ಮೈಸೂರು ಗ್ರಾಮಾಂತರ

ಪೂಜೆ ನೆಪದಲ್ಲಿ ಚಿನ್ನಾಭರಣ ಎಗರಿಸಿದ್ದ ಪೂಜಾರಿ ಬಂಧನ
ಮೈಸೂರು ಗ್ರಾಮಾಂತರ

ಪೂಜೆ ನೆಪದಲ್ಲಿ ಚಿನ್ನಾಭರಣ ಎಗರಿಸಿದ್ದ ಪೂಜಾರಿ ಬಂಧನ

November 3, 2020

21 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ ಹುಣಸೂರು, ನ.2 (ಕೆಕೆ)- ಚಿನ್ನದ ಒಡವೆ ಗಳನ್ನು ಪೂಜೆ ಮಾಡಿದರೆ ಗಂಡು ಮಗು ಆಗುತ್ತದೆ ಎಂದು ನಂಬಿಸಿ ಚಿನ್ನಾಭರಣ ಅಪಹರಿಸಿದ್ದ ಪೂಜಾರಿಯನ್ನು ಬಂಧಿಸುವಲ್ಲಿ ಬಿಳಿಕೆರೆ ಪೆÇೀಲಿಸರು ಯಾಶಸ್ವಿಯಾಗಿದ್ದಾರೆ. ಕೆ.ಆರ್.ನಗರ ತಾಲೂಕಿನ ಸಾತಿ ಗ್ರಾಮದ ಚೌಡೇಶ್ವರಿ ದೇವಾಲಯದ ಪೂಜಾರಿ ಮನು (28) ಬಂಧಿತ ಆರೋಪಿಯಾಗಿದ್ದು, ಈತನಿಂದ 21 ಲಕ್ಷ ರೂ. ಮೌಲ್ಯದ 456 ಗ್ರಾಂ ಚಿನ್ನಾ ಭರಣವನ್ನು ವಶಪಡಿಸಿಕೊಳ್ಳಲಾಗಿದೆ. ವಿವರ: 2020ರ ಜೂನ್ ತಿಂಗಳ ಮೊದಲ ವಾರದಲ್ಲಿ ಹುಣಸೂರು ತಾಲೂಕಿನ…

ಶ್ರೀಕಂಠೇಶ್ವರ ದೇವಸ್ಥಾನಕ್ಕೆ ಸೇರಿದ ಅರಮನೆ ಮೈದಾನ ಒತ್ತುವರಿ ತೆರವು ಶಾಸಕ ಬಿ.ಹರ್ಷವರ್ಧನ್ ಪರಿಶೀಲನೆ
ಮೈಸೂರು ಗ್ರಾಮಾಂತರ

ಶ್ರೀಕಂಠೇಶ್ವರ ದೇವಸ್ಥಾನಕ್ಕೆ ಸೇರಿದ ಅರಮನೆ ಮೈದಾನ ಒತ್ತುವರಿ ತೆರವು ಶಾಸಕ ಬಿ.ಹರ್ಷವರ್ಧನ್ ಪರಿಶೀಲನೆ

