ಮೈಸೂರು ಗ್ರಾಮಾಂತರ

ಹುಣಸೂರು ತಾಪಂ ವಿಶೇಷ ಸಭೆ: ಕುಡಿಯುವ ನೀರು, ತ್ಯಾಜ್ಯ ನಿರ್ವಹಣೆಗೆ ಆದ್ಯತೆ
ಮೈಸೂರು ಗ್ರಾಮಾಂತರ

ಹುಣಸೂರು ತಾಪಂ ವಿಶೇಷ ಸಭೆ: ಕುಡಿಯುವ ನೀರು, ತ್ಯಾಜ್ಯ ನಿರ್ವಹಣೆಗೆ ಆದ್ಯತೆ

May 30, 2020

ಹುಣಸೂರು, ಮೇ 29 (ಕೆಕೆ)-ತಾಪಂ ವಿಶೇಷ ಸಭೆಯಲ್ಲಿ 15ನೇ ಹಣಕಾಸು ಯೋಜನೆಯಡಿ ಬಿಡುಗಡೆಯಾದ 1.90 ಕೋಟಿ ರೂ. ಅನುದಾನಕ್ಕೆ ಕ್ರಿಯೆ ಯೋಜನೆ ಸಲ್ಲಿಸಲು ಸದಸ್ಯರೆಲ್ಲರೂ ಸಮ್ಮತಿಸಿದರು. ತಾಪಂ ಅಧ್ಯಕ್ಷೆ ಪದ್ಮಮ್ಮ ಅವರ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಕುಡಿಯುವ ನೀರು ಮತ್ತು ಘನ ತ್ಯಾಜ್ಯ ನಿರ್ವಹಣೆ ಹಾಗೂ ಸಂಕ್ಷರಣೆ ಯೋಜನೆ ಜಾರಿಗೆ ಸಭೆಯಲ್ಲಿ ಒಕ್ಕೂರಲಿನಿಂದ ಅನುಮತಿ ದೊರೆಯಿತು. ತಾಪಂ ಕಾರ್ಯ ನಿರ್ವಹಣಾಧಿಕಾರಿ ಗಿರೀಶ್ ಮಾತನಾಡಿ, ತಾಲೂಕಿನ 6 ಪಂಚಾಯಿತಿಗಳಲ್ಲಿ ಘನತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿ ಯೋಜನೆ ತೆಗೆದುಕೊಂಡಿದ್ದು,…

ಜಯಪುರ ಹೋಬಳಿಯಾದ್ಯಂತ ಬಿರುಗಾಳಿ ಸಹಿತ ಮಳೆ: ಅಪಾರ ನಷ್ಟ
ಮೈಸೂರು, ಮೈಸೂರು ಗ್ರಾಮಾಂತರ

ಜಯಪುರ ಹೋಬಳಿಯಾದ್ಯಂತ ಬಿರುಗಾಳಿ ಸಹಿತ ಮಳೆ: ಅಪಾರ ನಷ್ಟ

May 27, 2020

ಜಯಪುರ, ಮೇ 26(ಬಿಳಿಗಿರಿ)-ಮೈಸೂರು ತಾಲೂಕಿನ ಜಯಪುರ ಹೋಬಳಿಯಾದ್ಯಂತ ಸೋಮವಾರ ರಾತ್ರಿ ಬಿರುಗಾಳಿ ಸಹಿತ ಸುರಿದ ಭಾರೀ ಮಳೆಗೆ ರೈತರು ಬೆಳೆದಿರುವ ತೋಟಗಾರಿಕೆ ಬೆಳೆ ನಾಶವಾಗಿದ್ದು, ಅಪಾರ ಹಾನಿ ಸಂಭವಿಸಿದೆ. ಹೋಬಳಿಯ ತಳೂರು ಕೆರೆಹುಂಡಿ, ಗೋಪಾಲಪುರ, ಬೀರಿಹುಂಡಿ, ದೂರ, ಹಾರೋಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ 150 ಎಕರೆಯಷ್ಟು ಬಾಳೆ ತೋಟ ಬಿರುಗಾಳಿಗೆ ನೆಲಕಚ್ಚಿದೆ. ಕೆರೆಹುಂಡಿ, ಗೋಪಾಲಪುರ, ಡಿ.ಸಾಲುಂಡಿಯಲ್ಲಿ ಮನೆಗಳು ಕುಸಿದಿದ್ದು, ಬಿರುಗಾಳಿಗೆ ಮನೆಯ ಚಾವಣಿ ಹಾರಿಹೋಗಿವೆ. ದಡದಹಳ್ಳಿ ಮತ್ತು ಸಿಂಧು ಹಳ್ಳಿಯಲ್ಲಿ ರೈತರ ಟೊಮೊಟೊ, ಮಂಗಳೂರು ಸೌತೆಕಾಯಿ ಬೆಳೆ…

