ಕೆ.ಆರ್.ನಗರ ಪುರಸಭೆ ಮುಖ್ಯಾಧಿಕಾರಿ ಅಮಾನತಿಗೆ ಆಗ್ರಹಿಸಿ ಪ್ರತಿಭಟನೆ
ಮೈಸೂರು ಗ್ರಾಮಾಂತರ

ಕೆ.ಆರ್.ನಗರ ಪುರಸಭೆ ಮುಖ್ಯಾಧಿಕಾರಿ ಅಮಾನತಿಗೆ ಆಗ್ರಹಿಸಿ ಪ್ರತಿಭಟನೆ

October 22, 2020

ಹೆಚ್.ಡಿ.ಕೋಟೆ, ಅ.21(ಮಂಜು)-ಸುದ್ದಿ ಮಾಡಲು ಕಚೇರಿಗೆ ತರಳಿದ್ದ ಪತ್ರಕರ್ತರನ್ನು ಅವ್ಯಾಚವಾಗಿ ನಿಂದಿಸಿ, ಸಾರ್ವಜನಿಕವಾಗಿ ಅವಮಾನ ಮಾಡಿರುವ ಕೆ.ಆರ್.ನಗರ ಪುರಸಭೆ ಮುಖ್ಯಾಧಿಕಾರಿಯನ್ನು ಅಮಾನತು ಮಾಡುವಂತೆ ಆಗ್ರಹಿಸಿ ತಾಲೂಕು ಪತ್ರಕರ್ತರ ಸಂಘದಿಂದ ಪ್ರತಿಭಟಿಸಲಾಯಿತು.

ಪಟ್ಟಣದ ಮಿನಿ ವಿಧಾನಸೌಧದ ಆವರಣದಲ್ಲಿಂದು ಜಮಾಯಿಸಿದ ಪ್ರತಿಭಟನಾಕಾರರು, ಕೆ.ಆರ್.ನಗರ ಪುರಸಭಾ ಮುಖ್ಯಾಧಿಕಾರಿ ಶಿವಣ್ಣ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಸಂಘದ ತಾಲೂಕು ಅಧ್ಯಕ್ಷ ಕನ್ನಡ ಪ್ರಮೋದ ಮಾತನಾಡಿ, ಕೆ.ಆರ್.ನಗರದಲ್ಲಿ ಸುದ್ದಿ ಮಾಡಲು ಪುರಸಭಾ ಕಚೇರಿಗೆ ತೆರಳಿದ್ದ ಪತ್ರಕರ್ತರ ಕೆಲಸಕ್ಕೆ ಅಡ್ಡಿಪಡಿಸಿರುವುದಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಪತ್ರಕರ್ತರ ವಿರುದ್ಧವೇ ಪೆÇಲೀಸ್ ಠಾಣೆಯಲ್ಲಿ ಸುಳ್ಳು ದೂರು ದಾಖಲಿಸಿರುವ ಮುಖ್ಯಾಧಿಕಾರಿ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು. ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ನಿಟ್ಟಿನಲ್ಲಿ ಮುಖ್ಯಾಧಿಕಾರಿ ಶಿವಣ್ಣ ನಡೆದುಕೊಂಡಿದ್ದಾರೆ. ಹಾಗಾಗಿ ಈ ಕೂಡಲೇ ಜಿಲ್ಲಾಧಿಕಾರಿಗಳು ಅವರನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.

ಇದೇ ವೇಳೆ ಉಪ ತಹಸೀಲ್ದಾರ್ ಮಾದೇಶ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಗ್ರಾಮಾಂತರ ಉಪಾಧ್ಯಕ್ಷ ಮಂಜು ಕೋಟೆ, ತಾಲೂಕು ಸಂಘದ ಪ್ರಧಾನ ಕಾರ್ಯದರ್ಶಿ ರಘು, ಉಪಾಧ್ಯಕ್ಷ ಹೆಚ್.ಬಿ.ಬಸವರಾಜು, ಖಜಾಂಚಿ ಪುಟ್ಟರಾಜು, ಪತ್ರಕರ್ತರಾದ ಸರಗೂರು ನಾಗೇಶ್, ಕಬಿನಿ ಮಂಜು, ಎಂ.ಎಲ್.ರವಿಕುಮಾರ್ ಸತೀಶ್ ಆರಾಧ್ಯ, ಜಿ.ರವಿಕುಮಾರ್, ಶ್ರೀನಿಧಿ, ದಾಸೇಗೌಡ, ದೊಡ್ಡಸಿದ್ದು, ರೇಣುಕಾ, ನಿಂಗಣ್ಣ, ಆನಂದ, ಶರವಣ, ಚಿಕ್ಕಣ್ಣೇಗೌಡ, ರವಿಕುಮಾರ್ ಇದ್ದರು.

 

 

Translate »