ಹೆಚ್.ಡಿ.ಕೋಟೆ ತಾಪಂ ಸ್ಥಾಯಿ ಸಮಿತಿಗೆ ಸುಧಾ ಅಧ್ಯಕ್ಷೆ
ಮೈಸೂರು ಗ್ರಾಮಾಂತರ

ಹೆಚ್.ಡಿ.ಕೋಟೆ ತಾಪಂ ಸ್ಥಾಯಿ ಸಮಿತಿಗೆ ಸುಧಾ ಅಧ್ಯಕ್ಷೆ

January 30, 2020

ಹೆಚ್.ಡಿ.ಕೋಟೆ, ಜ. 29(ಮಂಜು)-ತಾಲೂಕು ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತರಾದ ಸುಧಾ ಬಸವರಾಜು ಅವಿರೋಧವಾಗಿ ಆಯ್ಕೆಯಾದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ಸಾಮಾಜಿಕ ಹಾಗೂ ಹಣಕಾಸು ಸ್ಥಾಯಿ ಸಮಿತಿಗಳ ಸದಸ್ಯರು ಮತ್ತು ಅಧ್ಯಕ್ಷರ ಚುನಾವಣೆ ಪ್ರಕ್ರಿಯೆಯಲ್ಲಿ ಯಾವ ಸದಸ್ಯರೂ ನಾಮಪತ್ರ ಸಲ್ಲಿಸಲಿಲ್ಲ. ಬಳಿಕ ನಡೆದ ಸಮಿತಿ ಸದಸ್ಯರ ಸ್ಥಾನಗಳಿಗೆ ಕಾಂಗ್ರೆಸ್ ಬೆಂಬಲಿತ ಸ್ಟ್ಯಾನಿ, ಅಂಕನಾಯಕ, ಗೀತಾ, ಸಣ್ಣಮ್ಮ ನಾಮಪತ್ರ ಸಲ್ಲಿಸಿದರೆ, ಜೆಡಿಎಸ್ ಮತ್ತು ಬಿಜೆಪಿ ಪರವಾಗಿ ಟಿ.ವೆಂಕಟೇಶ್, ನಂಜೇಗೌಡ, ರವಿ, ಸುಧಾ ಬಸವರಾಜು ನಾಮಪತ್ರ ಸಲ್ಲಿಸಿದರು. ಚುನಾವಣಾಧಿಕಾರಿಯಾಗಿದ್ದ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರಾಮಲಿಂಗಯ್ಯ ಸಮಕ್ಷಮ ಮತದಾನ ಪ್ರಕ್ರಿಯೆ ನಡೆಯಿತು.

ಶಾಸಕ ಅನಿಲ್ ಚಿಕ್ಕಮಾದು, ತಾಪಂ ಅಧ್ಯಕ್ಷೆ ಮಂಜುಳಾ ದೇವಣ್ಣ, ಉಪಾಧ್ಯಕ್ಷೆ ಮಂಜುಳಾ, ಸ್ಥಾಯಿ ಸಮಿತಿ ಅಧ್ಯಕ್ಷ ಗಿರೀಗೌಡ ಸೇರಿದಂತೆ 24 ತಾಪಂ ಸದಸ್ಯರು, 8 ಗ್ರಾಪಂ ನಾಮ ನಿರ್ದೇಶಿತ ಅಧ್ಯಕ್ಷರು ಮತ ಚಲಾಯಿಸಿದರು.

ಸಹಾಯಕ ಚುನಾವಣಾಧಿಕಾರಿಗಳಾದ ರಾಜಕುಮಾರ್, ಕುಮಾರ್, ಶೇಖರ್, ರವೀಂದ್ರ, ಸಂತೋಷ್‍ನಾಗ್, ಪೂರ್ಣಿಮಾ, ವೀರಭದ್ರೇಶ್ವರ ಮತ ಎಣಿಕೆ ಪ್ರಕ್ರಿಯೆ ನಡೆಸಿದರು. ಟಿ.ವೆಂಕಟೇಶ್, ಸ್ಟ್ಯಾನಿ, ಸುಧಾ ಬಸವರಾಜು, ಗೀತಾ, ಸಣ್ಣಮ್ಮ, ನಂಜೇಗೌಡ ಸಮಿತಿಗೆ ಆಯ್ಕೆಯಾಗಿರುವುದಾಗಿ ಘೋಷಿಸಲಾಯಿತು.

