ಬದು ನಿರ್ಮಾಣ ಮಾಸಾಚರಣೆಗೆ ಶಾಸಕ ಬಿ.ಹರ್ಷವರ್ಧನ್ ಚಾಲನೆ
ಮೈಸೂರು ಗ್ರಾಮಾಂತರ

ಬದು ನಿರ್ಮಾಣ ಮಾಸಾಚರಣೆಗೆ ಶಾಸಕ ಬಿ.ಹರ್ಷವರ್ಧನ್ ಚಾಲನೆ

May 21, 2020

ಮಲ್ಕುಂಡಿ, ಮೇ 19(ಚನ್ನಪ್ಪ)-ಮಹಾತ್ಮ ಗಾಂಧಿ ಯೋಜನೆಯಡಿ ನಂಜನಗೂಡು ತಾಲೂಕಿನ ನವಿಲೂರು ಗ್ರಾಪಂ ವ್ಯಾಪ್ತಿಯ ರೈತರ ಜಮೀನುಗಳಲ್ಲಿ `ಬದು ನಿರ್ಮಾಣ ಮಾಸಾಚರಣೆ’ ಕಾಮಗಾರಿಗೆ ಶಾಸಕ ಬಿ.ಹರ್ಷವರ್ಧನ್ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ರೈತರು ನರೇಗಾದಲ್ಲಿ ಹಲವು ಜನಪರ ಕಾಮಗಾರಿಗಳಿದ್ದು, ಪ್ರತಿ ರೈತರೂ ಇದರ ಸದುಪಯೋಗ ಪಡೆದುಕೊಳ್ಳಲು ಮುಂದಾಗಬೇಕು. ಈಗಾಗಲೇ ಮಹಾಮಾರಿ ಕೊರೊನಾ ಭೀತಿಯಿಂದ ಜನರು ಸಂಕಷ್ಟಕ್ಕಿಡಾಗಿದ್ದಾರೆ.

ಸದ್ಯ ಇದಕ್ಕೆ ಭಯಪಡುವ ಅಗತ್ಯವಿಲ್ಲ. ನಿಮ್ಮ ಜೊತೆ ನಾವೀದ್ದೇವೆ. ಸರ್ಕಾರದ ಸಾಕಷ್ಟು ಮುಂಜಾಗ್ರತಾ ಕ್ರಮ ವಹಿಸಿದ್ದು, ಪ್ರತಿಯೊಬ್ಬರೂ ಸರ್ಕಾರದ ಆದೇಶವನ್ನು ಪಾಲಿಸಿ, ಆರೋಗ್ಯದ ಕಡೆ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ಈ ವೇಳೆ ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಕುಂಬ್ರಳ್ಳಿ ಸುಬ್ಬಣ್ಣ, ತಾಪಂ ಅಧ್ಯಕ್ಷ ಬಿ.ಎಸ್.ಮಹಾದೇವಪ್ಪ, ಬಿಜೆಪಿ ತಾಲೂಕು ಅಧ್ಯಕ್ಷ ಮಹೇಶ್, ತಾಪಂ ಸದಸ್ಯೆ ಗೀತಾ ಮಹೇಶ್, ಇಇಓ ಶ್ರೀಕಂಠ ರಾಜ್‍ಅರಸ್, ಪಿಡಿಓ ಪ್ರದೀಪ್ ಕುಮಾರ್, ಗ್ರಾಪಂ ಅಧ್ಯಕ್ಷ ನಂಜುಂಡಸ್ವಾಮಿ ಸೇರಿದಂತೆ ಪ್ರಮುಖರಿದ್ದರು.

Translate »