಿಕ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ.ಗೋವಿಂದಶೆಟ್ಟಿ ಹಾಗೂ ಪುರಸಭೆ ಹಿರಿಯ ಆರೋಗ್ಯ ಅಧಿಕಾರಿ ಚೇತನ್‍ಕುಮಾರ್‍ರನ್ನು ಸನ್ಮಾನಿಸ ಲಾಯಿತು. ಎನ್.ಕೆ.ಎಫ್ ಫೌಂಡೇಶನ್ ಟ್ರಸ್ಟ್ ಅಧ್ಯಕ್ಷ ಎನ್.ಕೆ.ಫರೀದ್, ಶಾಲೆಯ ಮುಖ್ಯಸ್ಥ ರಾದ ಪುರಸಭೆ ಸದಸ್ಯ ಮಹಮ್ಮದ್ ಸಯೀದ್, ಉಜ್ಮಾನೆಗನಿ, ಬಿಇಓ ಎಸ್.ಸ್ವಾಮಿ, ಸಮಾಜ ಸೇವಕ ಮಹಮದ್ ನಸ್ರುಲ್ಲಾ, ಪುರಸಭಾ ಸದಸ್ಯರಾದ ಎಲ್. ಮಂಜುನಾಥ್, ಎನ್.ಸೋಮು, ತಾಪಂ ಸದಸ್ಯರಾದ ಬಿ. ಸಾಜಿದ್ ಅಹಮದ್, ಎಂ.ರಮೇಶ್, ಕೆಪಿಸಿಸಿ ಅಲ್ಪಸಂಖ್ಯಾತ ಸಂಚಾಲಕ ಬಿ.ಮನ್ಸೂರ್ ಆಲಿ, ದೈಹಿಕ ಪರಿವೀಕ್ಷಕ ಮಹಾಂತಪ್ಪ ನಾಗೂರ, ಮುಖಂಡರಾದ ಡಣಾಯಕನಪುರ ಸೋಮಣ್ಣ, ಶಂಭುದೇವನಪುರ ರಮೇಶ್ ಸೇರಿದಂತೆ ಶಿಕ್ಷಕ ವೃಂದದವರು ಹಾಜರಿದ್ದರು.

Translate »