October 22, 2020

ನಂಜನಗೂಡು,ಅ.21(ರವಿ)-ನಗರದ ರಾಷ್ಟ್ರಪತಿ ರಸ್ತೆಯಲ್ಲಿ ಶ್ರೀಕಂಠೇಶ್ವರಸ್ವಾಮಿ ದೇವಾಲಯಕ್ಕೆ ಸೇರಿದ ಅರಮನೆ ಮೈದಾನವನ್ನು ಅತಿಕ್ರಮಿಸಿಕೊಂಡು ಅನಧಿಕೃತವಾಗಿ ನಿರ್ಮಿಸಿದ್ದ ಖಾಸಗಿ ಅಂಗಡಿ ಮುಂಗಟ್ಟುಗಳನ್ನು ಬುಧವಾರ ತೆರವುಗೊಳಿಸಾಯಿತು. ಜೆಎಸ್‍ಎಸ್ ಬಾಲಕಿಯರ ಫ್ರೌಡಶಾಲೆ ಮುಂಭಾಗದ ಶ್ರೀ ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನಕ್ಕೆ ಸೇರಿದ 148×116 ಅಡಿ ವಿಸ್ತೀರ್ಣದ ನಿವೇಶನವು ಬೇನಾಮಿ ವ್ಯಕ್ತಿಗಳ ವ್ಯಾಪಾರ-ವ್ಯವಹಾರಕ್ಕೆ ಒಳಪಟ್ಟಿತ್ತು. ಶಾಸಕ ಬಿ.ಹರ್ಷವರ್ಧನ್ ಸೂಚನೆಯಂತೆ ImಆU ತಹಸೀಲ್ದಾರ್ ಕೆ.ಎಂ.ಮಹೇಶ್‍ಕುಮಾರ್ ನೇತೃತ್ವz ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿ ಅನಧೀಕೃತ ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸಿ ಖಾಸಗಿ ವ್ಯಕ್ತಿಗಳ ಅನುಭೋಗದಲ್ಲಿದ್ದ ನಿವೇಶನವನ್ನು ಸರ್ಕಾರದ ವಶಕ್ಕೆ ಪಡೆಯಲಾಯಿತು. ಅರಮನೆ…

ಕೆ.ಆರ್.ನಗರ ಪುರಸಭೆ ಮುಖ್ಯಾಧಿಕಾರಿ ಅಮಾನತಿಗೆ ಆಗ್ರಹಿಸಿ ಪ್ರತಿಭಟನೆ
ಮೈಸೂರು ಗ್ರಾಮಾಂತರ

ಕೆ.ಆರ್.ನಗರ ಪುರಸಭೆ ಮುಖ್ಯಾಧಿಕಾರಿ ಅಮಾನತಿಗೆ ಆಗ್ರಹಿಸಿ ಪ್ರತಿಭಟನೆ

October 22, 2020

ಹೆಚ್.ಡಿ.ಕೋಟೆ, ಅ.21(ಮಂಜು)-ಸುದ್ದಿ ಮಾಡಲು ಕಚೇರಿಗೆ ತರಳಿದ್ದ ಪತ್ರಕರ್ತರನ್ನು ಅವ್ಯಾಚವಾಗಿ ನಿಂದಿಸಿ, ಸಾರ್ವಜನಿಕವಾಗಿ ಅವಮಾನ ಮಾಡಿರುವ ಕೆ.ಆರ್.ನಗರ ಪುರಸಭೆ ಮುಖ್ಯಾಧಿಕಾರಿಯನ್ನು ಅಮಾನತು ಮಾಡುವಂತೆ ಆಗ್ರಹಿಸಿ ತಾಲೂಕು ಪತ್ರಕರ್ತರ ಸಂಘದಿಂದ ಪ್ರತಿಭಟಿಸಲಾಯಿತು. ಪಟ್ಟಣದ ಮಿನಿ ವಿಧಾನಸೌಧದ ಆವರಣದಲ್ಲಿಂದು ಜಮಾಯಿಸಿದ ಪ್ರತಿಭಟನಾಕಾರರು, ಕೆ.ಆರ್.ನಗರ ಪುರಸಭಾ ಮುಖ್ಯಾಧಿಕಾರಿ ಶಿವಣ್ಣ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸಂಘದ ತಾಲೂಕು ಅಧ್ಯಕ್ಷ ಕನ್ನಡ ಪ್ರಮೋದ ಮಾತನಾಡಿ, ಕೆ.ಆರ್.ನಗರದಲ್ಲಿ ಸುದ್ದಿ ಮಾಡಲು ಪುರಸಭಾ ಕಚೇರಿಗೆ ತೆರಳಿದ್ದ ಪತ್ರಕರ್ತರ ಕೆಲಸಕ್ಕೆ ಅಡ್ಡಿಪಡಿಸಿರುವುದಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಪತ್ರಕರ್ತರ…

