ಜೂಜು: ಆರು ಮಂದಿ ಬಂಧನ, ನಗದು ವಶ
ಮೈಸೂರು ಗ್ರಾಮಾಂತರ

ಜೂಜು: ಆರು ಮಂದಿ ಬಂಧನ, ನಗದು ವಶ

May 20, 2020

ಮಲ್ಕುಂಡಿ, ಮೇ 19 (ಚನ್ನಪ್ಪ)-ಜೂಜು ಅಡ್ಡೆ ಮೇಲೆ ದಾಳಿ ನಡೆÀಸಿದ ಹುಲ್ಲಹಳ್ಳಿ ಠಾಣೆ ಪೆÇಲೀಸರು ಆರು ಮಂದಿ ಜೂಜುಕೋರರನ್ನು ಬಂಧಿಸಿ, ಪಣಕ್ಕಿಟ್ಟಿದ್ದ 5,210 ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ.

ನಂಜನಗೂಡು ತಾಲೂಕಿನ ಮಾದಪುರ ನಿವಾಸಿಗಳಾದ ಮಹಾದೇವಪ್ಪ, ರೇವಣ್ಣ, ಶೇಖರ್, ಮಲ್ಲೇಶ್, ಮಹದೇವಸ್ವಾಮಿ, ಚಿನ್ನಸ್ವಾಮಿ ಬಂಧಿತರು. ಇವರು ಗ್ರಾಮ ಹೊರವಲಯದ ಕುರಿಹುಂಡಿಗೆ ತೆರಳುವ ರಸ್ತೆಯಲ್ಲಿ ಜೂಜಾಡುತ್ತಿದ್ದರು. ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ದಾಳಿಯಲ್ಲಿ ಎಸ್‍ಐ ಬಿ.ಸುರೇಂದ್ರ, ಸಿಬ್ಬಂದಿ ಮಹೇಂದ್ರ, ಮನೋಹರ್, ಸಣ್ಣಸ್ವಾಮಿ, ನವೀನ್ ಕುಮಾರ್ ಭಾಗವಹಿಸಿದ್ದರು.

Translate »