ಬೆಳ್ಳಂಬೆಳಿಗ್ಗೆ ಶ್ರೀರಂಗಪಟ್ಟಣ ಬಳಿ ಹೆದ್ದಾರಿ ದರೋಡೆ
ಮೈಸೂರು

ಬೆಳ್ಳಂಬೆಳಿಗ್ಗೆ ಶ್ರೀರಂಗಪಟ್ಟಣ ಬಳಿ ಹೆದ್ದಾರಿ ದರೋಡೆ

February 3, 2020

ಶ್ರೀರಂಗಪಟ್ಟಣ, ಫೆ.2(ವಿನಯ್ ಕಾರೇಕುರ)- ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಭಾನುವಾರ ಬೆಳ್ಳಂಬೆಳಿಗ್ಗೆ ದರೋಡೆಕೋರರು ಕೇವಲ 15 ನಿಮಿಷದಲ್ಲಿ ಎರಡು ದರೋಡೆ ನಡೆಸಿದ್ದು, ಕಾರು ಮತ್ತು ಬೈಕನ್ನು ಅಪಹರಿಸಿದ್ದಾರೆ.

ಶ್ರೀರಂಗಪಟ್ಟಣ ನಿವಾಸಿ, ಟಿಪ್ಪರ್ ಚಾಲಕ ಮಣಿಕುಮಾರ್ ಎಂಬುವರು ತಮ್ಮ ಬೈಕನ್ನು ಕಳೆದುಕೊಂಡರೆ, ಕೊಡಗಿನ ಸುಂಟಿಕೊಪ್ಪ ನಿವಾಸಿ ವೋಲಾ ಕಾರು ಚಾಲಕ ರೈಮಂಡ್ ಡಿಸೋಜ ಅವರ ಕಾರನ್ನು ದರೋಡೆ ಕೋರರು ಅಪಹರಿಸಿದ್ದಾರೆ.

ಭಾನುವಾರ ಮುಂಜಾನೆ 5.30ರ ವೇಳೆಯಲ್ಲಿ ಕ್ವಾರಿಯೊಂದರ ಟಿಪ್ಪರ್ ಚಾಲಕನಾಗಿರುವ ಶ್ರೀರಂಗ ಪಟ್ಟಣದ ಮಣಿಕುಮಾರ್, ತಮ್ಮ ಪ್ಯಾಷನ್ ಪ್ರೋ (ಕೆಎ 07 ಯು 5413) ಟಿ.ಎಂ. ಹೊಸೂರಿಗೆ ತೆರಳುತ್ತಿದ್ದಾಗ ಎರಡು ಬೈಕ್‍ಗಳಲ್ಲಿ ಬಂದ ಐವರು ದರೋಡೆಕೋರರು ಗೌರಿಪುರ ಬಳಿ ಅವರ ಬೈಕನ್ನು ಅಡ್ಡಗಟ್ಟಿ ಮಚ್ಚು ಮತ್ತು ಲಾಂಗ್‍ಗಳನ್ನು ತೋರಿಸಿ ಬೆದರಿಸಿದ್ದಲ್ಲದೇ, ಅವರ ಮೇಲೆ ಹಲ್ಲೆ ನಡೆಸಿ ಬೈಕ್, ಮೊಬೈಲ್ ಮತ್ತು 500 ರೂ.ಗಳನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ.

ಇದಾದ ಕೇವಲ ಹದಿನೈದೇ ನಿಮಿಷಗಳಲ್ಲಿ ಗೌರಿ ಪುರದಿಂದ ಸುಮಾರು 10 ಕಿ.ಮೀ. ದೂರವಿರುವ ಕೋಡಿಶೆಟ್ಟಿಪುರ ಬಳಿ ಕೊಡಗಿನ ವೋಲೋ ಕಾರು ಚಾಲಕ ತನ್ನ ಸ್ವಿಫ್ಟ್ ಕಾರಿನಲ್ಲಿ (ಕೆಎ 12 ಬಿ 7987) ತೆರಳುತ್ತಿದ್ದಾಗ ಅಪಘಾತವಾದಂತೆ ರಸ್ತೆಗೆ ಅಡ್ಡ ಲಾಗಿ ಬೈಕ್ ಮಲಗಿಸಿ, ಅದರ ಪಕ್ಕದಲ್ಲೇ ಓರ್ವ ಬಿದ್ದಿರುವಂತೆ ನಟಿಸುತ್ತಿದ್ದ. ಅಪಘಾತವಾಗಿದೆ ಎಂದು ನಂಬಿದ ರೈಮಂಡ್ ಡಿಸೋಜ ಅವರು ಸಹಾಯ ಮಾಡುವ ಉದ್ದೇಶದಿಂದ ಕಾರನ್ನು ರಸ್ತೆಯ ಅಂಚಿ ನಲ್ಲಿ ನಿಲ್ಲಿಸುತ್ತಿದ್ದಂತೆಯೇ ರಸ್ತೆಯಲ್ಲಿ ಬಿದ್ದಿದ್ದ ವನೂ ಮೇಲೆದ್ದನಲ್ಲದೇ ಮರೆಯಾಗಿ ನಿಂತಿದ್ದ ಇತರ ನಾಲ್ವರೂ ದರೋಡೆಕೋರರು ಅವರನ್ನು ಸುತ್ತು ವರಿದು ಹಲ್ಲೆ ನಡೆಸಿ ಅವರ ಬಳಿ ಇದ್ದ ಮೊಬೈಲ್, 1500 ರೂ. ನಗದು, ಕಾರನ್ನು ಅಪಹರಿಸಿದ್ದಾರೆ.

ಸುಂಟಿಕೊಪ್ಪದ ರೈಮಂಡ್ ಡಿಸೋಜ ಬೆಂಗ ಳೂರಿನಲ್ಲಿ ವೋಲೋ ಕಂಪನಿಯ ಚಾಲಕನಾಗಿ ಕೆಲಸ ಮಾಡುತ್ತಿದ್ದು, ಕಾರ್ಯ ನಿಮಿತ್ತ ಸುಂಟಿ ಕೊಪ್ಪಕ್ಕೆ ಬಂದು ಬೆಂಗಳೂರಿಗೆ ವಾಪಸ್ಸಾಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಈ ಸಂಬಂಧ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯ ಸಬ್‍ಇನ್ಸ್‍ಪೆಕ್ಟರ್ ಗಿರೀಶ್ ಪ್ರಕರಣ ದಾಖಲಿಸಿ ಕೊಂಡು ತನಿಖೆ ನಡೆಸುತ್ತಿದ್ದಾರೆ. ಹೆದ್ದಾರಿ ದರೋಡೆ ನಡೆದಿದೆ ಎಂಬುದು ತಿಳಿಯುತ್ತಿದ್ದಂತೆಯೇ ಕಾರ್ಯ ಪ್ರವೃತ್ತರಾದ ಜಿಲ್ಲಾ ಎಸ್‍ಪಿ ಪರಶುರಾಮ್ ಅವರು, ದರೋಡೆಕೋರರು ಬೆಂಗಳೂರು ಕಡೆ ತೆರಳಿದ್ದಾರೆ ಎಂಬ ಮಾಹಿತಿ ಪಡೆದು ಮಂಡ್ಯ ಮತ್ತು ಮದ್ದೂರು ಪೊಲೀಸ್ ಠಾಣೆಗಳಿಗೆ ವೈರ್‍ಲೆಸ್ ಮೂಲಕ ಮಾಹಿತಿ ರವಾನಿಸಿ, ಅಲ್ಲಿನ ಪೊಲೀಸರನ್ನು ಎಚ್ಚರಿ ಸಿದ್ದಾರೆ. ತಕ್ಷಣವೇ ಶ್ರೀರಂಗಪಟ್ಟಣ, ಮಂಡ್ಯ ಮತ್ತು ಮದ್ದೂರಿನಲ್ಲಿ ಪೊಲೀಸರು ನಾಕಾ ಬಂದಿ ರಚಿಸಿ ದರೋಡೆಕೋರರನ್ನು ಹಿಡಿ ಯಲು ಪ್ರಯತ್ನಿಸಿದರಾದರೂ, ಅದು ಸಫಲ ವಾಗಲಿಲ್ಲ. ಈ ದರೋಡೆಕೋರರು ಎರಡು ದರೋಡೆ ನಂತರ ಬೆಂಗಳೂರು ಕಡೆಗೆ ಹೆದ್ದಾರಿ ಯಲ್ಲಿ ತೆರಳದೇ, ಗ್ರಾಮೀಣ ಪ್ರದೇಶದ ರಸ್ತೆ ಗಳಲ್ಲಿ ಪರಾರಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

Translate »