ಕಾಡಾಣೆ ದಾಳಿಗೆ ಯುವಕ ಬಲಿ
ಮೈಸೂರು ಗ್ರಾಮಾಂತರ

ಕಾಡಾಣೆ ದಾಳಿಗೆ ಯುವಕ ಬಲಿ

October 22, 2020

ನಂಜನಗೂಡು, ಅ.21-ಕಾಡಾನೆ ತುಳಿತದಿಂದ ಆದಿವಾಸಿ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ತಾಲೂಕಿನ ಹೆಡಿಯಾಲ ಸಮೀಪದ ವೆಂಕಟಗಿರಿ ಕಾಲೋನಿಯಲ್ಲಿ ನಡೆದಿದೆ. ಕಾಲೋನಿಯ ಕೆಂಪ-ಚಿಕ್ಕಮ್ಮ ದಂಪತಿ ಪುತ್ರ ಗಣೇಶ್ ಅಲಿಯಾಸ್ ಹನ್ಸ್ ಗಣೇಶ(25)ಮೃತ ಯುವಕ. ಈತ ಮಂಗಳವಾರ ರಾತ್ರಿ ಬಂಕಹಳ್ಳಿಯಿಂದ ತಮ್ಮ ಮನೆಗೆ ತೆರಳುತ್ತಿದ್ದ ವೇಳೆ ಡೋರನಕಟ್ಟೆ ಕಾಲೋನಿ ಸಮೀಪ ರಸ್ತೆಯಲ್ಲಿ ಕಾಡಾನೆ ಎದುರಾಗಿದೆ. ಈ ವೇಳೆ ಈತನ ಜೊತೆಯಲ್ಲಿದ್ದ ಮತ್ತೋರ್ವ ಸಮೀಪದಲ್ಲಿದ್ದ ಮರವನ್ನೇರಿ ಜೀವ ಉಳಿಸಿಕೊಂಡಿದ್ದಾರೆ. ಆದರೆ ಗಣೇಶ್ ಆನೆ ದಾಳಿಗೆ ಸಿಲುಕಿ ಸ್ಥಳದಲ್ಲೇ ಅಸುನೀಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ….

ಟಾಟ್ ಏಸ್‍ಗೆ ಕೆಎಸ್‍ಆರ್‍ಟಿಸಿ ಬಸ್ ಡಿಕ್ಕಿ  ಯುವಕ ಸಾವು, ಇಬ್ಬರಿಗೆ ಗಾಯ
ಮೈಸೂರು ಗ್ರಾಮಾಂತರ

ಟಾಟ್ ಏಸ್‍ಗೆ ಕೆಎಸ್‍ಆರ್‍ಟಿಸಿ ಬಸ್ ಡಿಕ್ಕಿ ಯುವಕ ಸಾವು, ಇಬ್ಬರಿಗೆ ಗಾಯ

October 22, 2020

ತಿ.ನರಸೀಪುರ.ಅ.21(ಎಸ್‍ಕೆ)-ಟಾಟ್ ಏಸ್‍ಗೆ ಕೆಎಸ್‍ಆರ್‍ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಯುವಕನೋರ್ವ ಮೃತಪಟ್ಟಿದ್ದು, ಬಸ್ ಚಾಲಕ ಸೇರಿದಂತೆ ಇಬ್ಬರು ಗಾಯಗೊಂಡಿರುವ ಘಟನೆ ಬುಧವಾರ ಮೂಗೂರು ಗ್ರಾಮದ ಬಳಿ ನಡೆದಿದೆ. ಕೊಳ್ಳೇಗಾಲ ತಾಲೂಕು ಹೊಂಡರಬಾಳು ಗ್ರಾಮದ ಶಿವಸ್ವಾಮಿ ಪುತ್ರ ಮಧು(26) ಅಪಘಾತದಲ್ಲಿ ಮೃತಪಟ್ಟ ಯುವಕ. ಈತ ಕಾರ್ಯ ನಿಮಿತ್ತ ಕೊಳ್ಳೇಗಾಲದಿಂದ ತಿ.ನರಸೀಪುರ ಕಡೆಗೆ ಟಾಟಾ ಏಸ್‍ನಲ್ಲಿ ಬರುತ್ತಿದ್ದ ವೇಳೆ ಟಿ.ನರಸೀಪುರ ಕಡೆಯಿಂದ ಅತಿ ವೇಗದಿಂದ ಬಂದ ಕೆಎಸ್‍ಆರ್‍ಟಿಸಿ ಬಸ್ ಟಾಟಾ ಏಸ್‍ಗೆ ಡಿಕ್ಕಿ ಹೊಡೆದು, ಬಳಿಕ ಬಸ್ ರಸ್ತೆಯ ಚರಂಡಿಗೆ…

