೨೫ ವರ್ಷದ ಯುವತಿ ಜೊತೆ ವಿವಾಹವಾಗಿದ್ದ ೪೫ ವರ್ಷದ ಶಂಕರಣ್ಣ ಆತ್ಮಹತ್ಯೆ
ಮೈಸೂರು

೨೫ ವರ್ಷದ ಯುವತಿ ಜೊತೆ ವಿವಾಹವಾಗಿದ್ದ ೪೫ ವರ್ಷದ ಶಂಕರಣ್ಣ ಆತ್ಮಹತ್ಯೆ

March 30, 2022

ತುಮಕೂರು, ಮಾ.೨೯- ಕಳೆದ ವರ್ಷ ೪೫ ವರ್ಷದ ವ್ಯಕ್ತಿ ಜೊತೆಗೆ ೨೫ರ ಯುವತಿ ಮದುವೆಯಾಗಿದ್ದ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿತ್ತು. ಆದರೀಗ ಈ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಶಂಕರಣ್ಣ(೪೫) ಮೃತ ದುರ್ದೆÊವಿಯಾಗಿದ್ದು, ಕಳೆದ ವರ್ಷ ಕುಣ ಗಲ್ ತಾಲೂಕಿನ ಚೌಡನಕುಪ್ಪೆ ಗ್ರಾಮದ ಬಳಿಯಿರುವ ಅಕ್ಕಿಮರಿಪಾಳ್ಯದ ಶಂಕರಣ್ಣ ಮತ್ತು ಮೇಘನಾ ಅವರ ಮದುವೆ ನಡೆದಿತ್ತು.

ಆದರೆ ಮದುವೆಯಾದ ಆರು ತಿಂಗ ಳಲ್ಲಿಯೇ ಶಂಕರಣ್ಣ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಮೂರ್ನಾಲ್ಕು ದಿನ ದಿಂದ ಗಂಡ, ಹೆಂಡತಿ ನಡುವೆ ಜಗಳ ನಡೆಯುತ್ತಿತ್ತು. ಹೀಗಾಗಿ ಕೋಪ ಮಾಡಿಕೊಂಡು ಸೋಮವಾರ ಮನೆ ಬಿಟ್ಟು ಹೋಗಿದ್ದ ಶಂಕರಣ್ಣ ನವರು, ಕುಣ ಗಲ್ ತಾಲೂಕಿನ ಅಕ್ಕಿಮರಿ ಪಾಳ್ಯದಲ್ಲಿದ್ದ ತಮ್ಮ ತೋಟದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಅತ್ತೆ-ಸೊಸೆ ನಡುವೆ ನಿರಂತರವಾಗಿ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಇವರಿ ಬ್ಬರನ್ನು ಸಮಾಧಾನಪಡಿಸಲು ಶಂಕರಣ್ಣ ಎಷ್ಟು ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲ. ಹಾಗಾಗಿ ಏನಾದರೂ ಮಾಡಿಕೊಳ್ಳಿ, ನಾನೇ ಮನೆ ಬಿಟ್ಟು ಹೋಗ್ತೀನಿ ಎಂದು ಹೇಳಿ ಹೋದ ಶಂಕರಣ್ಣ, ತಮ್ಮ ತೋಟದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ೨೦೨೧ರಲ್ಲಿ ಮದುವೆಯಾಗಿದ್ದ ಈ ದಂಪತಿ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. ಸಂತೆ ಮಾವತ್ತೂರು ಗ್ರಾಮದ ನಿವಾಸಿಯಾಗಿದ್ದ ಮೇಘನಾಗೆ ಈ ಮುನ್ನ ಬೇರೆಯವ ರೊಂದಿಗೆ ಮದುವೆಯಾಗಿತ್ತು ಎನ್ನಲಾಗಿದೆ. ಶಂಕರಣ್ಣ ಅವರ ತಾಯಿ ನೀಡಿದ ದೂರಿನ ಮೇರೆಗೆ ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಮೇಘನಾ ಈಗ ೪ ತಿಂಗಳ ಗರ್ಭಿಣ .

 

Translate »