ಮೈಸೂರಲ್ಲಿ ಸಂಘಟನೆಗಳ ಭಾರೀ ಪ್ರತಿಭಟನಾ ಮೆರವಣಗೆ
ಮೈಸೂರು

ಮೈಸೂರಲ್ಲಿ ಸಂಘಟನೆಗಳ ಭಾರೀ ಪ್ರತಿಭಟನಾ ಮೆರವಣಗೆ

March 30, 2022

ಆಶಾ, ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರು, ರೈತರು, ವಿವಿಧ ಕಾರ್ಮಿಕರು ಸೇರಿದಂತೆ ಸಾವಿರಾರು ಮಂದಿ ಭಾಗಿ
ಮೈಸೂರು,ಮಾ.೨೯(ಪಿಎಂ)- ಕೇಂದ್ರ ಸರ್ಕಾರದ ನೀತಿಗಳನ್ನು ಖಂಡಿಸಿ, ಕೇಂದ್ರ ಕಾರ್ಮಿಕ ಸಂಘಟನೆ ಗಳು ಕರೆ ನೀಡಿದ್ದ ಎರಡು ದಿನಗಳ ದೇಶವ್ಯಾಪಿ ಮುಷ್ಕ ರದ ಅಂಗವಾಗಿ ಮಂಗಳವಾರ ಮೈಸೂರು ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣ ಗೆ ನಡೆಸಲಾಯಿತು.

ಅಗತ್ಯ ವಸ್ತುಗಳ ಬೆಲೆ ನಿಯಂತ್ರಿಸಬೇಕು. ೪ ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯಬೇಕು. ಖಾಸಗೀಕರಣ ಕೈಬಿಡ ಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ನಗರದಲ್ಲಿಂದು ನಡೆದ ಬೃಹತ್ ಪ್ರತಿಭಟನಾ ಮೆರವಣ ಗೆಯಲ್ಲಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಬಿಸಿಯೂಟ ಕಾರ್ಯ ಕರ್ತೆಯರು, ರೈತರು ಸೇರಿದಂತೆ ವಿವಿಧ ಕಾರ್ಮಿಕರು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಪ್ರತಿಭಟನೆ ಸಾಗಿದ ಮಾರ್ಗದುದ್ದಕ್ಕೂ ಕೆಂಪು ಧ್ವಜ ಗಳು ಪ್ರತಿಭಟನಾಕಾರರ ಕೈಯಲ್ಲಿ ರಾರಾಜಿಸಿದವು. ಅಲ್ಲದೆ, ಕೇಂದ್ರ ಮತ್ತು ರಾಜ್ಯ ಸರ್ಕಾರದ
ವಿರುದ್ಧ ಘೋಷಣೆಗಳು ಮೊಳಗಿದವು. ನಗರದ ಗಾಂಧಿ ಚೌಕದಲ್ಲಿ ಚಾಲನೆ ಪಡೆದ ಪ್ರತಿಭಟನಾ ಮೆರವಣ ಗೆ, ಮಕ್ಕಾಜಿ ಚೌಕ, ಒಲಂಪಿಯಾ ಥಿಯೇಟರ್ ರಸ್ತೆ, ಸಯ್ಯಾಜಿರಾವ್ ರಸ್ತೆ, ಸರ್ಕಾರಿ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ವೃತ್ತ, ರ‍್ವಿನ್ ರಸ್ತೆ, ನೆಹರು ವೃತ್ತ, ಅಶೋಕ ರಸ್ತೆ, ದೊಡ್ಡ ಗಡಿಯಾರ ವೃತ್ತದ ಮಾರ್ಗದಲ್ಲಿ ಸಾಗಿತು. ಅಂತಿಮವಾಗಿ ಪುರಭವನ ಆವರಣ ತಲುಪಿ, ಮೆರವಣ ಗೆ ಅಂತ್ಯಗೊAಡಿತು.

ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ನೇತೃತ್ವದಲ್ಲಿ ಮೈಸೂರಿನಲ್ಲಿ ಮುಷ್ಕರ ನಡೆದಿದ್ದು, ಮೆರವಣ ಗೆಯಲ್ಲಿ ವಿವಿಧ ಘೋಷಣೆಗಳ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರದ ನೀತಿಗಳನ್ನು ತೀವ್ರವಾಗಿ ಖಂಡಿಸಲಾಯಿತು.

ನಂಜನಗೂಡಿನ ಎಸ್‌ಜಿಬಿಪಿಎಲ್ ಯುನೈಟೆಡ್ ಎಂಪ್ಲಾಯೀಸ್ ಯೂನಿಯನ್, ಕರ್ನಾಟಕ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಕಾರ್ಮಿಕರ ಸಂಘ, ಬಿಎಸ್‌ಎನ್‌ಎಲ್ ಎಂಪ್ಲಾಯೀಸ್ ಯೂನಿಯನ್, ಎಟಿ ಅಂಡ್ ಎಸ್ ಇಂಡಿಯಾ ವಕರ‍್ಸ್ ಯೂನಿ ಯನ್, ಮಾಯಾಬಂದರ್ ಡರ‍್ಸ್ ಎಂಪ್ಲಾಯೀಸ್ ಅಸೋಸಿಯೇನ್ಸ್, ನಂಜನ ಗೂಡಿನ ಕೆಟಿಪಿಎಲ್ ಯುನೈಟೆಡ್ ಎಂಪ್ಲಾಯೀಸ್ ಯೂನಿಯನ್, ವಿಮಾ ನೌಕರರ ಒಕ್ಕೂಟ, ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ, ಗಾರ್ಮೆಂಟ್ ಲೇಬರ್ ಯೂನಿಯನ್ ಮೈಸೂರು ಜಿಲ್ಲಾ ಸಮಿತಿ, ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್, ಕರ್ನಾಟಕ ರಾಜ್ಯ ರೈತ ಸಂಘ, ರಾಷ್ಟಿçÃಯ ಮಜ್ದೂರ್ ಕಾಂಗ್ರೆಸ್ ಮೈಸೂರು ಜಿಲ್ಲಾ ಸಮಿತಿ, ಸೈಡರ್ ಫೋರ್ಜ್ರೋಸ್ಸಿ ಎಂಪ್ಲಾಯೀಸ್ ಯೂನಿಯನ್, ಕರ್ನಾಟಕ ರಾಜ್ಯ ಸಂಯುಕ್ತ ವಿಶ್ವವಿದ್ಯಾನಿಲಯಗಳ ಸ್ವಚ್ಛತಾ ಕಾರ್ಯ ನೌಕರರ ಸಂಘ ಸೇರಿದಂತೆ ಮೊದಲಾದ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನಾ ಮೆರವಣ ಗೆಯಲ್ಲಿ ಪಾಲ್ಗೊಂಡಿದ್ದರು.