ಶ್ರೀಕಂಠೇಶ್ವರಸ್ವಾಮಿ ದೇಗುಲ ಸಿಬ್ಬಂದಿಗೆ ಸುತ್ತೂರು ಸಂಸ್ಥಾನದಿಂದ ದಿನಸಿ ಕಿಟ್ ವಿತರಣೆ
ಮೈಸೂರು, ಮೈಸೂರು ಗ್ರಾಮಾಂತರ

ಶ್ರೀಕಂಠೇಶ್ವರಸ್ವಾಮಿ ದೇಗುಲ ಸಿಬ್ಬಂದಿಗೆ ಸುತ್ತೂರು ಸಂಸ್ಥಾನದಿಂದ ದಿನಸಿ ಕಿಟ್ ವಿತರಣೆ

May 27, 2020

ನಂಜನಗೂಡು, ಮೇ 26(ರವಿ)-ಶ್ರೀಕ್ಷೇತ್ರ ಸುತ್ತೂರು ಮಹಾಸಂಸ್ಥಾನದಿಂದ ಶ್ರೀಕಂಠೇಶ್ವರ ಸ್ವಾಮಿ ದೇವಾಲಯ ಪುರೋಹಿತರು, ನೌಕರರು ಹಾಗೂ ದೇವಾಲಯದ ದಾಸೋಹ ಭವನದ ಹೊರಗುತ್ತಿಗೆ ನೌಕರರು ಸೇರಿ 245 ಕುಟುಂಗಳಿಗೆ ದಿನಸಿ ಕಿಟ್ ವಿತರಿಸಲಾಯಿತು. ಜೆಎಸ್‍ಎಸ್ ವಿದ್ಯಾಪೀಠ ಕಾರ್ಯದರ್ಶಿ ಮಂಜುನಾಥ್ ಕಿಟ್ ವಿತರಿಸಿ ಮಾತನಾಡಿ, ನಂಜನಗೂಡಿಗೆ ಆರಂಭಿಕ ದಿನಗಳಲ್ಲಿ ಆವರಿಸಿದ ಸಂಕಷ್ಟ ಸದ್ಯಕ್ಕೆ ದೂರವಾಗಿದೆ. ನಂಜನಗೂಡಿನ ಜುಬಿಲಂಟ್ ಕಾರ್ಖಾನೆಯಿಂದ ಸಾಕಷ್ಟು ಜನ ಸೋಂಕಿಗೆ ತುತ್ತಾದರು. ಸದ್ಯ ಯಾವುದೇ ಸಾವು ಸಂಭವಿಸಲ್ಲಿಲ್ಲ. ಅದು ಕ್ಷೇತ್ರಾಧಿಪತಿ ಶ್ರೀಕಂಠೇಶ್ವರನ ಕೃಪೆ ಎಂದು ಹರ್ಷ ವ್ಯಕ್ತಪಡಿಸಿದರು. ಕೊರೊನಾದಿಂದ…

ಸ್ವಾರ್ಥ ಸಾಧನೆ ಬಿಟ್ಟು ದಲಿತ ಸಂಘಟನೆಗಳು ಒಂದಾಗಬೇಕು
ಮೈಸೂರು, ಮೈಸೂರು ಗ್ರಾಮಾಂತರ

ಸ್ವಾರ್ಥ ಸಾಧನೆ ಬಿಟ್ಟು ದಲಿತ ಸಂಘಟನೆಗಳು ಒಂದಾಗಬೇಕು

May 27, 2020

ತಿ.ನರಸೀಪುರ, ಮೇ 26 (ಎಸ್‍ಕೆ)-ಶೋಷಣೆ ಹಾಗೂ ಅನ್ಯಾಯದ ವಿರುದ್ಧ ದನಿ ಎತ್ತುವ ನಿಟ್ಟಿನಲ್ಲಿ ಛಿದ್ರವಾಗಿರುವ ದಲಿತ ಸಂಘಟನೆಗಳ ಎಲ್ಲಾ ಬಣಗಳು ಸ್ವಾರ್ಥ ಸಾಧನೆ ಬಿಟ್ಟು ಒಂದಾಗಬೇಕಿದೆ ಎಂದು ರಾಜ್ಯ ದಲಿತ ಸಂಘರ್ಷ ಸಮಿತಿಯ ಚಾಲನಾ ಸಂಚಾಲಕ ಹರಿಹರ ಆನಂದಸ್ವಾಮಿ ಸಲಹೆ ನೀಡಿದರು. ಪಟ್ಟಣದ ಅಂಬೇಡ್ಕರ್ ಭವನದಲ್ಲಿ ದಲಿತ ಸಂಘರ್ಷ ಸಮಿತಿಯ ತಾಲೂಕು ಶಾಖೆಯ ನೂತನ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಇಂದು ದಲಿತ ಸಂಘರ್ಷ ಸಮಿತಿಯು ಕೆಲವರ ಸ್ವಾರ್ಥ ನಡೆಯಿಂದಾಗಿ ದಾರಿ…

