ಮದ್ದೂರು ಬಳಿ ಶ್ರೀ ಬಸವೇಶ್ವರ ಸ್ವಾಮಿ ಕೊಂಡೋತ್ಸವದಲ್ಲಿ ದುರಂತ ಮನೆ ಛಾವಣ ತಡೆಗೋಡೆ ಕುಸಿದು ಮಹಿಳೆ ಸಾವು
ಮೈಸೂರು

ಮದ್ದೂರು ಬಳಿ ಶ್ರೀ ಬಸವೇಶ್ವರ ಸ್ವಾಮಿ ಕೊಂಡೋತ್ಸವದಲ್ಲಿ ದುರಂತ ಮನೆ ಛಾವಣ ತಡೆಗೋಡೆ ಕುಸಿದು ಮಹಿಳೆ ಸಾವು

March 30, 2022

೪೦ ಮಂದಿ ಸ್ಥಿತಿ ಗಂಭೀರ; ಮದ್ದೂರಿನ ಹುಲಿಗೆರೆಪುರ ಜಾತ್ರೆಯಲ್ಲಿ ದುರಂತ
ಗಾಯಾಳುಗಳು ಮಂಡ್ಯ, ಮೈಸೂರು, ಮದ್ದೂರು ಆಸ್ಪತ್ರೆಗೆ ದಾಖಲು
ಗ್ರಾಮದಲ್ಲಿ ಬಸವೇಶ್ವರ ಸ್ವಾಮಿ ಕೊಂಡೋತ್ಸವ ಸ್ಥಗಿತ, ಸ್ಮಶಾನ ಮೌನ
ಉಸ್ತುವಾರಿ ಸಚಿವ ಗೋಪಾಲಯ್ಯ, ನಿಖಿಲ್, ಇತರ ಗಣ್ಯರಿಂದ ಆರ್ಥಿಕ ನೆರವು
ಮೃತ ಹಾಗೂ ಗಾಯಾಳುಗಳ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರದ ಭರವಸೆ

ಮದ್ದೂರು,ಮಾ.೨೯(ಮೋಹನ್‌ರಾಜ್)- ಶ್ರೀ ಬಸವೇಶ್ವರ ಸ್ವಾಮಿ ಕೊಂಡೋತ್ಸವ ಸಂದರ್ಭದಲ್ಲಿ ಮನೆ ಛಾವಣ ತಡೆ ಗೋಡೆ ಕುಸಿದು ಹತ್ತು ಮಕ್ಕಳು ಸೇರಿದಂತೆ ೪೦ ಮಂದಿ ಗಾಯಗೊಂಡು, ಓರ್ವ ಮಹಿಳೆ ಮೃತಪಟ್ಟಿರುವ ಘಟನೆ ತಾಲೂಕಿನ ಹುಲಿಗೆರೆಪುರ ಗ್ರಾಮದಲ್ಲಿ ಮಂಗಳವಾರ ಮುಂಜಾನೆ ಸಂಭವಿಸಿದೆ.
ಮುAಜಾನೆ ೫.೩೦ರ ಸುಮಾರಿಗೆ ಗ್ರಾಮದ ಬಸವೇಶ್ವರಸ್ವಾಮಿ ಜಾತ್ರೆ ಅಂಗವಾಗಿ ಕೊಂಡೋ ತ್ಸವ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಕೊಂಡ ಹಾಯುವ ದೃಶ್ಯ ವೀಕ್ಷಿಸಲು ದೇವಾ ಲಯ ಸಮೀಪವಿರುವ ಪಟೇಲ್ ಸಿದ್ದೇಗೌಡ ಎಂಬುವರ ಮನೆಯ ತಾರಸಿಗೆ ಭಾರೀ ಸಂಖ್ಯೆಯಲ್ಲಿ ಜನ ಏರಿದ್ದರು. ಇವರೆಲ್ಲಾ ಮನೆಯ ಸಜ್ಜೆಯ ಮೇಲೆಯೂ ನಿಂತು ಕೊಂಡೋತ್ಸವ ವೀಕ್ಷಿಸುವಾಗ ತಾರಸಿಯ ತಡೆಗೋಡೆ ಕುಸಿದಿದೆ. ಗ್ರಾಮದ ದೇವರಸ ಎಂಬುವರ ಪತ್ನಿ ಪುಟ್ಟಲಿಂಗಮ್ಮ(೫೦) ಘಟನೆಯಲ್ಲಿ ಮೃತಪಟ್ಟಿದ್ದು, ೪೦ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.