ಪುರಭವನ ಹೊರಾವರಣದಲ್ಲಿ ಬಹಿರಂಗ ಸಭೆ: ಪ್ರತಿಭಟನಾ ಮೆರವಣ ಗೆ ಬಳಿಕ ಮೈಸೂರಿನ ಪುರಭವನದ ಹೊರಾವರಣದಲ್ಲಿ ಬೃಹತ್ ಬಹಿರಂಗ ಸಭೆ ನಡೆಸಲಾಯಿತು. ಈ ವೇಳೆ ಮಾತನಾಡಿದ ಮುಖಂಡರು ಕೇಂದ್ರ ಮತ್ತು ರಾಜ್ಯಗಳ ಸರ್ಕಾರಗಳು ರೈತ, ಕಾರ್ಮಿಕ ಮತ್ತು ಜನವಿರೋಧಿ ನೀತಿ ಅನುಸರಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಂದ್ ಸ್ವರೂಪದ ಮುಷ್ಕರ: ಕಾರ್ಮಿಕ ಮುಖಂಡರೂ ಆದ ಸಿಪಿಐ ಹಿರಿಯ ಮುಖಂಡ ಹೆಚ್.ಆರ್.ಶೇಷಾದ್ರಿ ಮಾತನಾಡಿ, ಕಳೆದ ಮುಷ್ಕರದಲ್ಲಿ ದೇಶಾದ್ಯಂತ ೨೦ ಕೋಟಿ ಜನ ಪಾಲ್ಗೊಂಡಿದ್ದರು. ಈ ಮುಷ್ಕರದಲ್ಲಿ ಇದಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ದುಡಿಯುವ ವರ್ಗ ಭಾಗವಹಿಸಿದೆ. ೧೩ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಈ ಮುಷ್ಕರ ಹಮ್ಮಿಕೊಂಡಿದ್ದು, ಬೇಡಿಕೆಗಳು ಕೇವಲ ಕಾರ್ಮಿಕ ವರ್ಗಕ್ಕೆ ಸೀಮಿತಗೊಂಡಿಲ್ಲ. ದೇಶದ ಎಲ್ಲಾ ದುಡಿಯುವ ವರ್ಗಕ್ಕೆ ಈ ಬೇಡಿಕೆಗಳು ಅನ್ವಯಿಸಲಿವೆ. ೯ರಿಂದ ೧೦ ರಾಜ್ಯಗಳಲ್ಲಿ ಈ ಮುಷ್ಕರ ಬಂದ್ ಸ್ವರೂಪ ಪಡೆದು ಯಶಸ್ವಿಯಾಗಿದೆ ಎಂದು ತಿಳಿಸಿದರು.

ಅಗತ್ಯ ವಸ್ತುಗಳ ಕಾಯ್ದೆಗೆ ತಿದ್ದುಪಡಿ ತಂದು ಪ್ರತಿಯೊಂದು ಮನೆಗೆ ಬೇಕಾದ ಅಗತ್ಯ ಪದಾರ್ಥಗಳನ್ನು ಕಾಯ್ದೆಯಿಂದ ಹೊರಗಿಡಲಾಗಿದೆ. ಇದರ ದುಷ್ಪರಿಣಾಮ ಸಾಮಾನ್ಯರು, ದುಡಿಯುವ ವರ್ಗದ ಮೇಲಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಬೇಸಿಗೆ ಬಿಸಿಲಿಗಿಂತಲೂ ಇಂದು ಸಾಮಾನ್ಯ ಜನತೆಯನ್ನು ಸುಡುವಂತಾಗಿದೆ. ಅಡುಗೆ ಎಣ್ಣೆ ಲೀಟರ್‌ಗೆ ೧೯೦ ರೂ.ಗೆ ಹೆಚ್ಚಳವಾಗಿದೆ. ಖರೀದಿಸುವ ಶಕ್ತಿ ಸಾಮಾನ್ಯ ಜನತೆಯಲ್ಲಿ ಕ್ರಮೇಣ ಕಡಿಮೆಯಾಗುತ್ತಿದೆ ಎಂದು ಕಿಡಿಕಾರಿದರು.

