ಮೈಸೂರು ಗ್ರಾಮಾಂತರ

ಸಾಲಬಾಧೆ: ರೈತ ಆತ್ಮಹತ್ಯೆ
ಮೈಸೂರು ಗ್ರಾಮಾಂತರ

ಸಾಲಬಾಧೆ: ರೈತ ಆತ್ಮಹತ್ಯೆ

May 25, 2020

ಹುಣಸೂರು, ಮೇ 24 (ಕೆಕೆ)-ಸಾಲಬಾಧೆ ತಾಳಲಾರದೆ ರೈತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಕೊತ್ತೆಗಾಲ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಂಜೇಗೌಡ(60) ಆತ್ಮಹತ್ಯೆಗೆ ಶರಾಣಾದ ರೈತ. ಮೃತರಿಗೆ ಪತ್ನಿ, ಇಬ್ಬರು ಮಕ್ಕಳಿದ್ದಾರೆ. ಇವರು ತಮ್ಮ 3 ಎಕರೆ ಜಮೀನು ಹೊಂದಿದ್ದು, ಬೇಸಾಯಕ್ಕಾಗಿ ಹುಣಸೂರು ಬ್ಯಾಂಕ್, ಕಲ್ಲಹಳ್ಳಿ ಸೊಸೈಟಿಯಲ್ಲಿ 9 ಲಕ್ಷ ರೂ. ಸಾಲ ಪಡೆದಿದ್ದರು. ಮಹಿಳಾ ಸಂಘಗಳಿಂದಲೂ ಸಾಕಷ್ಟು ಸಾಲ ಮಾಡಿದ್ದರು. ಬೆಳೆ ನಷ್ಟವಾಗಿ ನೊಂದಿದ್ದ ನಂಜೇಗೌಡರು ಶನಿವಾರ ತಮ್ಮ ಜಮೀನಿನಲ್ಲಿ ಮರ ನೇಣು ಬಿಗಿದುಕೊಂಡು…

ಹುಣಸೂರಿನಲ್ಲಿ ಸೋಂಕು ತಡೆಗೆ ಕೊರೊನಾ ವಾರಿಯರ್ಸ್ ಕಾರಣ
ಮೈಸೂರು ಗ್ರಾಮಾಂತರ

ಹುಣಸೂರಿನಲ್ಲಿ ಸೋಂಕು ತಡೆಗೆ ಕೊರೊನಾ ವಾರಿಯರ್ಸ್ ಕಾರಣ

May 21, 2020

ಹುಣಸೂರು, ಮೇ 20(ಕೆಕೆ)-ತಾಲೂಕಿನಲ್ಲಿ ಕೊವಿಡ್-19 ತಡೆಗಟ್ಟುವಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಪರಿಶ್ರಮ ಕಾರಣ. ಹಾಗಾಗಿ ತಾಲೂಕಿನ ಜನತೆ ಪರವಾಗಿ ಅವರನ್ನು ಗೌರವಿಸುವುದು ನಮ್ಮ ಕರ್ತವ್ಯ ಎಂದು ಮಾಜಿ ಸಚಿವ ಹೆಚ್.ವಿಶ್ವನಾಥ್ ತಿಳಿಸಿದರು. ನಗರದ ಅಂಬೇಡ್ಕರ್ ಭವನದಲ್ಲಿ ತಾಲೂಕು ಬಿಜೆಪಿಯಿಂದ ಏರ್ಪಡಿಸಿದ್ದ ನಾಗರಿಕ ಸನ್ಮಾನ ಕಾರ್ಯಕ್ರಮದಲ್ಲಿ ಕೊರೊನಾ ವಾರಿಯರ್ಸ್‍ಗೆ ಗೌರವ ಸಲ್ಲಿಸಿ ಮಾತನಾಡಿದ ಅವರು, ಕೊರೊನಾ ಸೋಂಕನ್ನು ಹಿಮ್ಮೆಟಿಸಲು ಪ್ರಧಾನಿ ನರೇಂದ್ರ ಮೋದಿ ದೇಶದ್ಯಾಂತ ಲಾಕ್‍ಡೌನ್ ಜಾರಿ ಮಾಡಿದ್ದರಿಂದ ಇತರ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಸೋಂಕಿತರ ಪ್ರಮಾಣ…