ಬಿರುಗಾಳಿ-ಮಳೆಗೆ ನೆಲಕಚ್ಚಿದ ನೂರಾರು ಎಕರೆ ಬಾಳೆ
ಮೈಸೂರು, ಮೈಸೂರು ಗ್ರಾಮಾಂತರ

ಬಿರುಗಾಳಿ-ಮಳೆಗೆ ನೆಲಕಚ್ಚಿದ ನೂರಾರು ಎಕರೆ ಬಾಳೆ

May 27, 2020

ನಂಜನಗೂಡು, ಮೇ 26(ರವಿ)-ತಾಲೂಕಿನ ಕಾರ್ಯ ಹಾಗೂ ಹುಸ್ಕೂರು ಗ್ರಾಮದಲ್ಲಿ ಬಿರುಗಾಳಿ ಸಹಿತ ಸುರಿದ ಭಾರೀ ಮಳೆಗೆ ರೈತರು ಬೆಳೆದಿದ್ದ ನೂರಾರು ಎಕರೆ ಬಾಳೆ ಬೆಳೆ ಹಾನಿಗೀಡಾಗಿ ಅಪಾರ ನಷ್ಟ ಸಂಭವಿಸಿದೆ. ಸೋಮವಾರ ರಾತ್ರಿ ಸುರಿದ ಮಳೆಯು ಭಾರೀ ಬಿರುಗಾಳಿಯನ್ನೇ ಹೊತ್ತು ತಂದ ಪರಿಣಾಮ, ಲಕ್ಷಾಂತರ ರೂ. ಖರ್ಚು ಮಾಡಿ ಕಟಾವಿಗೆ ಬಂದಿದ್ದ ನೇಂದ್ರ ಮತ್ತು ಏಲಕ್ಕಿ ಬಾಳೆ ನೆಲಕಚ್ಚಿದೆ. ಹುಸ್ಕೂರು ಗ್ರಾಮದ ತಮ್ಮಯ್ಯಶೆಟ್ಟಿ ಅವರ 10 ಎಕರೆ, ಕುಮಾರ್-5, ನಂದೀಶ-4, ಚಿನ್ನಸ್ವಾಮಿ, ಮಲ್ಲಿಗಮ್ಮ, ಮಹದೇವಸ್ವಾಮಿ, ರಾಜಪ್ಪ ತಲಾ…

ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ ತಿ.ನರಸೀಪುರದಲ್ಲಿ ರೈತರ ಪ್ರತಿಭಟನೆ
ಮೈಸೂರು, ಮೈಸೂರು ಗ್ರಾಮಾಂತರ

ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ ತಿ.ನರಸೀಪುರದಲ್ಲಿ ರೈತರ ಪ್ರತಿಭಟನೆ

May 27, 2020

ತಿ. ನರಸೀಪುರ, ಮೇ 26(ಎಸ್‍ಕೆ)-ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಹಾಗೂ ಖಾಸಗಿ ಫೈನಾನ್ಸ್‍ಗಳ ಸಾಲ ವಸೂಲಾತಿ ಪ್ರಕ್ರಿಯೆ 6 ತಿಂಗಳು ಮುಂದೂಡುವಂತೆ ಆಗ್ರಹಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ಕಬ್ಬು ಬೆಳೆಗಾರರ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಪಟ್ಟಣದ ಕಬಿನಿ ಅತಿಥಿಗೃಹದಿಂದ ಮೆರವಣಿಗೆ ಹೊರಟ ರೈತ ಸಂಘದ ಕಾರ್ಯಕರ್ತರು ಹಾಗೂ ಮಹಿಳೆಯರು ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ರೈತ ಮುಖಂಡ…

ತಿ.ನರಸೀಪುರದಲ್ಲಿ ಲಾಕ್‍ಡೌನ್ ಯಶಸ್ವಿ
ಮೈಸೂರು ಗ್ರಾಮಾಂತರ

ತಿ.ನರಸೀಪುರದಲ್ಲಿ ಲಾಕ್‍ಡೌನ್ ಯಶಸ್ವಿ

May 25, 2020

ತಿ.ನರಸೀಪುರ, ಮೇ 24(ಎಸ್‍ಕೆ)- ಕೊರೊನಾ ನಿಯಂತ್ರಿಸುವ ಹಿನ್ನೆಲೆಯಲ್ಲಿ ಭಾನುವಾರ ಕರೆ ನೀಡಿದ್ದ ಕಟ್ಟುನಿಟ್ಟಿನ ಲಾಕ್‍ಡೌನ್ ಪಟ್ಟಣದಲ್ಲಿ ಸಂಪೂರ್ಣ ಯಶಸ್ವಿಯಾಯಿತು. ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವುದರಿಂದ ಮೇ ತಿಂಗಳು ಪ್ರತಿ ಭಾನುವಾರ ರಾಜ್ಯ ಸರ್ಕಾರ ಸಂಪೂರ್ಣ ಲಾಕ್‍ಡೌನ್‍ಗೆ ಕರೆ ನೀಡಿತ್ತು. ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಸದಾ ಜನ ಜಂಗುಳಿಯಿಂದ ಗಿಜಿಗುಡುತ್ತಿದ್ದ ಲಿಂಕ್ ರಸ್ತೆ, ಮಾರುಕಟ್ಟೆ ರಸ್ತೆ, ಕಾಲೇಜು ರಸ್ತೆಗಳು ಜನ ಸಂಚಾರ ವಿಲ್ಲದೇ ಬಿಕೋ ಎನ್ನುತ್ತಿದ್ದವು. ತಾಲೂಕು ಆಡಳಿತದ ಕಟ್ಟುನಿಟ್ಟಿನ ಆದೇಶ ದಿಂದ ಅನಗತ್ಯ ವ್ಯಾಪಾರ -ವಹಿವಾಟಿಗೆ ಅವಕಾಶವಿರಲಿಲ್ಲ. ಬೆಳಿಗ್ಗೆ 7…

ಕರೋಹಟ್ಟಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ನೀರಿನ ಬವಣೆ: ಸಚಿವರಿಗೆ ಮನವಿ
ಮೈಸೂರು ಗ್ರಾಮಾಂತರ

ಕರೋಹಟ್ಟಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ನೀರಿನ ಬವಣೆ: ಸಚಿವರಿಗೆ ಮನವಿ

May 25, 2020

ತಿ.ನರಸೀಪುರ, ಮೇ 24.(ಎಸ್‍ಕೆ)- ತಾಲೂಕಿನ ಕರೋಹಟ್ಟಿ ಗ್ರಾಪಂ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ನೀರಿನ ಬವಣೆ ನೀಗಿಸಲು ಕುಡಿಯುವ ನೀರಿನ ಯೋಜನೆ ಮಂಜೂರು ಮಾಡುವಂತೆ ಪಂಚಾಯತ್ ರಾಜ್ ಮತ್ತು ಗ್ರಾಮೀಣಾ ಭಿವೃದ್ಧಿ ಸಚಿವ ಈಶ್ವರಪ್ಪ ಅವರನ್ನು ಕರೋಹಟ್ಟಿ ಗ್ರಾಪಂ ಅಧ್ಯಕ್ಷ ಅಧ್ಯಕ್ಷ ಬಿ.ಎಂ.ಶಿವಕುಮಾರ್ ಒತ್ತಾಯಿಸಿದರು. ತಾಲೂಕಿನ ಟಿ.ದೊಡ್ಡಪುರ ಗ್ರಾಮದ ಬಳಿ ಮಹಾತ್ಮಾಗಾಂಧಿ ನರೇಗಾ ಯೋಜನೆಯಡಿ ಪ್ರಗತಿಯಲ್ಲಿರುವ ಕೆರೆಗಳ ಅಭಿವೃದ್ಧಿ ಕಾಮಗಾರಿಯನ್ನು ಪರಿಶೀಲಿಸಿದ ಸಚಿವರನ್ನು ಭೇಟಿ ಮಾಡಿದ ಬಿ.ಎಂ. ಶಿವಕುಮಾರ್ ಅವರು ಮಳೆಯಾಶ್ರಿತ ಪ್ರದೇಶಗಳಾದ ಬನ್ನಹಳ್ಳಿ ಸೇರಿದಂತೆ ಆಲಸ್ತ್ರೀಕಟ್ಟೆಹುಂಡಿ ಹಾಗೂ…