ಜಮೀನು ವಿವಾದ: ತಮ್ಮನಿಂದ ಅಣ್ಣನ ಕೊಲೆ
ಮೈಸೂರು, ಮೈಸೂರು ಗ್ರಾಮಾಂತರ

ಜಮೀನು ವಿವಾದ: ತಮ್ಮನಿಂದ ಅಣ್ಣನ ಕೊಲೆ

June 21, 2020

ಹೆಚ್.ಡಿ.ಕೋಟೆ,ಜೂ.20- ಜಮೀನು ವಿವಾದ ತಾರಕ್ಕೇರಿ ತಮ್ಮನಿಂದ ಅಣ್ಣ ಹತ್ಯೆಯಾದ ಘಟನೆ ತಾಲೂಕಿನ ಹೈರಿಗೆ ಗ್ರಾಮದಲ್ಲಿ ಶನಿವಾರ ನಡೆದಿದೆ. ಗ್ರಾಮದ ಗಂಗಾಧರ ಎಂಬಾತನೇ ತನ್ನ ಅಣ್ಣ ಮಹದೇವೇಗೌಡ (53) ಅವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದು, ಮೃತನ ಮಗ ಶ್ರೀಕಾಂತ್ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಲ್ವರು ಮಕ್ಕಳಿರುವ ಈ ಕುಟುಂಬಕ್ಕೆ ಸುಮಾರು 150ಕ್ಕೂ ಹೆಚ್ಚು ಎಕರೆ ಜಮೀನಿದ್ದರೂ ಕೇವಲ 6 ಎಕರೆ ಭೂಮಿಯ ವಿವಾದಕ್ಕೆ ಸಂಬಂಧಿಸಿದಂತೆ ಆಗಾಗ್ಗೆ ಜಗಳ ನಡೆದು, ನ್ಯಾಯ ಪಂಚಾಯಿತಿಗಳು ನಡೆಯುತ್ತಿದ್ದವು ಎಂದು…

ಕರ್ತವ್ಯದ ವೇಳೆ ಮೃತಪಟ್ಟ ಪೌರಕಾರ್ಮಿಕ ಕುಟುಂಬಕ್ಕೆ ಸೂಕ್ತ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ
ಮೈಸೂರು ಗ್ರಾಮಾಂತರ

ಕರ್ತವ್ಯದ ವೇಳೆ ಮೃತಪಟ್ಟ ಪೌರಕಾರ್ಮಿಕ ಕುಟುಂಬಕ್ಕೆ ಸೂಕ್ತ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ

June 11, 2020

ತಿ.ನರಸೀಪುರ, ಜೂ.10(ಎಸ್‍ಕೆ)-ಕರ್ತವ್ಯದ ವೇಳೆ ಮೃತಪಟ್ಟ ಹನುಮನಾಳು ಗ್ರಾಪಂ ಪೌರಕಾರ್ಮಿಕ ಮುರುಗನ್ ಕುಟುಂಬಕ್ಕೆ ಸೂಕ್ತ ಪರಿಹಾರ ವಿತರಿಸುವಂತೆ ಆಗ್ರಹಿಸಿ ಪಟ್ಟಣದ ತಾಲೂಕು ಕಚೇರಿ ಮುಂಭಾಗ ಬುಧವಾರ ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟಿಸಲಾಯಿತು. ಪಟ್ಟಣದ ತಾಲೂಕು ಕಚೇರಿ ಮಿನಿವಿಧಾನಸೌಧದ ಮುಂಭಾಗ ಜಮಾವಣೆಗೊಂಡಿದ್ದ ಸಮಿತಿಯ ಕಾರ್ಯಕರ್ತರು ಮತ್ತು ಮುಖಂಡರು ಕಳೆದ ಜೂ.6ರಂದು ತಾಲೂಕಿನ ಮಾರಗೌಡನಹಳ್ಳಿ ಗ್ರಾಮದಲ್ಲಿ ತೆರೆದ ಚರಂಡಿಯನ್ನು ಸ್ವಚ್ಛಗೊಳಿಸುವಾಗ ಚರಂಡಿಯೊಳಗೆ ಮುಳುಗಿ ಸಾವನ್ನಪ್ಪಿರುವ ಪೌರಕಾರ್ಮಿಕ ಮುರುಗನ್ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು . ಬೇಜವಾಬ್ದಾರಿ ವಹಿಸಿರುವ ಪಿಡಿಓ ಮಾದೇಶ್ ಅವರನ್ನೇ…