ಖಾಸಗಿ ಬಸ್ ಕಾರ್ಮಿಕರಿಗೆ ದಿನಸಿ ಕಿಟ್ ವಿರತಣೆ
ಮೈಸೂರು ಗ್ರಾಮಾಂತರ

ಖಾಸಗಿ ಬಸ್ ಕಾರ್ಮಿಕರಿಗೆ ದಿನಸಿ ಕಿಟ್ ವಿರತಣೆ

May 21, 2020

ತಿ.ನರಸೀಪುರ, ಮೇ 20(ಎಸ್‍ಕೆ)-ಪಟ್ಟಣದ ತಿರುಮಕೂಡಲು ಗ್ರಾಮದಲ್ಲಿರುವ ಸಂಘದ ಕಚೇರಿಯಲ್ಲಿ ಕಾರ್ಮಿಕರ ಸಂಘದ ಸದಸ್ಯರಿಗೆ ಸಂಘದಿಂದ ದಿನಸಿ ಕಿಟ್‍ಗಳನ್ನು ವಿತರಿಸಲಾಯಿತು. ಖಾಸಗಿ ಬಸ್ ಏಜೆಂಟರ ಸಂಘದ ಅಧ್ಯಕ್ಷ ಪಿ.ಪುಟ್ಟರಾಜು ಮಾತನಾಡಿ, ಲಾಕ್‍ಡೌನ್‍ನಿಂದ ಮೈಸೂರು ಜಿಲ್ಲಾ ಖಾಸಗಿ ಬಸ್ ಕಾರ್ಮಿಕರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಬಸ್‍ನ ಕಾಯಕವನ್ನೇ ನಂಬಿದ್ದ ಇವರು ಸಂಪಾದನೆಯ ದಾರಿ ಇಲ್ಲದೆ ದಿಕ್ಕುತೋಚದ ಸಂದರ್ಭ ಕಾರ್ಮಿಕರ ಸಂಘವೇ ಅವರ ನೆರವಿಗೆ ಬಂದಿರುವುದು ನಿಜಕ್ಕೂ ಶ್ಲಾಘನೀಯ ಎಂದರು. ಸಂಘದ ಅಧ್ಯಕ್ಷ ಮೂಗೂರು ಚಂದ್ರಪ್ಪ ಮಾತನಾಡಿ, ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದಾಗ…

ನಂಜನಗೂಡು ತಾಲೂಕಿಗೆ 2.71 ಕೋಟಿ ರೂ. ಅನುದಾನ
ಮೈಸೂರು ಗ್ರಾಮಾಂತರ

ನಂಜನಗೂಡು ತಾಲೂಕಿಗೆ 2.71 ಕೋಟಿ ರೂ. ಅನುದಾನ

May 21, 2020

ನಂಜನಗೂಡು, ಮೇ 20 (ರವಿ)-ನಂಜನಗೂಡು ತಾಲೂಕಿಗೆ 15ನೇ ಹಣಕಾಸು ಯೋಜನೆಯಡಿ 2.71 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ತಾಲೂಕಿನ ಅಭಿವೃದ್ಧಿಗೆ ಪೂರಕವಾಗಿ ಸದ್ಬಳಕೆ ಮಾಡಿಕೊಂಡು ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಕ್ರಿಯಾ ಯೋಜನೆ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ತಾಪಂ ಅಧ್ಯಕ್ಷ ಬಿ.ಎಸ್.ಮಹದೇವಪ್ಪ ತಿಳಿಸಿದರು. ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ನಡೆದ ವಿಶೇಷ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸುವ ನಿಟ್ಟಿನಲ್ಲಿ ನೀರಿನ ಮೂಲಗಳನ್ನು ವೃದ್ಧಿಬೇಕು. ಆ ನಿಟ್ಟಿನಿಲ್ಲಿ ಡ್ಯಾಮ್‍ಗಳ ಪುನಃಶ್ಚೇತನ, ಒವರ್‍ಹೆಡ್ ಟ್ಯಾಂಕ್‍ಗಳನ್ನು…

ಬದು ನಿರ್ಮಾಣ ಮಾಸಾಚರಣೆಗೆ ಶಾಸಕ ಬಿ.ಹರ್ಷವರ್ಧನ್ ಚಾಲನೆ
ಮೈಸೂರು ಗ್ರಾಮಾಂತರ

ಬದು ನಿರ್ಮಾಣ ಮಾಸಾಚರಣೆಗೆ ಶಾಸಕ ಬಿ.ಹರ್ಷವರ್ಧನ್ ಚಾಲನೆ

May 21, 2020

ಮಲ್ಕುಂಡಿ, ಮೇ 19(ಚನ್ನಪ್ಪ)-ಮಹಾತ್ಮ ಗಾಂಧಿ ಯೋಜನೆಯಡಿ ನಂಜನಗೂಡು ತಾಲೂಕಿನ ನವಿಲೂರು ಗ್ರಾಪಂ ವ್ಯಾಪ್ತಿಯ ರೈತರ ಜಮೀನುಗಳಲ್ಲಿ `ಬದು ನಿರ್ಮಾಣ ಮಾಸಾಚರಣೆ’ ಕಾಮಗಾರಿಗೆ ಶಾಸಕ ಬಿ.ಹರ್ಷವರ್ಧನ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ರೈತರು ನರೇಗಾದಲ್ಲಿ ಹಲವು ಜನಪರ ಕಾಮಗಾರಿಗಳಿದ್ದು, ಪ್ರತಿ ರೈತರೂ ಇದರ ಸದುಪಯೋಗ ಪಡೆದುಕೊಳ್ಳಲು ಮುಂದಾಗಬೇಕು. ಈಗಾಗಲೇ ಮಹಾಮಾರಿ ಕೊರೊನಾ ಭೀತಿಯಿಂದ ಜನರು ಸಂಕಷ್ಟಕ್ಕಿಡಾಗಿದ್ದಾರೆ. ಸದ್ಯ ಇದಕ್ಕೆ ಭಯಪಡುವ ಅಗತ್ಯವಿಲ್ಲ. ನಿಮ್ಮ ಜೊತೆ ನಾವೀದ್ದೇವೆ. ಸರ್ಕಾರದ ಸಾಕಷ್ಟು ಮುಂಜಾಗ್ರತಾ ಕ್ರಮ ವಹಿಸಿದ್ದು, ಪ್ರತಿಯೊಬ್ಬರೂ ಸರ್ಕಾರದ ಆದೇಶವನ್ನು…

ಕಾವೇರಿ ನೀರು ಸರಬರಾಜು ಯೋಜನೆ ಮೇಲ್ದರ್ಜೆಗೆ
ಮೈಸೂರು ಗ್ರಾಮಾಂತರ

ಕಾವೇರಿ ನೀರು ಸರಬರಾಜು ಯೋಜನೆ ಮೇಲ್ದರ್ಜೆಗೆ

May 20, 2020

ಹುಣಸೂರು, ಮೇ 19(ಕೆಕೆ)-ಹುಣಸೂರು ನಗರಕ್ಕೆ ಮುಂಬರುವ ದಿನಗಳಲ್ಲಿ ಸಮರ್ಪಕ ನೀರು ಪೂರೈಸುವ ಸಲುವಾಗಿ ವಿವಿಧ ಯೋಜನೆಯಡಿ 9 ಕೋಟಿ ರೂ. ವೆಚ್ಚದಲ್ಲಿ ಕಾವೇರಿ ನೀರು ಸರಬರಾಜು ಯೋಜನೆಯನ್ನು ಮೇಲ್ದರ್ಜೆಗೇರಿಸಲಾಗುವುದು ಎಂದು ಶಾಸಕ ಹೆಚ್.ಪಿ.ಮಂಜುನಾಥ್ ತಿಳಿಸಿದರು. ಯೋಜನೆ ಅನುಷ್ಠಾನ ಸಂಬಂಧ ನಗರಸಭೆ ಸಭಾಂಗಣದಲ್ಲಿ ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ, ನಗರಸಭೆ ಅಧಿಕಾರಿಗಳು ಹಾಗೂ ಇಂಜಿನಿಯರ್‍ಗಳ ಸಭೆಯ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದರು. ನಗರಕ್ಕೆ ಮುಂದಿನ 20 ವರ್ಷಗಳ ಅವಧಿಯ ದೂರದೃಷ್ಟಿ ಇಟ್ಟುಕೊಂಡು ನಗರೋತ್ಥಾನ ಯೋಜನೆಯ…

