ಖಾಸಗಿ ಬಸ್ ಕಾರ್ಮಿಕರಿಗೆ ದಿನಸಿ ಕಿಟ್ ವಿರತಣೆ
ಮೈಸೂರು ಗ್ರಾಮಾಂತರ

ಖಾಸಗಿ ಬಸ್ ಕಾರ್ಮಿಕರಿಗೆ ದಿನಸಿ ಕಿಟ್ ವಿರತಣೆ

May 21, 2020

ತಿ.ನರಸೀಪುರ, ಮೇ 20(ಎಸ್‍ಕೆ)-ಪಟ್ಟಣದ ತಿರುಮಕೂಡಲು ಗ್ರಾಮದಲ್ಲಿರುವ ಸಂಘದ ಕಚೇರಿಯಲ್ಲಿ ಕಾರ್ಮಿಕರ ಸಂಘದ ಸದಸ್ಯರಿಗೆ ಸಂಘದಿಂದ ದಿನಸಿ ಕಿಟ್‍ಗಳನ್ನು ವಿತರಿಸಲಾಯಿತು.

ಖಾಸಗಿ ಬಸ್ ಏಜೆಂಟರ ಸಂಘದ ಅಧ್ಯಕ್ಷ ಪಿ.ಪುಟ್ಟರಾಜು ಮಾತನಾಡಿ, ಲಾಕ್‍ಡೌನ್‍ನಿಂದ ಮೈಸೂರು ಜಿಲ್ಲಾ ಖಾಸಗಿ ಬಸ್ ಕಾರ್ಮಿಕರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಬಸ್‍ನ ಕಾಯಕವನ್ನೇ ನಂಬಿದ್ದ ಇವರು ಸಂಪಾದನೆಯ ದಾರಿ ಇಲ್ಲದೆ ದಿಕ್ಕುತೋಚದ ಸಂದರ್ಭ ಕಾರ್ಮಿಕರ ಸಂಘವೇ ಅವರ ನೆರವಿಗೆ ಬಂದಿರುವುದು ನಿಜಕ್ಕೂ ಶ್ಲಾಘನೀಯ ಎಂದರು.

ಸಂಘದ ಅಧ್ಯಕ್ಷ ಮೂಗೂರು ಚಂದ್ರಪ್ಪ ಮಾತನಾಡಿ, ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದಾಗ ಅವರ ಹಿತ ಕಾಯುವುದು ಸಂಘದ ಕರ್ತವ್ಯ. ನಾಲ್ಕು ದಿನದಿಂದ ಸಂಘದಿಂದ ನಿತ್ಯ 110 ಮಂದಿಗೆ ದಿನಸಿ ಕಿಟ್ ನೀಡಲಾಗುತ್ತಿದೆ ಎಂದು ತಿಳಿಸಿದರು.

ವೀರಭದ್ರೇಶ್ವರ ಬಸ್ ಮಾಲೀಕ ಹೋಟೆಲ್ ರಾಜಣ್ಣ ಮಾತನಾಡಿದರು. ಪೆÇಲೀಸ್ ಇಲಾಖೆಯ ಸುರೇಶ್, ಹಲಸಹಳ್ಳಿ ಮಹದೇವಸ್ವಾಮಿ, ಸಲೀಮ್, ಡ್ರೈವರ್ ನಂಜಪ್ಪ, ಕೇಬಲ್ ಮಹೇಶ್, ಮೂಗೂರು ಸುನಿ, ನಿರ್ವಾಹಕ ಫಾಲಾಕ್ಷ, ಪಿ.ಎನ್.ರಮೇಶ್, ನರಸಿಂಹ, ಗಂಗಾಧರ್, ಪುಟ್ಟಬುದ್ದಿ, ಶಾಂತಕುಮಾರ್, ಹಿಟ್ಟುವಳ್ಳಿ ಮಹೇಶ್, ಬಿಲ್ ಕಲೆಕ್ಟರ್ ರಾಜು ಮತ್ತಿತರರಿದ್ದರು.

Translate »