ಅಯೋಧ್ಯ ರಾಮ ಜನ್ಮಭೂಮಿಯನ್ನು ಬೌದ್ಧ ಸ್ಮಾರಕವಾಗಿ ಘೋಷಿಸಿ
ಮೈಸೂರು ಗ್ರಾಮಾಂತರ

ಅಯೋಧ್ಯ ರಾಮ ಜನ್ಮಭೂಮಿಯನ್ನು ಬೌದ್ಧ ಸ್ಮಾರಕವಾಗಿ ಘೋಷಿಸಿ

June 11, 2020

ನಂಜನಗೂಡು, ಜೂ.10(ರವಿ)-ಅಯೋಧ್ಯೆ ರಾಮಮಂದಿರ ಭೂಮಿಯನ್ನು ಪ್ರಾಚೀನ ಬೌದ್ಧ ಸ್ಮಾರಕ ಎಂದು ಘೋಷಿಸಿ ಉತ್ಖನನದ ವೇಳೆ ದೊರತಿರುವ ಭೌದ್ಧಾವಶೇಷಗಳನ್ನು ರಕ್ಷಣೆ ಮಾಡಬೇಕೆಂದು ಒತ್ತಾಯಿಸಿ ಜನಸಂಗ್ರಾಮ ಪರಿಷತ್ ಮತ್ತು ದಲಿತ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ತಹಸೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ದಸಂಸ ಜಿಲ್ಲಾ ಸಂಚಾಲಕ ಮಲ್ಲಹಳ್ಳಿ ನಾರಾಯಣ್ ಮಾತನಾಡಿ, ಸುಪ್ರೀಂ ಕೋರ್ಟ್‍ನ ತೀರ್ಪಿನಂತೆ ಅಯೋಧ್ಯೆ ನೆಲದಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿದ್ದು, ಆ ಸ್ಥಳದ ಉತ್ಖನನದ ವೇಳೆಯಲ್ಲಿ ಬೌದ್ಧಾವಶೇಷಗಳು ಮತ್ತು ಬೌದ್ಧ ಕಲಾಕೃತಿಗಳು ದೊರೆತಿವೆ. ಅಲ್ಲದೆ ಭಾರತ…