ಕಾರ್ಪೊರೇಟ್ ಕಂಪನಿಗಳು, ವರ್ತಕರು ಬೆಲೆ ನಿಯಂತ್ರಿಸುವ ಪರಿಸ್ಥಿತಿ ನಿರ್ಮಾಣ ಮಾಡಲಾಗಿದೆ. ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಅಬಕಾರಿ ಸುಂಕದಿAದ ಕಳೆದ ೭ ವರ್ಷಗಳಲ್ಲಿ ಕೇಂದ್ರ ಸರ್ಕಾರದ ಖಜಾನೆಗೆ ಸುಮಾರು ೨೬ ಲಕ್ಷ ಕೋಟಿ ರೂ. ಸಂದಾಯವಾಗಿದೆ. ಆದರೆ ಜನ ಬೆಲೆ ಏರಿಕೆಯಿಂದ ಸಂಕಷ್ಟ ಅನುಭವಿಸುವಂತಾಗಿದೆ. ಇಂದಿನ ಬಿಜೆಪಿ ಕೇಂದ್ರ ಸರ್ಕಾರ ಸಂಸತ್‌ನಲ್ಲಿ ಯಾವುದೇ ಚರ್ಚೆ ಇಲ್ಲದೆ, ಕಾರ್ಪೊರೇಟ್ ಕಂಪನಿಗಳ ಪರವಾಗಿ ಕಾನೂನುಗಳಿಗೆ ತಿದ್ದುಪಡಿ ತರುತ್ತಿದೆ. ಇದು ಸಂವಿಧಾನ ವಿರೋಧಿ ಕ್ರಮ ಎಂದು ಖಂಡಿಸಿದರು.

ಹಣದುಬ್ಬರ ಬೆಲೆ ಏರಿಕೆಗೆ ನೇರವಾಗಿ ಸಂಬAಧಿಸಿದೆ. ಆದರೆ ಇದನ್ನು ಸರ್ಕಾರ ನಿಯಂತ್ರಿಸಲು ಮುಂದಾಗುತ್ತಿಲ್ಲ. ಕಳೆದ ಹಲವು ವರ್ಷಗಳಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ. ಅದಕ್ಕೆ ಬದಲಾಗಿ ಅಪಹಾಸ್ಯ ಹೇಳಿಕೆಗಳನ್ನು ಜನಪ್ರತಿನಿಧಿಗಳು ನೀಡುತ್ತಿದ್ದಾರೆ. ಜಾರ್ಖಂಡ್‌ನ ಮಂತ್ರಿಯೋ ಯಾರೋ `ಬೆಲೆ ಏರಿಕೆ ಅಥವಾ ಹಣದುಬ್ಬರಕ್ಕೆ ಕಾರಣ ಬಾಲ್ಯ ವಿವಾಹ ಎಂದು ಹೇಳಿಕೆ ನೀಡಿದ್ದಾರೆ. ಬಾಲ್ಯ ವಿವಾಹ ಮತ್ತು ಬೆಲೆ ಏರಿಕೆಗೆ ಏನು ಸಂಬAಧ ಎಂಬುದು ನನಗೆ ಇನ್ನೂ ಅರ್ಥವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಸಿಐಟಿಯು ರಾಜ್ಯ ಕಾರ್ಯದರ್ಶಿ ಸುನಂದಾ, ಸಿಐಟಿಯು ಮುಖಂಡ ಜಯರಾಮ್, ಜೆಸಿಟಿಯು ಸಂಚಾಲಕ ಎನ್.ಕೆ.ದೇವದಾಸ್, ದಸಂಸ ಮುಖಂಡ ಚೋರನಹಳ್ಳಿ ಶಿವಣ್ಣ, ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ ಮೇಟಿ ಮತ್ತಿತರರು ಪಾಲ್ಗೊಂಡಿದ್ದರು.

 

ಮುಷ್ಕರದ ಆಕ್ರೋಶ ರಾಜಕೀಯ ತೀರ್ಮಾನವಾಗಿ ಪರಿವರ್ತನೆ ಆಗಲಿ
ಮೈಸೂರು,ಮಾ.೨೯(ಪಿಎಂ)-ಮುಷ್ಕರದ ಆಕ್ರೋಶ ಒಂದು ರಾಜಕೀಯ ತೀರ್ಮಾನವಾಗಿ ಪರಿವರ್ತನೆಯಾಗಬೇಕು ಎಂದು ಕಾರ್ಮಿಕ ಮುಖಂಡ ಹೆಚ್.ಆರ್.ಶೇಷಾದ್ರಿ ಕರೆ ನೀಡಿದರು.

