ಕರೋಹಟ್ಟಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ನೀರಿನ ಬವಣೆ: ಸಚಿವರಿಗೆ ಮನವಿ
ಮೈಸೂರು ಗ್ರಾಮಾಂತರ

ಕರೋಹಟ್ಟಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ನೀರಿನ ಬವಣೆ: ಸಚಿವರಿಗೆ ಮನವಿ

May 25, 2020

ತಿ.ನರಸೀಪುರ, ಮೇ 24.(ಎಸ್‍ಕೆ)- ತಾಲೂಕಿನ ಕರೋಹಟ್ಟಿ ಗ್ರಾಪಂ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ನೀರಿನ ಬವಣೆ ನೀಗಿಸಲು ಕುಡಿಯುವ ನೀರಿನ ಯೋಜನೆ ಮಂಜೂರು ಮಾಡುವಂತೆ ಪಂಚಾಯತ್ ರಾಜ್ ಮತ್ತು ಗ್ರಾಮೀಣಾ ಭಿವೃದ್ಧಿ ಸಚಿವ ಈಶ್ವರಪ್ಪ ಅವರನ್ನು ಕರೋಹಟ್ಟಿ ಗ್ರಾಪಂ ಅಧ್ಯಕ್ಷ ಅಧ್ಯಕ್ಷ ಬಿ.ಎಂ.ಶಿವಕುಮಾರ್ ಒತ್ತಾಯಿಸಿದರು.

ತಾಲೂಕಿನ ಟಿ.ದೊಡ್ಡಪುರ ಗ್ರಾಮದ ಬಳಿ ಮಹಾತ್ಮಾಗಾಂಧಿ ನರೇಗಾ ಯೋಜನೆಯಡಿ ಪ್ರಗತಿಯಲ್ಲಿರುವ ಕೆರೆಗಳ ಅಭಿವೃದ್ಧಿ ಕಾಮಗಾರಿಯನ್ನು ಪರಿಶೀಲಿಸಿದ ಸಚಿವರನ್ನು ಭೇಟಿ ಮಾಡಿದ ಬಿ.ಎಂ. ಶಿವಕುಮಾರ್ ಅವರು ಮಳೆಯಾಶ್ರಿತ ಪ್ರದೇಶಗಳಾದ ಬನ್ನಹಳ್ಳಿ ಸೇರಿದಂತೆ ಆಲಸ್ತ್ರೀಕಟ್ಟೆಹುಂಡಿ ಹಾಗೂ ಬನ್ನಹಳ್ಳಿ ಹುಂಡಿ ಗ್ರಾಮಗಳಲ್ಲಿನ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮಂಜೂರು ಮಾಡಬೇಕೆಂದು ಮನವಿ ಸಲ್ಲಿಸಿದರು.

ಕರೋಹಟ್ಟಿ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಮೂರು ಗ್ರಾಮಗಳು ಕೂಡ ಎತ್ತರದ ಪ್ರದೇಶದಲ್ಲಿ ಕುಡಿಯುವ ನೀರಿಗೆ ಮಳೆಯನ್ನೇ ಅವಲಂಬಿಸಿವೆ. ಬನ್ನಹಳ್ಳಿ ಹಾಗೂ ಆಲಸ್ತ್ರೀಕಟ್ಟೆಹುಂಡಿ ಗ್ರಾಮಗಳು ವರುಣ ವಿಧಾನಸಭಾ ಕ್ಷೇತ್ರಕ್ಕೆ ಮತ್ತು ಬನ್ನಹಳ್ಳಿ ಹುಂಡಿ ಗ್ರಾಮ ನರಸೀಪುರ ವಿಧಾನಸಭಾ ಕ್ಷೇತ್ರಕ್ಕೆ ಸೇರುತ್ತದೆ. ಬೇಸಿಗೆ ಕಾಲದಲ್ಲಿ ಕುಡಿಯಲಿಕ್ಕೆ ನೀರು ಸಿಗದಿದ್ದ ರಿಂದ 3 ಕಿ.ಮೀ. ದೂರದಿಂದ ನೀರನ್ನು ಹೊತ್ತು ತರಬೇಕು. ಅಂತರ್ಜಲವೂ ಬತ್ತಿ ಹೋಗಿರುವುದರಿಂದ 500 ಅಡಿ ಕೊಳವೆಬಾವಿ ಕೊರೆಸಿದರು ನೀರು ಸಿಗುವುದಿಲ್ಲ. ಸಮಸ್ಯೆ ಇಷ್ಟೊಂದು ಗಂಭೀರ ವಾಗಿರುವುದರಿಂದ ನದಿ ಮೂಲದಿಂ ದಲೇ ಕುಡಿಯುವ ನೀರನ್ನು ಕಲ್ಪಿಸಲು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಯನ್ನು ಸಚಿವ ಈಶ್ವರಪ್ಪ ಅವರಿಗೆ ಬಿ.ಎಂ. ಶಿವಕುಮಾರ್ ಮನವರಿಕೆ ಮಾಡಿಕೊಟ್ಟರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಸಂಸದ ಪ್ರತಾಪ್ ಸಿಂಹ, ಶಾಸಕ ಎಂ. ಅಶ್ವಿನ್ ಕುಮಾರ್, ಕರ್ನಾಟಕ ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಬನಹಳ್ಳಿ ಸೋಮಣ್ಣ, ಜೆಡಿಎಸ್ ಕ್ಷೇತ್ರ ಅಧ್ಯಕ್ಷ ಸಿಬಿ ಹುಂಡಿ ಚಿನ್ನಸ್ವಾಮಿ, ತಾಪಂ ಇಓ ಜರಾಲ್ಡ್ ರಾಜೇಶ್ ಹಾಗೂ ಇನ್ನಿತರರಿದ್ದರು.

Translate »