ಗ್ರಾಮದ ಕೀರ್ತಿ, ಆಶಾ, ಪುಟ್ಟತಾಯಮ್ಮ, ಚಂದನ, ರೇಣುಕಾ, ಹರ್ಷಿತಾ, ಸರೋಜಮ್ಮ, ಪಲ್ಲವಿ, ಮಾದೇಶ್‌ಕುಮಾರ್, ಶೋಭಾ, ಅನಿತಾ, ಕೆಂಪಮ್ಮ, ನಿಂಗಮ್ಮ, ಸುಧಾ, ಪೂಜಾಶ್ರೀ, ಬಿಂದುಶ್ರೀ ಸೇರಿದಂತೆ ಒಟ್ಟು ೪೦ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಮದ್ದೂರು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಸರೋ ಜಮ್ಮ ಹಾಗೂ ಚಂದನ ಎಂಬುವರಿಗೆ ತೀವ್ರ ಗಾಯಗಳಾಗಿ ರುವ ಹಿನ್ನೆಲೆಯಲ್ಲಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿದೆ.

ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಜಿಲ್ಲಾಧಿಕಾರಿ ಅಶ್ವತಿ, ಜಿ.ಪಂ. ಸಿಇಓ ದಿವ್ಯಪ್ರಭು, ಎಸ್‌ಪಿ ಎನ್.ಯತೀಶ್, ತಹಸೀಲ್ದಾರ್ ಟಿ.ಎನ್.ನರಸಿಂಹಮೂರ್ತಿ, ಡಿವೈ ಎಸ್‌ಪಿ ಲಕ್ಷಿö್ಮನಾರಾಯಣಪ್ರಸಾದ್ ಭೇಟಿ ನೀಡಿ, ಮಾಹಿತಿ ಸಂಗ್ರಹಿಸಿ ಗಾಯಾಳುಗಳ ಚಿಕಿತ್ಸೆಗೆ ಮುಂದಾದರು. ಬಳಿಕ ಜಿಲ್ಲಾ ಉಸ್ತು ವಾರಿ ಸಚಿವ ಗೋಪಾಲಯ್ಯ, ಸ್ಥಳೀಯ ಶಾಸಕ ಡಿ.ಸಿ.ತಮ್ಮಣ್ಣ, ಮನ್‌ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ ಮದ್ದೂರು ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳುಗಳ ಕುಶಲೋಪರಿ ವಿಚಾರಿಸಿ ಮಂಡ್ಯದ ಜಿಲ್ಲಾ ಸ್ಪತ್ರೆಗೆ ತೆರಳಿ ಸೂಕ್ತ ಚಿಕಿತ್ಸಾ ವ್ಯವಸ್ಥೆಗೆ ಡಿಎಚ್‌ಓ ಡಾ.ಧನಂಜಯ ಸೇರಿದಂತೆ ಇತರೆ ಅಧಿಕಾರಿಗಳಿಗೆ ಸೂಚನೆ ನೀಡಿದರು.


ಹುಲಿಗೆರೆಪುರಕ್ಕೆ ಜಾ.ದಳ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಶಾಸಕ ಡಿ.ಸಿ.ತಮ್ಮಣ್ಣ, ಜಿ.ಪಂ. ಮಾಜಿ ಅಧ್ಯಕ್ಷ ಎಸ್.ಗುರುಚರಣ್ ಮತ್ತಿತರ ಮುಖಂಡರು ಭೇಟಿ ನೀಡಿ, ಸಾಂತ್ವನ ಹೇಳಿದರು. ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಸರಕಾರದ ಪರವಾಗಿ ಮೃತ ಪುಟ್ಟತಾಯಮ್ಮ ಕುಟುಂಬ ಸದಸ್ಯರಿಗೆ ಸ್ಥಳದಲ್ಲೇ ೧ ಲಕ್ಷ ರೂ.ಗಳ ನಗದು ಪರಿಹಾರ ವಿತರಿಸಿ ಮಾತನಾಡಿ, ಸದರಿ ಅವಘಡವನ್ನು ವಿಶೇಷ ಪ್ರಕರಣವೆಂದು ಪರಿಗಣ ಸಿ ಸರ್ಕಾರದಿಂದ ೫ ಲಕ್ಷ ರೂ.ಗಳನ್ನು ಪರಿಹಾರ ನೀಡುವ ಸಂಬAಧ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಆರ್.ಅಶೋಕ್ ಅವರೊಂದಿಗೆ ಚರ್ಚಿ ಸಿರುವುದಾಗಿ ತಿಳಿಸಿದರು. ತೀವ್ರವಾಗಿ ಗಾಯಗೊಂಡವರನ್ನು ಬೆಂಗ ಳೂರು, ಮೈಸೂರು ಆಸ್ಪತ್ರೆಗಳಿಗೆ ರವಾನಿಸುವ ಸಂಬAಧ ಮತ್ತು ಉಚಿತವಾಗಿ ಚಿಕಿತ್ಸೆ ನೀಡುವಂತೆ ಸಂಬAಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದು, ಗಾಯಾಳುಗಳಿಗೆ ಪರಿಹಾರ ನೀಡುವ ಸಂಬAಧ ಮುಖ್ಯಮಂತ್ರಿಯೊಟ್ಟಿಗೆ ಚರ್ಚಿಸುವುದಾಗಿ ಹೇಳಿದರು. ಶಾಸಕ ಡಿ.ಸಿ.ತಮ್ಮಣ್ಣ ಮಾತನಾಡಿ, ಮೃತಪಟ್ಟ ಪುಟ್ಟಲಿಂಗಮ್ಮ ಅವರ ಪುತ್ರರೋರ್ವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಉದ್ಯೋಗ ನೀಡುವಂತೆ ಮತ್ತು ಸರ್ಕಾರದಿಂದ ಸಿಗುವ ಪರಿಹಾರವನ್ನು ಕೊಡಿಸಿ ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸುವಂತೆ ಸಚಿವರಲ್ಲಿ ಮನವಿ ಮಾಡಿದರು.