ಮುಷ್ಕರದ ಆಕ್ರೋಶ ಒಂದು ರಾಜಕೀಯ ತೀರ್ಮಾನವಾಗಿ ಪರಿವರ್ತನೆಯಾಗುವ ಮೂಲಕ ಸಂದರ್ಭ ಬಂದಾಗ ನಿಮ್ಮ ತೀರ್ಪು ನೀಡಿ. ಸಂಸತ್ತು ಮತ್ತು ವಿಧಾನಸಭೆಗೆ ಸೂಕ್ತವಾದವರನ್ನು ಚುನಾಯಿಸಿ, ಆಗ ನಿಮ್ಮ ಸಮಸ್ಯೆಗಳು ಸ್ವಲ್ಪವಾದರೂ ಕಡಿಮೆಯಾಗಲಿವೆ ಎಂದು ತಿಳಿಸಿದರು.
ಸಂಸತ್ ಮತ್ತು ಶಾಸನಸಭೆಗಳಲ್ಲಿ ಯಾವುದೇ ಚರ್ಚೆ ಇಲ್ಲದೆ ಕಾನೂನು ಜಾರಿಗೆ ಅನುಮೋದನೆ ನೀಡಲಾಗುತ್ತಿದೆ. ೨೯ ಕಾರ್ಮಿಕ ಪರ ಕಾಯ್ದೆಗಳನ್ನು ಕೇವಲ ೪ ಸಂಹಿತೆ ಆಗಿ ಮಾಡಲಾಯಿತು. ಇದು ಜಾರಿಯಾದರೆ ದುಡಿಯುವ ವರ್ಗದ ಹಕ್ಕುಗಳು ಸಂಪೂರ್ಣ ಮೊಟಕಾಗಲಿವೆ. ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಕಾರ್ಪೊರೇಟ್ ಕಂಪನಿಗಳಿಗೆ ರಿಯಾಯಿತಿ ನೀಡಲಾಗಿದೆ. ಆದರೆ ಜನಸಾಮಾನ್ಯರಿಗೆ ಬೇಕಿರುವ ಯಾವುದೇ ಅಂಶಗಳ ಬಗ್ಗೆ ಇವರು ತೆಲೆ ಕೆಡಿಸಿಕೊಂಡಿಲ್ಲ ಎಂದು ದೂರಿದರು. ಕೇಂದ್ರ ಸರ್ಕಾರದಲ್ಲಿ ೯ ಲಕ್ಷ ಹುದ್ದೆಗಳು ಖಾಲಿ ಇದ್ದರೆ, ರಾಜ್ಯ ಸರ್ಕಾರದಲ್ಲಿ ೨ ಲಕ್ಷ ೫೮ ಸಾವಿರ ಹುದ್ದೆಗಳು ಖಾಲಿ ಇವೆ. ಆದರೆ ಭರ್ತಿ ಮಾಡದೇ ನಿರುದ್ಯೋಗ ಸಮಸ್ಯೆ ಕಾಡುವಂತೆ ಮಾಡಲಾಗಿದೆ ಎಂದು ಅಸಮಾಧಾನ