ಕಬ್ಬು ಬೆಳೆಗಾರರ ಸಂಘದಿಂದ ಕೊರೋನಾ ವಾರಿಯರ್ಸ್‍ಗೆ ಅಭಿನಂದನೆ
ಮೈಸೂರು ಗ್ರಾಮಾಂತರ

ಕಬ್ಬು ಬೆಳೆಗಾರರ ಸಂಘದಿಂದ ಕೊರೋನಾ ವಾರಿಯರ್ಸ್‍ಗೆ ಅಭಿನಂದನೆ

June 11, 2020

ತಿ.ನರಸೀಪುರ, ಜೂ.10(ಎಸ್‍ಕೆ)-ತಾಲೂಕಿನ ಬನ್ನೂರು ಪಟ್ಟಣದ ಎಪಿಎಂಸಿ ಆವರಣದಲ್ಲಿ ಕಬ್ಬು ಬೆಳೆಗಾರರ ಸಂಘದಿಂದ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಕೊರೋನಾ ವಾರಿಯರ್ಸ್ ಅಭಿನಂದಿಸಲಾಯಿತು. ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೊರೊನಾ ಸಂಕಷ್ಟದಲ್ಲಿ ಸರ್ಕಾರಿ ವೈದ್ಯರು ಜನರ ಜೀವ ರಕ್ಷಣೆಗೆ ಮುಂದಾಗಿ ಮಾನವೀಯತೆ ಮೆರೆದರು. ಅಲ್ಲದೆ ಪೌರಕಾರ್ಮಿಕರು, ಆಶಾ-ಅಂಗನವಾಡಿ ಕಾರ್ಯಕರ್ತರು, ಅಧಿಕಾರಿಗಳು ತಮ್ಮ ಜೀವವನ್ನೇ ಪಣಕ್ಕಿಟ್ಟು ಕರ್ತವ್ಯ ನಿರ್ವಹಿಸಿದರು ಎಂದು ಪ್ರಶಂಸಿಸಿದರು. ಪ್ರಪಂಚದಾದ್ಯಂತ ಕೊರೊನಾ ಸೋಂಕು ಜನತೆ ಜೀವದ ಜತೆ ಚೆಲ್ಲಾಟವಾಡುತ್ತಿದ್ದ ಸಂದರ್ಭದಲ್ಲಿ ಕ್ಲೀನಿಕ್ ಹಾಗೂ ನರ್ಸಿಂಗ್ ಹೋಂಗಳನ್ನು ಮುಚ್ಚಿ ಮನೆಯಲ್ಲೇ…

ಕೆಆರ್‍ಎಸ್‍ನಲ್ಲಿ ನಾಲ್ವಡಿ-ವಿಶ್ವೇಶ್ವರಯ್ಯ ಪ್ರತಿಮೆ ಒಂಡೆಡೆ ಬೇಡ: ಎ.ಹೆಚ್.ವಿಶ್ವನಾಥ್ ಸಲಹೆ
Uncategorized, ಮೈಸೂರು ಗ್ರಾಮಾಂತರ

ಕೆಆರ್‍ಎಸ್‍ನಲ್ಲಿ ನಾಲ್ವಡಿ-ವಿಶ್ವೇಶ್ವರಯ್ಯ ಪ್ರತಿಮೆ ಒಂಡೆಡೆ ಬೇಡ: ಎ.ಹೆಚ್.ವಿಶ್ವನಾಥ್ ಸಲಹೆ

June 11, 2020

ಹುಣಸೂರು, ಜೂ.9(ಕೆಕೆ)-ಕೆಆರ್‍ಎಸ್‍ನಲ್ಲಿ ನಿರ್ಮಿಸಲುದ್ದೇಶಿಸಿರುವ ಮೈಸೂರು ಮಹಾರಾಜ ನಾಲ್ವಾಡಿ ಕೃಷ್ಣರಾಜ ಒಡೆಯರ್ ಹಾಗೂ ಸರ್.ಎಂ.ವಿಶ್ವೇಶ್ವರಯ್ಯ ಅವರ ಪ್ರತಿಮೆಗಳನ್ನು ಒಂದೆಡೆ ಸ್ಥಾಪಿಸುವ ನಿರ್ಧಾರವನ್ನು ಸರ್ಕಾರ ಕೈಬಿಡಬೇಕು ಎಂದು ಮಾಜಿ ಸಚಿವ ಹೆಚ್.ವಿಶ್ವನಾಥ್ ಸಲಹೆ ನೀಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರಿನ ಮಹಾರಾಜ ನಾಲ್ವಾಡಿ ಕೃಷ್ಣರಾಜ ಒಡೆಯರ್ ನಾಡಿದಲ್ಲಿ ಪ್ರಜಾಪ್ರಭತ್ವ ವ್ಯವಸ್ಥೆ ಜಾರಿಗೆ ತಂದು ಶೋಷಿತರಿಗೆ ಮೀಸಲು ಸೌಲಭ್ಯ ಕಲ್ಪಿಸಿಕೊಟ್ಟವರು. ನೀರಾವರಿ, ಆರೋಗ್ಯ, ಶಿಕ್ಷಣ, ಕಲೆ ಮತ್ತು ಸಾಹಿತ್ಯ ಸೇರಿದಂತೆ ಹಲವು ಕ್ಷೇತ್ರಗಳಿಗೆ ಆದ್ಯತೆ ನೀಡಿದ್ದಾರೆ. ಅವರು ನೀಡಿರುವ ಅನೇಕ ಜನಪರ…

1 2 3 4 18
Translate »