ಕೊಂಡ ಹಾಯುವಾಗ ಬೆಂಕಿಗೆ ಬಿದ್ದ ಭಕ್ತ
ಮೈಸೂರು ಗ್ರಾಮಾಂತರ

ಕೊಂಡ ಹಾಯುವಾಗ ಬೆಂಕಿಗೆ ಬಿದ್ದ ಭಕ್ತ

March 30, 2022

ತಿ.ನರಸೀಪುರ,ಮಾ.೨೯-ಕೊಂಡ ಹಾಯುವಾಗ ಭಕ್ತನೋರ್ವ ಆಯತಪ್ಪಿ ಬೆಂಕಿಗೆ ಬಿದ್ದು ಗಾಯ ಗೊಂಡಿರುವ ಘಟನೆ ತಾಲೂಕಿನ ರಂಗ ಸಮುದ್ರ ಗ್ರಾಮದಲ್ಲಿ ಸೋಮವಾರ ತಡ ರಾತ್ರಿ ನಡೆದಿದೆ.

ತಾಲೂಕಿನ ರಂಗ ಸಮುದ್ರದಲ್ಲಿ ಹುಚ್ಚ ಗಮ್ಮ ದೇವಿ ಮತ್ತು ಲಕ್ಷಿ÷್ಮದೇವಿ ಹಬ್ಬದ ಪ್ರಯುಕ್ತ ಕೊಂಡೋ ತ್ಸವ ಆಯೋಜಿಸ ಲಾಗಿತ್ತು. ಈ ವೇಳೆ ಅನೇಕ ಭಕ್ತರು ಕೊಂಡ ಹಾಯ್ದರು. ಈ ವೇಳೆ ಕೊಂಡ ಹಾಯುವಾಗ ಭಕ್ತನೋರ್ವ ಆಯತಪ್ಪಿ ಬಿದ್ದು ಗಾಯಗೊಂಡಿದ್ದಾರೆ. ಕೂಡಲೇ ನೆರೆದಿದ್ದ ಭಕ್ತರು, ಭಕ್ತನನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಕೊಂಡಕ್ಕೆ ಬಿದ್ದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಹಾಮಾರಿ ಕೊರೊನಾ ಹಿನ್ನೆಲೆ ಕಳೆದ ಎರಡು ವರ್ಷಗಳಿಂದ ಕೊಂಡೋತ್ಸವ ನಿಲ್ಲಿಸಲಾಗಿತ್ತು. ಆದರೆ, ಈ ವರ್ಷ ಅದ್ಧೂರಿಯಾಗಿ ಕೊಂಡೋತ್ಸವ ಆಯೋಜನೆ ಮಾಡಿದ್ದರಿಂದ ಸುತ್ತಮುತ್ತಲ ಗ್ರಾಮ ಸ್ಥರು ಕೊಂಡೋತ್ಸವದಲ್ಲಿ ಭಾಗಿಯಾಗಿದ್ದರು.

Translate »