ವ್ಯಕ್ತಪಡಿಸಿದರು.ಅಂಗನವಾಡಿ ಕೇಂದ್ರಗಳ ಮೂಲಕ ಆರ್‌ಎಸ್‌ಎಸ್ ಅಜೆಂಡಾ…

ದುಡಿಯುವ ವರ್ಗದ ಪರವಾಗಿ ಈ ಸರ್ಕಾರ ಇಲ್ಲ. ಯಾರ ಅಭಿವೃದ್ಧಿಗಾಗಿ ನೀವು ಅಧಿಕಾರ ಹಿಡಿದಿದ್ದೀರಿ ಎಂದು ಸರ್ಕಾರಕ್ಕೆ ಪ್ರಶ್ನೆ ಮಾಡಬೇಕಿದೆ. ಧರ್ಮ-ಜಾತಿ ಆಧಾರದಲ್ಲಿ ಸಮಾಜದಲ್ಲಿ ವಿಷಬೀಜ ಬಿತ್ತಲಾಗುತ್ತಿದೆ. ಆರ್‌ಎಸ್‌ಎಸ್ ಅಜೆಂಡಾಗಳನ್ನು ಅಂಗನವಾಡಿ ಕೇಂದ್ರಗಳ ಮೂಲಕ ಜಾರಿಗೊಳಿಸಲು ಈ ಸರ್ಕಾರ ಮುಂದಾಗಿದೆ. ನಾಮಕರಣ, ಪೋಷಣಾ ಅಭಿಯಾನ ಮೊದಲಾದವು ಧರ್ಮದ ಆಧಾರದ ಕಾರ್ಯಕ್ರಮಗಳಾಗಿವೆ.
-ಸಿಐಟಿಯು ರಾಜ್ಯ ಕಾರ್ಯದರ್ಶಿ ಸುನಂದಾ

ಹೋರಾಟಗಾರರು ಎಚ್ಚೆತ್ತುಕೊಳ್ಳಬೇಕು…

ಆರ್‌ಎಸ್‌ಎಸ್ ಸಂಘಟನೆಯ ಅಧಿಕ ಪ್ರಸಂಗಿತನ ಹೆಚ್ಚಾಗುತ್ತಿದೆ. ಬೀದಿಯಲ್ಲಿ ಹೋರಾಟ ಮಾಡುತ್ತಿರುವ ಕೆಂಪು, ಹಸಿರು, ನೀಲಿ ಬಣ್ಣದ ಹೋರಾಟಗಾರರು ಎಚ್ಚೆತ್ತುಕೊಳ್ಳಬೇಕು. ನಾವು ಹೀಗೆಯೇ ಮುಂದುವರೆದರೆ ನಾವು ಬೀದಿಯಲ್ಲಿ ನಿಂತು ಹೋರಾಟ ಮಾಡುತ್ತಲೇ ಇರಬೇಕಾಗುತ್ತದೆ.
-ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ

ಮೈಸೂರು ಜಿಲ್ಲೆಯಲ್ಲಿ ಮುಷ್ಕರ ಯಶಸ್ವಿ…

ಮೈಸೂರು ಜಿಲ್ಲೆಯಲ್ಲಿ ಮುಷ್ಕರ ಬೆಂಬಲಿಸಿರುವ ಸಂಘಟನೆಗಳೇ ಪ್ರಬಲವಾಗಿದ್ದು, ಶೇ.೯೦ಕ್ಕೂ ಅಧಿಕ ಸಂಖ್ಯೆಯ ಕಾರ್ಮಿಕರು ಎರಡು ದಿನವೂ ಕರ್ತವ್ಯದಿಂದ ದೂರು ಉಳಿದಿದ್ದರು. ಅಂತೆಯೇ ಇನ್ನಿತರ ನೌಕರರಲ್ಲೂ ಭಾಗಶಃ ನೌಕರರು ಮುಷ್ಕರದ ಹಿನ್ನೆಲೆಯಲ್ಲಿ ಎರಡು ದಿನಗಳೂ ಕರ್ತವ್ಯ ನಿರ್ವಹಿಸಿಲ್ಲ. ಒಟ್ಟಾರೆ ಮೈಸೂರು ಜಿಲ್ಲೆಯಲ್ಲಿ ಮುಷ್ಕರ ಸಂಪೂರ್ಣ ಯಶಸ್ವಿಯಾಗಿದೆ.
-ಜೆಸಿಟಿಯು ಸಂಚಾಲಕ ಎನ್.ಕೆ.ದೇವದಾಸ್

Translate »