ನಂಜಗೂಡು: ಬಸ್ ಸಂಚಾರ ಇದ್ದರೂ ಬಣಗುಟ್ಟಿದ ನಿಲ್ದಾಣ
ಮೈಸೂರು ಗ್ರಾಮಾಂತರ

ನಂಜಗೂಡು: ಬಸ್ ಸಂಚಾರ ಇದ್ದರೂ ಬಣಗುಟ್ಟಿದ ನಿಲ್ದಾಣ

May 20, 2020

ನಂಜನಗೂಡು, ಮೇ 19-ಲಾಕ್‍ಡೌನ್ ಸಡಿಲಿಕೆ ಹಾಗೂ ಸರ್ಕಾರದ ಮಾರ್ಗಸೂಚಿಸಿಯಂತೆ ನಂಜನಗೂಡಿನಲ್ಲೂ ಮಂಗಳವಾರದಿಂದ ಸಾರಿಗೆ ಬಸ್ ಸಂಚಾರ ಆರಂಭವಾಗಿದ್ದು, ಮಾಹಿತಿ ಕೊರತೆ ಹಿನ್ನೆಲೆ ಮೊದಲ ದಿನ ಪ್ರಾಯಾಣಿಕರಿಲ್ಲದೆ ನಿಲ್ದಾಣ ಬಣಗೂಟ್ಟಿತು. 58 ದಿನಗಳ ಬಳಿಕ ನಗರದಲ್ಲಿ ಬಸ್ ಸಂಚಾರ ಆರಂಭವಾಗಿದ್ದು, ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧವಿದ್ದರಿಂದ ಸಮರ್ಪಕ ಮಾಹಿತಿ ದೊರಕದೇ ಜನರು ಪರದಾಡುವಂತಾಯಿತು. ಅಲ್ಲದೆ ನಿಲ್ದಾಣದಲ್ಲಿದ್ದ ಬೇಕರಿ, ಅಂಗಡಿ ಮುಂಗಟ್ಟುಗಳಿಗೆ ತೆರಳಿ ಖರೀದಿ ಮಾಡುವ ಜನರಿಗೂ ನಿಲ್ದಾಣ ಸಿಬ್ಬಂದಿ ತಡೆಹೊಡ್ಡಿದ್ದರಿಂದ ಮಳಿಗೆ ಬಾಡಿಗೆದಾರರು ವ್ಯಾಪಾರವಿಲ್ಲದೇ ದಿನ…

ಶಾರ್ಟ್‍ಸಕ್ರ್ಯೂಟ್: ಶ್ರೀಬಳ್ಳೇಶ್ವರಸ್ವಾಮಿ ದೇಗುಲ ಉದ್ಯಾನವನ ಭಾಗಶಃ ಬೆಂಕಿಗಾಹುತಿ
ಮೈಸೂರು ಗ್ರಾಮಾಂತರ

ಶಾರ್ಟ್‍ಸಕ್ರ್ಯೂಟ್: ಶ್ರೀಬಳ್ಳೇಶ್ವರಸ್ವಾಮಿ ದೇಗುಲ ಉದ್ಯಾನವನ ಭಾಗಶಃ ಬೆಂಕಿಗಾಹುತಿ

May 20, 2020

ತಿ.ನರಸೀಪುರ, ಮೇ 19(ಎಸ್‍ಕೆ)-ಪಟ್ಟಣದ ಶ್ರೀ ಬಳ್ಳೇಶ್ವರಸ್ವಾಮಿ ದೇವಸ್ಥಾನದ ಮುಂಭಾಗದ ಉದ್ಯಾನವನ ವಿದ್ಯುತ್ ಮಾರ್ಗದಲ್ಲಿ ಸಂಭವಿಸಿದ ಶಾರ್ಟ್‍ಸಕ್ರ್ಯೂಟ್ ಪರಿಣಾಮ ಭಸ್ಮವಾಗಿರುವ ಘಟನೆ ಮಂಗಳವಾರ ನಡೆದಿದೆ. ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅವರ ಪರಿಶ್ರಮದಿಂದ ಪಟ್ಟಣದ ಅಭಿವೃದ್ಧಿಗೆ ಕೋಟ್ಯಾಂತರ ರೂ.ಗಳ ಅನುದಾನ ಬಿಡುಗಡೆಯಾದ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಲಕ್ಷಾಂತರ ರೂ. ವೆಚ್ಚದಲ್ಲಿ ಈ ಪಾರ್ಕ್ ನಿರ್ಮಾಣಗೊಂಡಿತ್ತು. ಬಳಿಕ ನಿರ್ವಹಣೆಯಿಲ್ಲದೆ ಸೊರಗಿತ್ತು. ಅಲ್ಲದೆ ಪಾರ್ಕ್‍ಗೆ ನೀರು ಸಿಂಪಡಿಸಲು ಅಳವಡಿಸಲಾಗಿದ್ದ ಸ್ಪಿಂಕ್ಲರ್‍ಗಳು ಬೀಡಾಡಿ ದನಗಳಿಂದ ಹಾನಿಯಾಗಿ ನೀರಿಲ್ಲದೆ ಒಣಗಿತ್ತು. ಪಾರ್ಕ್‍ಗೆ ಹೊಂದಿಕೊಂಡಂತೆ ರಸ್ತೆಬದಿ…

