ಹುಣಸೂರು ತಾಪಂ ವಿಶೇಷ ಸಭೆ: ಕುಡಿಯುವ ನೀರು, ತ್ಯಾಜ್ಯ ನಿರ್ವಹಣೆಗೆ ಆದ್ಯತೆ
ಮೈಸೂರು ಗ್ರಾಮಾಂತರ

ಹುಣಸೂರು ತಾಪಂ ವಿಶೇಷ ಸಭೆ: ಕುಡಿಯುವ ನೀರು, ತ್ಯಾಜ್ಯ ನಿರ್ವಹಣೆಗೆ ಆದ್ಯತೆ

May 30, 2020

ಹುಣಸೂರು, ಮೇ 29 (ಕೆಕೆ)-ತಾಪಂ ವಿಶೇಷ ಸಭೆಯಲ್ಲಿ 15ನೇ ಹಣಕಾಸು ಯೋಜನೆಯಡಿ ಬಿಡುಗಡೆಯಾದ 1.90 ಕೋಟಿ ರೂ. ಅನುದಾನಕ್ಕೆ ಕ್ರಿಯೆ ಯೋಜನೆ ಸಲ್ಲಿಸಲು ಸದಸ್ಯರೆಲ್ಲರೂ ಸಮ್ಮತಿಸಿದರು.

ತಾಪಂ ಅಧ್ಯಕ್ಷೆ ಪದ್ಮಮ್ಮ ಅವರ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಕುಡಿಯುವ ನೀರು ಮತ್ತು ಘನ ತ್ಯಾಜ್ಯ ನಿರ್ವಹಣೆ ಹಾಗೂ ಸಂಕ್ಷರಣೆ ಯೋಜನೆ ಜಾರಿಗೆ ಸಭೆಯಲ್ಲಿ ಒಕ್ಕೂರಲಿನಿಂದ ಅನುಮತಿ ದೊರೆಯಿತು.

ತಾಪಂ ಕಾರ್ಯ ನಿರ್ವಹಣಾಧಿಕಾರಿ ಗಿರೀಶ್ ಮಾತನಾಡಿ, ತಾಲೂಕಿನ 6 ಪಂಚಾಯಿತಿಗಳಲ್ಲಿ ಘನತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿ ಯೋಜನೆ ತೆಗೆದುಕೊಂಡಿದ್ದು, ಈಗಾಗಲೇ ಕಟ್ಟೆಮಳಲವಾಡಿ ಹೋಬಳಿ ಕೇಂದ್ರದಲ್ಲಿ ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ 20 ಗುಂಟೆ ಸರ್ಕಾರಿ ಭೂಮಿಯಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಇದಲ್ಲದೆ ಬಿಳಿಕೆರೆ, ಹನಗೂಡು, ಗೋವಿಂದನಹಳ್ಳಿ, ಮನುಗನಹಳ್ಳಿ, ಗ್ರಾಮಗಳಲ್ಲಿ ಯೋಜನೆ ಜಾರಿಗೊಳಿಸಲು ಎಲ್ಲಾ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.

ಘನತ್ಯಾಜ್ಯ ನಿರ್ವಹಣೆ ಯೋಜನೆಗೆ ಪ್ರತಿ ಪಂಚಾಯಿತಿಗೂ 20 ಲಕ್ಷ ರೂ. ಅನುದಾನ ಕಾಯ್ದಿರಿಸಲು ಸಭೆಯಲ್ಲಿ ಅನುಮೋದನೆ ನೀಡಲಾಯಿತು.ಸದಸ್ಯೆ ಪುಟ್ಟಮ್ಮ ಮಾತನಾಡಿ, ಕಡಿಮೆ ವೆಚ್ಚದಲ್ಲಿ ತೊಟ್ಟಿಗಳಲ್ಲಿ ತ್ಯಾಜ್ಯ ಸಂಗ್ರಹ ನಿರ್ವಹಣೆ ಮಾಡಬಹುದು ಎಂದು ಸಲಹೆ ನೀಡಿದರು.

ಸಹಾಯಕ ಇಂಜಿನಿಯರ್ ರಮೇಶ್ ಮಾತನಾಡಿ, ತಾಲೂಕಿನ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಶಾಶ್ವತ ಪರಿಹಾರಕ್ಕೆ ವಿವಿಧ ಯೋಜನೆಗಳು ಜಾರಿಯಲಿದ್ದು, ಕಾವೇರಿ ನದಿಯಿಂದ ಜಾಬಗೆರೆ ಗ್ರಾಮಕ್ಕೆ 5 ಲಕ್ಷ ರೂ. ಪ್ರತ್ಯೇಕ ಪೈಪ್‍ಲೈನ್ ಕಾಮಗಾರಿ ನಡೆದಿದೆ. ತುರ್ತು ಕಾಮಗಾರಿಗೆ ಇಲಾಖೆ 20 ಲಕ್ಷ ಅನುದಾನ ಕಾಯ್ದಿರಿಸಿದೆ ಎಂದು ಮಾಹಿತಿ ನೀಡಿದರು.

ಸದಸ್ಯ ಗಣಪತಿ ಇಂದೋಲ್ಕರ್ ಮಾತನಾಡಿ, ಸಿರಿಯೂರು ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಸಹಾಯಕ ಇಂಜಿನಿಯರ್‍ಗಳು ಪೂರಕವಾಗಿ ಸ್ಪಂದಿಸುತ್ತಿಲ್ಲ ದೂರವಾಣಿ ಕರೆ ಮಾಡಿದರೆ ಸ್ವೀಕರಿಸುವುದಿಲ್ಲ. ಗಾವಡಗೆರೆ ಹೋಬಳಿಯಿಂದ ಇವರುಗಳನ್ನು ಬದಲಿಸಬೇಕು ಎಂದು ಪಟ್ಟು ಹಿಡಿದರು. ಸಭೆಯಲ್ಲಿ ಸಾಮಾಜಿಕ ನ್ಯಾಯ ಸಮಿತಿ ಅಧÀ್ಯಕ್ಷ ಪ್ರಭಾಕರ್, ಉಪಾಧÀ್ಯಕ್ಷ ಪ್ರೇಮೇಗೌಡ, ಉಪಸ್ಥಿತರಿದ್ದರು.

Translate »