ಬದುಗಳ ನಿರ್ಮಾಣದಿಂದ ಮಣ್ಣಿನ ತೇವಾಂಶ ಹೆಚ್ಚಳ
ಮೈಸೂರು ಗ್ರಾಮಾಂತರ

ಬದುಗಳ ನಿರ್ಮಾಣದಿಂದ ಮಣ್ಣಿನ ತೇವಾಂಶ ಹೆಚ್ಚಳ

May 25, 2020

ಹುಣಸೂರು, ಮೇ 24(ಕೆಕೆ)- ಮಣ್ಣಿನ ಸವಕಳಿ ಹಾಗೂ ಭೂಮಿಯಲ್ಲಿ ನೀರಿನ ತೇವಾಂಶಗಳನ್ನು ಹೆಚ್ಚಿಸಿಕೊಳ್ಳಲು ರೈತರು ತಮ್ಮ ಜಮೀನುಗಳಲ್ಲಿ ಬದು ನಿರ್ಮಾಣ ಮಾಡಿಕೊಳ್ಳಬೇಕು ಎಂದು ಕರ್ಣಕುಪ್ಪೆ ಗ್ರಾಪಂ ಪಿಡಿಓ ರಾಮಣ್ಣ ಕರೆ ನೀಡಿದರು. ತಾಲೂಕಿನ ಕರ್ಣಕುಪ್ಪೆ ಗ್ರಾಪಂ ವ್ಯಾಪ್ತಿಯ ಕಣಗಾಲು ಗ್ರಾಮದಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ `ಬದು ನಿರ್ಮಾಣ ಮಾಸಾಚರಣೆ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಣ್ಣಿನ ಸವಕಳಿ ನಿಯತ್ರಣದಿಂದ ತೇವಾಂಶ ಹೆಚ್ಚಾಗಿ ಬೆಳೆಯಲ್ಲಿ ಶೇ.15 ಅಧಿಕ ಇಳುವರಿ ಪಡೆಯಬಹುದಾಗಿದೆ. ರೈತರು ತಮ್ಮ ಜಮೀನಿನಲ್ಲಿ ಕಂದಕ ಬದು ನಿರ್ಮಿಸಿಕೊಳ್ಳಲು…

ಭಾನುವಾರದ ಲಾಕ್‍ಡೌನ್‍ಗೆ ನಂ.ಗೂಡಿನಲ್ಲಿ ಉತ್ತಮ ಪ್ರತಿಕ್ರಿಯೆ
ಮೈಸೂರು ಗ್ರಾಮಾಂತರ

ಭಾನುವಾರದ ಲಾಕ್‍ಡೌನ್‍ಗೆ ನಂ.ಗೂಡಿನಲ್ಲಿ ಉತ್ತಮ ಪ್ರತಿಕ್ರಿಯೆ

May 25, 2020

ನಂಜನಗೂಡು, ಮೇ 24(ರವಿ)- ಕೊರೊನಾ ಸೋಂಕು ತಡೆಗಟ್ಟುವ ಸಲುವಾಗಿ ರಾಜ್ಯ ಸರ್ಕಾರ ಕರೆ ನೀಡಿರುವ ಭಾನುವಾರದ ಸಂಪೂರ್ಣ ಲಾಕ್‍ಡೌನ್‍ಗೆ ನಂಜನಗೂಡಿನಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿಯಿತು. ಬೆಳ್ಳಿಗ್ಗೆಯಿಂದಲೇ ಸ್ವಯಂಪ್ರೇರಿತವಾಗಿ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವ ಮೂಲಕ ಮಾಲೀಕರು ವ್ಯಾಪಾರ-ವಹಿವಾಟು ಸ್ಥಗಿತಗೊಳಿಸಿದರು. ಎಪಿಎಂಸಿ ಜಾನುನಾವಾರು ಮಾರುಕಟ್ಟೆಯಲ್ಲಿ ತರಕಾರಿ ಮಾರಾಟಕ್ಕೂ ನಿರ್ಬಂಧ ಹೇರಿದ್ದರಿಂದಾಗಿ ಹೋಲ್‍ಸೇಲ್ ತರಕಾರಿ ಮಾರುಕಟ್ಟೆ ಇಲ್ಲದೆ. ತರಕಾರಿ ಮಾರಾಟವೂ ಕೂಡ ವಿರಳವಾಗಿತ್ತು. ದಿನಸಿ ಅಂಗಡಿಗಳೂ ಸಹ ಬೆಳ್ಳಿಗ್ಗೆ 9 ಗಂಟೆ ವರೆವಿಗೆ ಬಾಗಿಲು ತೆರೆದಿದ್ದವು. ಹಾಲು, ಔಷಧ ಮಾರಾಟ…

1 2 3 4 5 6 18
Translate »