ಬೈಕ್‍ಗಳ ಮುಖಾಮುಖಿ ಡಿಕ್ಕಿ: ಓರ್ವ ಸಾವು, ಮೂವರಿಗೆ ಗಾಯ
ಮೈಸೂರು ಗ್ರಾಮಾಂತರ

ಬೈಕ್‍ಗಳ ಮುಖಾಮುಖಿ ಡಿಕ್ಕಿ: ಓರ್ವ ಸಾವು, ಮೂವರಿಗೆ ಗಾಯ

May 20, 2020

ಹೆಚ್.ಡಿ.ಕೋಟೆ, ಮೇ 19(ಮಂಜು)-ಬೈಕ್‍ಗಳ ಮುಖಾಮುಖಿ ಡಿಕ್ಕಿ ಸಂಭವಿಸಿ ಸವಾರನೋರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿರುವ ಘಟನೆ ಮಂಗಳವಾರ ತಾಲೂಕಿನ ಹೈರಿಗೆ ಗ್ರಾಮದ ಬಳಿಯ ಮೈಸೂರು-ಮಾನಂದವಾಡಿ ಹೆದ್ದಾರಿಯಲ್ಲಿ ನಡೆದಿದೆ. ಮಾದಾಪುರ ಗ್ರಾಮದ ನಂಜುಂಡ (28) ಸ್ಥಳದಲ್ಲೇ ಮೃತಪಟ್ಟಿದ್ದು, ಈತನ ಹಿಂಬದಿ ಇದ್ದ ಉದಯ್(20) ಹಾಗೂ ಹೈರಿಗೆ ಗ್ರಾಮದ ಮಯೂರ್(30), ಆಶಾ ಕಾರ್ಯಕರ್ತೆ ಮೀನಾಕ್ಷಿ(48) ಗಾಯಗೊಂಡಿದ್ದು, ಮೈಸೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಕಾರ್ಯ ನಿಮಿತ್ತ ನಂಜುಂಡ, ಉದಯನೊಂದಿಗೆ ಮಾದಾಪುರದಿಂದ ಹ್ಯಾಂಡ್‍ಪೆÇೀಸ್ಟ್ ಕಡೆಗೆ ರಾಯಲ್ ಎನ್‍ಫೀಲ್ಡ್(ಕೆಎ09, ಹೆಚ್‍ಡಬ್ಲ್ಯೂ 1295)ನಲ್ಲಿ ಬರುತ್ತಿದ್ದರು. ಈ ವೇಳೆ…

ಜೂಜು: ಆರು ಮಂದಿ ಬಂಧನ, ನಗದು ವಶ
ಮೈಸೂರು ಗ್ರಾಮಾಂತರ

ಜೂಜು: ಆರು ಮಂದಿ ಬಂಧನ, ನಗದು ವಶ

May 20, 2020

ಮಲ್ಕುಂಡಿ, ಮೇ 19 (ಚನ್ನಪ್ಪ)-ಜೂಜು ಅಡ್ಡೆ ಮೇಲೆ ದಾಳಿ ನಡೆÀಸಿದ ಹುಲ್ಲಹಳ್ಳಿ ಠಾಣೆ ಪೆÇಲೀಸರು ಆರು ಮಂದಿ ಜೂಜುಕೋರರನ್ನು ಬಂಧಿಸಿ, ಪಣಕ್ಕಿಟ್ಟಿದ್ದ 5,210 ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ. ನಂಜನಗೂಡು ತಾಲೂಕಿನ ಮಾದಪುರ ನಿವಾಸಿಗಳಾದ ಮಹಾದೇವಪ್ಪ, ರೇವಣ್ಣ, ಶೇಖರ್, ಮಲ್ಲೇಶ್, ಮಹದೇವಸ್ವಾಮಿ, ಚಿನ್ನಸ್ವಾಮಿ ಬಂಧಿತರು. ಇವರು ಗ್ರಾಮ ಹೊರವಲಯದ ಕುರಿಹುಂಡಿಗೆ ತೆರಳುವ ರಸ್ತೆಯಲ್ಲಿ ಜೂಜಾಡುತ್ತಿದ್ದರು. ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ದಾಳಿಯಲ್ಲಿ ಎಸ್‍ಐ ಬಿ.ಸುರೇಂದ್ರ, ಸಿಬ್ಬಂದಿ ಮಹೇಂದ್ರ, ಮನೋಹರ್, ಸಣ್ಣಸ್ವಾಮಿ, ನವೀನ್…

1 3 4 5 6 7 18
Translate »