ಹುಣಸೂರು ನಗರಸಭೆ ಚುನಾವಣೆ: 143 ನಾಮಪತ್ರಗಳು ಕ್ರಮಬದ್ಧ
ಮೈಸೂರು ಗ್ರಾಮಾಂತರ

ಹುಣಸೂರು ನಗರಸಭೆ ಚುನಾವಣೆ: 143 ನಾಮಪತ್ರಗಳು ಕ್ರಮಬದ್ಧ

January 30, 2020

ಹುಣಸೂರು, ಜ.29(ಕೆಕೆ)-ಇಲ್ಲಿನ ನಗರಸಭೆಗೆ ಫೆ.9ರಂದು ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಬುಧವಾರ ನಗರಸಭೆ ಕಚೇರಿಯಲ್ಲಿ ನಾಮಪತ್ರ ಪರಿಶೀಲನೆ ಪ್ರಕ್ರಿಯೆ ನಡೆಯಿತು. ಜ.21ರಿಂದ 28ರ ವರೆಗೆ 31 ವಾರ್ಡ್‍ಗಳಿಂದ ವಿವಿಧÀ ಪಕ್ಷಗಳು ಸೇರಿದಂತೆ ಮತ್ತು ಸ್ವತಂತ್ರ ಅಭ್ಯರ್ಥಿಗಳಿಂದ ಸಲ್ಲಿಕೆಯಾಗಿದ್ದ 176 ನಾಮಪತ್ರಗಳಲ್ಲಿ 33 ತಿರಸ್ಕೃತಗೊಂಡು, 143 ನಾಮಪತ್ರಗಳು ಸಿಂಧುವಾದವು.

ಈ ಬಗ್ಗೆ ಚುನಾವಣಾಧಿಕಾರಿಯೂ ಆದ ತಹಸಿಲ್ದಾರ್ ಬಸವರಾಜು ಸುದ್ದಿಗಾರರಿಗೆ ಮಾಹಿತಿ ನೀಡಿ, ನಾಮಪತ್ರ ವಾಪಸ್ ಪಡೆಯಲು ಜ.31 ಕಡೇ ದಿನ. ಅಂದೇ ಮಧ್ಯಾಹ್ನ 4 ಗಂಟೆಗೆ ಅಂತಿಮವಾಗಿ ಕಣದಲ್ಲಿ ಉಳಿಯುವ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗುವುದು ಎಂದು ತಿಳಿಸಿದರು.

ನಗರಸಭಾ ಚುನಾವಣೆಯಲ್ಲಿ 20,390 ಪುರುಷರು, 20,749 ಮಹಿಳೆಯರು ಹಾಗೂ ಇತರರು ಸೇರಿದಂತೆ ಒಟ್ಟು 41,140 ಮತದಾರರಿದ್ದಾರೆ. ಫೆ.9ರಂದು ಮತದಾನ ನಡೆಯಲಿದೆ ಎಂದು ತಿಳಿಸಿದರು.

ಕಾಂಗ್ರೆಸ್, ಜೆಡಿಎಸ್ 31 ವಾರ್ಡ್‍ಗಳಲ್ಲಿಯೂ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಬಿಜೆಪಿ 22 ವಾರ್ಡ್‍ಗಳಲ್ಲಿ ಮಾತ್ರ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಎಸ್‍ಡಿಪಿಐ 20, 30, 31ನೇ ವಾರ್ಡ್‍ಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಸಿಪಿಐಎಂ ವಾರ್ಡ್ ನಂ.1ರಲ್ಲಿ ಮಾತ್ರ ತನ್ನ ಅಭ್ಯರ್ಥಿಯನ್ನು ಹಾಕಿದೆ. ಉಳಿದಂತೆ 55 ಅಭ್ಯರ್ಥಿಗಳು ಸ್ವತಂತ್ರವಾಗಿ ಆಯ್ಕೆ ಬಯಸಿ ಕಣಕ್ಕಿಳಿದಿದ್ದಾರೆ. ಈ ಬಾರಿ ರಾಜಕೀಯ ಪಕ್ಷಗಳು ಸ್ಫರ್ಧೆಗೆ ಯುವಜನರನ್ನೇ ಗುರುತಿಸಿರುವುದು ವಿಶೇಷವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಯುವಜನರೇ ಆರಿಸಿ ಬರುವ ನಿರೀಕ್ಷೆ ಇದೆ.

Translate »