ಅಧ್ಯಕ್ಷರ ಸ್ಥಾನದಲ್ಲಿ ಪ್ರಬಲ ಆಕಾಂಕ್ಷಿಗಳಾಗಿದ್ದ ಟಿ.ವೆಂಕಟೇಶ್ ಬಣದಿಂದ ಮೂವರು ಮತ್ತು ಸ್ಟ್ಯಾನಿ ಬಣದ ಮೂವರು ಗೆಲುವು ಸಾಧಿಸಿದ್ದರಿಂದ ಅಧ್ಯಕ್ಷರ ಆಯ್ಕೆ ಮತ್ತೇ ಕಗ್ಗಂಟಾಯಿತು. ಬಹಳಷ್ಟು ಚರ್ಚೆ ಬಳಿಕ ಒಮ್ಮತದ ತೀರ್ಮಾನಕ್ಕೆ ಬರಲಾಗದ ಹಿನ್ನೆಲೆಯಲ್ಲಿ ವೆಂಕಟೇಶ್ ಮತ್ತು ಸ್ಟ್ಯಾನಿ ಹೊರತುಪಡಿಸಿ ಪರಿಶಿಷ್ಟ ಜಾತಿ ಮಹಿಳೆಯರಿಗೆ ಅಧ್ಯಕ್ಷ ಸ್ಥಾನ ನೀಡಲು ಎರಡೂ ಪಕ್ಷಗಳು ಒಪ್ಪಿಗೆ ಸೂಚಿಸಿದವು.

ಮೊದಲ ಆರು ತಿಂಗಳು ಟಿ.ವೆಂಕಟೇಶ್ ಬಣದ ಶಿರಮಳ್ಳಿ ಸುಧಾ ಬಸವರಾಜು, ಆರು ತಿಂಗಳು ಸ್ಟ್ಯಾನಿ ಬಣದ ಹೊಮ್ಮರಗಳ್ಳಿ ಸಣ್ಣಮ್ಮ ಶಿವಯ್ಯ ಅಧ್ಯಕ್ಷರಾಗಿ ಅಧಿಕಾರ ನಡೆಸಲು ತೀರ್ಮಾನಿಸಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ತಾಪಂ ಸದಸ್ಯರಾದ ಗಿರೀಗೌಡ, ಟಿ.ಅಂಕನಾಯಕ, ಶಂಭುಗೌಡ, ಮಹದೇವಸ್ವಾಮಿ, ಚಂದ್ರೇಗೌಡ, ಸಿದ್ದರಾಜು, ಸುಂದರ ನಾಯಕ, ಬಿ.ಸಿ.ರಾಜು, ಲಕ್ಷ್ಮಿ, ಕುಸುಮಾ, ರಾಜಣ್ಣ, ರವಿ, ಸಿದ್ದರಾಜು ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.

ಶಾಸಕ ಅನಿಲ್ ಚಿಕ್ಕಮಾದು, ಮಾಜಿ ಶಾಸಕ ಚಿಕ್ಕಣ್ಣ, ಜಿಪಂ ಸದಸ್ಯ ವೆಂಕಟಸ್ವಾಮಿ, ಜೆಡಿಎಸ್ ಅಧ್ಯಕ್ಷ ರಾಜೇಂದ್ರ ಪುರಸಭಾ ಸದಸ್ಯ ರಾಜು ವಿಶ್ವಕರ್ಮ, ಮಧುಕುಮಾರ್, ಹಿರೇಹಳ್ಳಿ ಹರೀಶ್, ಪುಟ್ಟಬಸವನಾಯಕ, ಶ್ಯಾಮಸುಂದರ್, ಸೋಮಣ್ಣ, ಚಾ.ನಂಜುಂಡ ಮೂರ್ತಿ, ಪರಶಿವ ಸೋಮು, ಚಾ.ಸೋಮಣ್ಡ, ನಾಗರಾಜು, ಸಾಗರೆ ಮಹೇಂದ್ರ, ವಿನೋದ್ ಕೋಟೆ, ಶಿವರಾಜ ದೇವಣ್ಣ, ಬಸವಣ್ಣ, ವೇಣು, ರವಿಕುಮಾರ್, ನರಸಿಂಹೇಗೌಡ, ಗೋಪಾಲಸ್ವಾಮಿ, ನಾಗಣ್ಣ ಮಟಕೆರೆ, ರಾಜೇಶ, ಗೋವಿಂದೇಗೌಡ, ಮಳಲಿ ಶಾಂತ, ಹರೀಶ, ನಾಗನಾಯ್ಕ, ಶಿವಯ್ಯ, ಜಯಪ್ರಕಾಶ್, ಕಾಳಪ್ಪಜಿ, ರವಿ, ಮಹೇಶ ಸೇರಿದಂತೆ ಅನೇಕರು ಹಾಜರಿದ್ದರು.

Translate »