ಮಡಿಕೇರಿ: ಕಾವೇರಿ ತೀರ್ಥ ವಿತರಣಾ ರಥಯಾತ್ರೆ
ಕೊಡಗು

ಮಡಿಕೇರಿ: ಕಾವೇರಿ ತೀರ್ಥ ವಿತರಣಾ ರಥಯಾತ್ರೆ

October 19, 2022

ಮಡಿಕೇರಿ, ಅ.18- ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದ ಬಳಿಯ ಶ್ರೀ ಕಾವೇರಿ ಭಕ್ತ ಮಂಡಳಿಯಿಂದ 68ನೇ ವರ್ಷದ ಕಾವೇರಿ ತೀರ್ಥ ವಿತರಣಾ ರಥಯಾತ್ರೆ ಮಂಗಳವಾರ ನಗರದಲ್ಲಿ ಶ್ರದ್ಧಾ ಭಕ್ತಿಗಳಿಂದ ನೆರವೇರಿತು.

ಶ್ರೀ ಕಾವೇರಿ ಭಕ್ತಮಂಡಳಿ ವರ್ಷಂಪ್ರತಿ ತಲಕಾವೇರಿಯ ತುಲಾ ಸಂಕ್ರಮಣದ ತೀರ್ಥೋದ್ಭವದ ಬಳಿಕ, ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ತೀರ್ಥ ವಿತರಣಾ ರಥಯಾತ್ರೆಯನ್ನು ನಡೆಸಿ ಕೊಂಡು ಬರುತ್ತಿದೆ. ಈ ಬಾರಿ ಕಾವೇರಿಯ ಅತ್ಯಾಕರ್ಷಕ ಮಂಟಪ ದಲ್ಲಿ ಕಾವೇರಿ ತೀರ್ಥ ಪ್ರಸಾದವÀನ್ನು ನಗರದ ವಿವಿಧ ಬಡಾವಣೆಗಳಿಗೆ ಮೆರವಣಿಗೆಯ ಮೂಲಕ ಕೊಂಡೊಯ್ದು ಭಕ್ತರಿಗೆ ವಿತರಿಸಲಾಯಿತು.

ತಲಕಾವೇರಿಯಲ್ಲಿ ಅ.17ರಂದು ರಾತ್ರಿ ತೀರ್ಥೋದ್ಭವವಾದ ಬಳಿಕ ಶ್ರೀ ಕಾವೇರಿ ಭಕ್ತ ಮಂಡಳಿಯ ಪದಾಧಿಕಾರಿಗಳು ಕಾವೇರಿ ತೀರ್ಥವನ್ನು ಸಂಗ್ರಹಿಸಿ ಮಡಿಕೇರಿಗೆ ತೆಗೆದುಕೊಂಡು ಬರಲಾಯಿತು. ಇಂದು ಬೆಳಗ್ಗೆ ಗಣಪತಿ ಹೋಮ, ಕಳಸ ಕಟ್ಟು ವುದು, ಕಾವೇರಿಗೆ ವಿಶೇಷ ಪೂಜೆ ಸಲ್ಲಿಸಿ, ಮಧ್ಯಾಹ್ನ ಅನ್ನದಾನ ನೆರವೇರಿಸಿದ ಬಳಿಕ ಕಾವೇರಿ ತೀರ್ಥ ವಿತರಣೆಯ ಮಂಟಪದ ಮೆರವಣಿಗೆ ಶ್ರದ್ಧಾಭಕ್ತಿಗಳಿಂದ ಮಂಗಳವಾದ್ಯಗಳೊಂದಿಗೆ ಆರಂಭಗೊಂಡಿತು. ಹಿರಿಯ ಕಲಾವಿದ ದಿವಂಗತ ಅಣ್ಣ ಅವರು ಆರಂಭಿಸಿದ ತೀರ್ಥ ವಿತರಣಾ ಕಾರ್ಯವನ್ನು ಪ್ರಸ್ತುತ ಅವರ ಮಕ್ಕಳಾದ ರವಿ, ಜಾಜಿ ಅವರನ್ನು ಒಳಗೊಂಡಂತೆ ಶ್ರೀ ಕಾವೇರಿ ಭಕ್ತ ಮಂಡಳಿ ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ. ವಿಶೇಷವೆಂದರೆ ಕಳೆದ 68 ವರ್ಷಗಳಿಂದ ಮಂಟಪದಲ್ಲಿ ಮೆರವಣಿಗೆ ನಡೆಸುವ ಕಾವೇರಿಯ ಆಕರ್ಷಕ ಮೂರ್ತಿಯನ್ನು ಅಣ್ಣು ಅವರು, ಅವರ ಬಳಿಕ ಅವರ ಮಕ್ಕಳು ನಿರ್ಮಿಸಿಕೊಂಡು ಬರುತ್ತಿದ್ದಾರೆ.

 

Translate »