ಸ್ಥಳೀಯರ ನೆರವು: ಹುಲಿಗೆರೆಪುರ ಗ್ರಾಮಕ್ಕೆ ಭೇಟಿ ನೀಡಿದ ನಿಖಿಲ್‌ಕುಮಾರಸ್ವಾಮಿ ಮೃತರ ಅಂತಿಮ ದರ್ಶನ ಪಡೆದು, ಜೆಡಿಎಸ್ ಪಕ್ಷದಿಂದ ೧ ಲಕ್ಷ ರೂ. ಪರಿಹಾರ
ವಿತರಿಸಿದರಲ್ಲದೆ ಮನ್‌ಮುಲ್ ನಿರ್ದೇಶಕರೂ ಆದ ಬಿಜೆಪಿ ಮುಖಂಡ ಎಸ್.ಪಿ.ಸ್ವಾಮಿ ೨೫ ಸಾವಿರ ರೂ., ಜಿ.ಪಂ. ಮಾಜಿ ಅಧ್ಯಕ್ಷ ಎಸ್. ಗುರುಚರಣ್ ೨೫ ಸಾವಿರ ರೂ. ನಗದನ್ನು ಮೃತ ಪುಟ್ಟಲಿಂಗಮ್ಮ ಕುಟುಂಬ ಸದಸ್ಯರಿಗೆ ನೀಡಿದರು. ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಕದಲೂರು ಉದಯ್ ಗಾಯಗೊಂಡ ೫೦ ಮಂದಿಗೆ ಚಿಕಿತ್ಸಾ ವೆಚ್ಚಕ್ಕೆಂದು ತಲಾ ೧೦ ಸಾವಿರ ರೂ.ಗಳಂತೆ ೫ ಲಕ್ಷ ರೂ.ಗಳನ್ನು ವಿತರಿಸಿದರು.

ಸೂತಕದ ಛಾಯೆ: ಸೋಮವಾರ ಹಾಗೂ ಮಂಗಳವಾರ ನಿಗಧಿಯಾಗಿದ್ದ ಹುಲಿಗೆರೆಪುರ ಗ್ರಾಮದ ಬಸವೇಶ್ವರಸ್ವಾಮಿ ದೇವರ ಹಬ್ಬದ ಹಿನ್ನೆಲೆಯಲ್ಲಿ ವಿವಿಧೆಡೆಗಳಿಂದ ಸಾವಿರಾರು ಮಂದಿ ಗ್ರಾಮಕ್ಕೆ ಆಗಮಿಸಿ ಗ್ರಾಮದಲ್ಲಿ ಹಬ್ಬದ ಸಂಭ್ರಮ ನೆಲೆಸಿತ್ತು. ಅವಘಡ ಸಂಭವಿಸುತ್ತಿದ್ದAತೆ ಕೊಂಡೋತ್ಸವ ರದ್ದುಗೊಳಿಸಿದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಸೂತಕದ ವಾತಾವರಣ ಕಂಡುಬAದಿತು.

 

Translate »