ಬೈಕ್‍ಗಳ ಮುಖಾಮುಖಿ ಡಿಕ್ಕಿ: ಓರ್ವ ಸಾವು, ಮೂವರಿಗೆ ಗಾಯ
ಮೈಸೂರು ಗ್ರಾಮಾಂತರ

ಬೈಕ್‍ಗಳ ಮುಖಾಮುಖಿ ಡಿಕ್ಕಿ: ಓರ್ವ ಸಾವು, ಮೂವರಿಗೆ ಗಾಯ

May 20, 2020

ಹೆಚ್.ಡಿ.ಕೋಟೆ, ಮೇ 19(ಮಂಜು)-ಬೈಕ್‍ಗಳ ಮುಖಾಮುಖಿ ಡಿಕ್ಕಿ ಸಂಭವಿಸಿ ಸವಾರನೋರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿರುವ ಘಟನೆ ಮಂಗಳವಾರ ತಾಲೂಕಿನ ಹೈರಿಗೆ ಗ್ರಾಮದ ಬಳಿಯ ಮೈಸೂರು-ಮಾನಂದವಾಡಿ ಹೆದ್ದಾರಿಯಲ್ಲಿ ನಡೆದಿದೆ.

ಮಾದಾಪುರ ಗ್ರಾಮದ ನಂಜುಂಡ (28) ಸ್ಥಳದಲ್ಲೇ ಮೃತಪಟ್ಟಿದ್ದು, ಈತನ ಹಿಂಬದಿ ಇದ್ದ ಉದಯ್(20) ಹಾಗೂ ಹೈರಿಗೆ ಗ್ರಾಮದ ಮಯೂರ್(30), ಆಶಾ ಕಾರ್ಯಕರ್ತೆ ಮೀನಾಕ್ಷಿ(48) ಗಾಯಗೊಂಡಿದ್ದು, ಮೈಸೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.

ಕಾರ್ಯ ನಿಮಿತ್ತ ನಂಜುಂಡ, ಉದಯನೊಂದಿಗೆ ಮಾದಾಪುರದಿಂದ ಹ್ಯಾಂಡ್‍ಪೆÇೀಸ್ಟ್ ಕಡೆಗೆ ರಾಯಲ್ ಎನ್‍ಫೀಲ್ಡ್(ಕೆಎ09, ಹೆಚ್‍ಡಬ್ಲ್ಯೂ 1295)ನಲ್ಲಿ ಬರುತ್ತಿದ್ದರು. ಈ ವೇಳೆ ಹೆಚ್.ಮಟಕೆರೆ-ಹೈರಿಗೆ ಸಮೀಪ ಎದುರಿನಿಂದ ಬಂದ ಮಯೂರ್ ಹಾಗೂ ಮೀನಾಕ್ಷಿ ಅವರಿದ್ದ ಅಪ್ಪಚ್ಚಿ ಬೈಕ್(ಕೆಎ 45, ಎಸ್2477) ಮುಖಾಮುಖಿ ಡಿಕ್ಕಿಯಾಗಿವೆ. ಪರಿಣಾಮ ನಂಜುಂಡ ಸ್ಥಳದಲ್ಲೇ ಅಸುನೀನಿದ್ದಾರೆ. ಸ್ಥಳಕ್ಕೆ ಪಟ್ಟಣದ ಎಸ್‍ಐ ನಾಯಕ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ಹೆಚ್.ಡಿ.ಕೋಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »