ಕೊಡಗು

ಕೊಡಗಲ್ಲಿ ಮುಂದುವರೆದ ಭಾರೀ ಮಳೆ ಮತ್ತೆ ಹಲವೆಡೆ ಭೂ ಕುಸಿತ,  ಧರೆಗುರುಳಿದ ಮರಗಳು
ಕೊಡಗು

ಕೊಡಗಲ್ಲಿ ಮುಂದುವರೆದ ಭಾರೀ ಮಳೆ ಮತ್ತೆ ಹಲವೆಡೆ ಭೂ ಕುಸಿತ, ಧರೆಗುರುಳಿದ ಮರಗಳು

July 4, 2022

ಮಡಿಕೇರಿ,ಜು.3- ಕೊಡಗುಜಿಲ್ಲೆಯಾದ್ಯಂತ ಭಾರೀ ಮಳೆ ಮುಂದು ವರೆದಿದ್ದು, ಅಲ್ಲಲ್ಲಿ ಭೂ ಕುಸಿತ, ಮರ ಮುರಿದು ಬಿದ್ದಿರುವ ಘಟನೆಗಳ ಸಹಿತ ಹಾನಿಗಳಾದ ಬಗ್ಗೆ ವರದಿಯಾಗಿದೆ. ಅಮ್ಮತ್ತಿ, ಮಾದಾಪುರ, ಗರಗಂದೂರು, ಕೂಡಿಗೆ ಮತ್ತಿತ್ತರ ಕಡೆಗಳಲ್ಲಿ ಮರಗಳು ಮುರಿದು ಬಿದ್ದಿದ್ದು, ವಿದ್ಯುತ್ ಕಂಬಗಳು ಮತ್ತು ತಂತಿಗಳು ತುಂಡರಿಸಲ್ಪಟ್ಟಿದೆ. ಇದರಿಂದ ಕೆಲವು ಭಾಗಗಳಲ್ಲಿ ಕಗ್ಗತ್ತಲು ಮನೆ ಮಾಡಿದೆ. ಸುರಿಯುತ್ತಿರುವ ಮಳೆಯ ನಡುವೆ ವಿದ್ಯುತ್ ಕಂಬಗಳ ಬದಲಿ ವ್ಯವಸ್ಥೆ ಹಾಗೂ ಲೈನ್‍ಗಳ ದುರಸ್ತಿ ಕಾರ್ಯ ಸಮಾರೋಪಾದಿಯಲ್ಲಿ ಸಾಗಿದೆಎಂದು ಚೆಸ್ಕಾಂ ಇಲಾಖೆ ಮಾಹಿತಿ ನೀಡಿದೆ. ರಸ್ತೆಗೆಅಡ್ಡಲಾಗಿ…

ಕೊಡಗು ಗಡಿಯಲ್ಲಿಮತ್ತೆ ಭೂಮಿ ಗಡಗಡ…
ಕೊಡಗು

ಕೊಡಗು ಗಡಿಯಲ್ಲಿಮತ್ತೆ ಭೂಮಿ ಗಡಗಡ…

July 2, 2022

ಮಡಿಕೇರಿ, ಜು.1- ಕೊಡಗು ಜಿಲ್ಲೆಯಲ್ಲಿ ವಾರದಲ್ಲಿ ಮೂರು ಬಾರಿ ಭೂಮಿ ಕಂಪಿಸಿತ್ತು. ಇಂದು ಮತ್ತೆ ಎರಡು ಬಾರಿ ಲಘು ಭೂಕಂಪನ ಸಂಭವಿಸಿದ್ದು, ಜಿಲ್ಲೆ ಜನರನ್ನು ಆತಂಕಕ್ಕೆ ದೂಡಿದೆ. ಕೊಡಗು ಗಡಿ, ದಕ್ಷಿಣ ಕನ್ನಡ ಜಿಲ್ಲೆಯ ಅಂಚಿನ `ಚೆಂಬು’ ಗ್ರಾಮ ವ್ಯಾಪ್ತಿಯಲ್ಲಿ ಎರಡು ಬಾರಿ ಭೂಮಿ ಕಂಪಿಸಿದೆ. ಇದನ್ನು ಜಿಲ್ಲಾ ವಿಪತ್ತು ನಿರ್ವ ಹಣಾ ಕೇಂದ್ರ ದೃಢಪಡಿಸಿದ್ದು, ಆತಂಕ ಪಡುವ ಅಗತ್ಯವಿಲ್ಲವೆಂದು ಸ್ಪಷ್ಟಪಡಿಸಿದೆ. ಚೆಂಬು ಗ್ರಾಮದಲ್ಲಿ ಶುಕ್ರವಾರ ಮುಂಜಾನೆ 1 ಗಂಟೆ 15 ನಿಮಿಷ 12 ಸೆಕೆಂಡ್‍ಗೆ ಭೂಮಿ…

ಕೊಡಗು ಜಿಲ್ಲೆಯಲ್ಲಿ ಗಾಳಿ ಸಹಿತ ಭಾರೀ ಮಳೆ
ಕೊಡಗು

ಕೊಡಗು ಜಿಲ್ಲೆಯಲ್ಲಿ ಗಾಳಿ ಸಹಿತ ಭಾರೀ ಮಳೆ

July 2, 2022

ಮಡಿಕೇರಿ,ಜು.1- ಕೊಡಗು ಜಿಲ್ಲೆಯ ವಿವಿಧ ಕಡೆ ಗಾಳಿ ಸಹಿತ ಭಾರೀ ಮಳೆಯಾಗಿದ್ದು, ಅಲ್ಲಲ್ಲಿ ಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿದೆ. ಪಾಲಿಬೆಟ್ಟ ಬಳಿ ವಿದ್ಯುತ್ ಟ್ರಾನ್ಸ್‍ಫಾರ್ಮರ್ ಮೇಲೆ ಮರ ಬಿದ್ದು, ಹಾನಿಯಾಗಿದೆ. ವಿದ್ಯುತ್ ಕಂಬಗಳನ್ನು ಬದಲಿಸುವ ಕಾರ್ಯ ಪ್ರಗತಿ ಯಲ್ಲಿದೆ ಎಂದು ಚೆಸ್ಕಾಂ ತಿಳಿಸಿದೆ. ಮಡಿಕೇರಿ-ಮಂಗಳೂರು ರಸ್ತೆಯ ಕಾಟ ಕೇರಿ ಬಳಿ ಸಂಜೆ ವೇಳೆ ಮರವೊಂದು ಬಿದ್ದ ಪರಿಣಾಮ ಕೆಲ ಕಾಲ ವಾಹನ ಸಂಚಾರ ಬಂದ್ ಆಗಿತ್ತು. ಅರಣ್ಯ ಇಲಾಖೆ ಮರವನ್ನು ಕಡಿದು ತೆರವುಗೊಳಿಸುವ ಮೂಲಕ ವಾಹನ ಸಂಚಾರಕ್ಕೆ…

ಕೊಡಗಲ್ಲಿ ವಾರದಲ್ಲಿ 3ನೇ ಬಾರಿ ಭೂ ಕಂಪನ
ಕೊಡಗು

ಕೊಡಗಲ್ಲಿ ವಾರದಲ್ಲಿ 3ನೇ ಬಾರಿ ಭೂ ಕಂಪನ

June 29, 2022

ಮಡಿಕೇರಿ, ಜೂ.28- ಕೊಡಗು ಜಿಲ್ಲೆ ಯಲ್ಲಿ ವಾರದಲ್ಲಿ ಮೂರನೇ ಬಾರಿ ಭೂಮಿ ಕಂಪಿಸಿದ್ದು, ಜಿಲ್ಲೆಯ ಜನರನ್ನು ಚಿಂತೆಗೀಡು ಮಾಡಿದೆ. ಜಿಲ್ಲೆಯ ಗಡಿಭಾಗದ ಗ್ರಾಮಗಳಲ್ಲಿ ಮಂಗಳವಾರ ಬೆಳಗ್ಗೆ 7 ಗಂಟೆ 45 ನಿಮಿಷ 47 ಸೆಕೆಂಡ್‍ನಲ್ಲಿ ಲಘು ಭೂ ಕಂಪನ ವಾಗಿದ್ದು, ಜನತೆ ಬೆಚ್ಚಿ ಬಿದ್ದಿದ್ದಾರೆ. ಪೆರಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇಲ್ಚೆಂಬು ಗ್ರಾಮದ 5.2 ಕಿ.ಮೀ ದೂರದ ವಾಯುವ್ಯ ದಿಕ್ಕಿನ 15 ಕಿ.ಮೀ ಆಳದಲ್ಲಿ ಭೂ ಕಂಪನದ ಕೇಂದ್ರ ಬಿಂದುವಿತ್ತು ಎಂದು ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ…

ಮಡಿಕೇರಿಯಲ್ಲಿ ಜನರಲ್ ಕೆ.ಎಸ್.ತಿಮ್ಮಯ್ಯ ಅವರ ಜನ್ಮ ದಿನಾಚರಣೆ
ಕೊಡಗು

ಮಡಿಕೇರಿಯಲ್ಲಿ ಜನರಲ್ ಕೆ.ಎಸ್.ತಿಮ್ಮಯ್ಯ ಅವರ ಜನ್ಮ ದಿನಾಚರಣೆ

April 1, 2022

ಮಡಿಕೇರಿ, ಮಾ.31- ಪದ್ಮಭೂಷಣ ಜನರಲ್ ಕೆ.ಎಸ್.ತಿಮ್ಮಯ್ಯ ಅವರ 116 ನೇ ಜನ್ಮ ದಿನಾಚರಣೆಯು ಗುರುವಾರ ಜಿಲ್ಲಾಡಳಿತ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಸ್ಮಾರಕ ಭವನ (ಸನ್ನಿಸೈಡ್)ದಲ್ಲಿ ನಡೆಯಿತು. ಜನರಲ್ ತಿಮ್ಮಯ್ಯ ಸ್ಮಾರಕ ಭವನದ ಅಮರ್ ಜವಾನ್ ಯುದ್ಧ ಸ್ಮಾರಕಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ನಾಗೇಶ್ ಅವರು ಪುಷ್ಪ ನಮನ ಸಲ್ಲಿಸಿದರು. ನಂತರ ಜನರಲ್ ತಿಮ್ಮಯ್ಯ ಸ್ಮಾರಕ ಭವನಕ್ಕೆ ಭೇಟಿ ನೀಡಿ ಜನರಲ್ ತಿಮ್ಮಯ್ಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ನಂತರ ಜನರಲ್ ತಿಮ್ಮಯ್ಯ ಸ್ಮಾರಕ ಭವನ ವನ್ನು…

ಪರವಾನಗಿ ಇಲ್ಲದೆ ಬಂದೂಕು ಹೊಂದಲು ಕೊಡವರಿಗೆ ಅವಕಾಶ
ಕೊಡಗು

ಪರವಾನಗಿ ಇಲ್ಲದೆ ಬಂದೂಕು ಹೊಂದಲು ಕೊಡವರಿಗೆ ಅವಕಾಶ

March 30, 2022

ರಾಜ್ಯಕ್ಕೆ ಸುಪ್ರೀಂಕೋರ್ಟ್ ನೋಟಿಸ್ ನವದೆಹಲಿ, ಮಾ. ೨೯- ಪರವಾನಗಿ ಇಲ್ಲದೆ ಬಂದೂಕುಗಳನ್ನು ಹೊಂದಲು ಮತ್ತು ಸಾಗಿಸಲು ಕೊಡವ ಸಮುದಾಯದವರಿಗೆ ನೀಡಿದ ಅವಕಾಶ ವನ್ನು ಪ್ರಶ್ನೆ ಮಾಡಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮುಖ್ಯ ನ್ಯಾ. ಎನ್.ವಿ. ರಮಣ ನೇತೃತ್ವದ ತ್ರಿಸದಸ್ಯ ಪೀಠ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಕೊಡವರಿಗೆ ನೀಡಿದ ಅನುಮತಿ ಸಾಂವಿಧಾನಿಕ ಸಿಂಧುತ್ವ ಹೊಂದಿದೆ. ಹೈಕೋರ್ಟ್ ನೀಡಿದ ಆದೇಶ ವನ್ನು ಪ್ರಶ್ನಿಸಿ ನಿವೃತ್ತ ಕ್ಯಾಪ್ಟನ್ ಚೇತನ ವೈ.ಕೆ. ಎನ್ನು ವರು ಸುಪ್ರೀಂಕೋರ್ಟ್ಗೆ ಮೇಲ್ಮನವಿ…

ಕೊಡಗಿನಲ್ಲಿ ಮುಂದುವರೆದ ವ್ಯಾಘ್ರನ ಅಟ್ಟಹಾಸ
ಕೊಡಗು

ಕೊಡಗಿನಲ್ಲಿ ಮುಂದುವರೆದ ವ್ಯಾಘ್ರನ ಅಟ್ಟಹಾಸ

March 30, 2022

ಗೋಣ ಕೊಪ್ಪ, ಮಾ.೨೯- ಕೊಡಗಿನಲ್ಲಿ ವ್ಯಾಘ್ರನ ಅಟ್ಟಹಾಸ ಮುಂದುವರೆದಿದ್ದು, ಮಂಗಳವಾರ ಸಮೀಪದ ಕುಂದಾ ಗ್ರಾಮದಲ್ಲಿ ಹುಲಿ ದಾಳಿಯಿಂದ ಕರುವೊಂದು ಸಾವನ್ನಪ್ಪಿರುವ ಘಟನೆ ನಡೆದಿದೆ. ಸೋಮವಾರ ರುದ್ರಗುಪ್ಪೆ ಗ್ರಾಮದ ಕಾಫಿ ತೋಟದಲ್ಲಿ ಹುಲಿ ದಾಳಿ ಯಿಂದ ಕಾರ್ಮಿಕನೊಬ್ಬ ಸಾವನ್ನಪ್ಪಿ ದ್ದನು. ಮಂಗಳವಾರ ರುದ್ರಗುಪ್ಪೆ ಗ್ರಾಮದಿಂದ ಕೇವಲ ೩ ಕಿ.ಮೀ ದೂರದಲ್ಲಿರುವ ಕುಂದಾ ಗ್ರಾಮದಲ್ಲಿ ಹುಲಿ ದಾಳಿಗೆ ಕರು ಬಲಿಯಾಗಿದ್ದು, ಇದು ನರಭಕ್ಷಕ ಹುಲಿಯಾಗಿರಬಹುದು ಎಂದು ಶಂಕಿಸಲಾಗಿದೆ. ರೈತರಲ್ಲಿ ಹಾಗೂ ಸ್ಥಳೀಯರಲ್ಲಿ ಮತ್ತಷ್ಟು ಆತಂಕ ಉಂಟಾಗಿದೆ. ಕರು ಸಾವು: ಗ್ರಾಮದ…

ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ
ಕೊಡಗು

ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ

March 30, 2022

 ಸೋಮವಾರ ರಾತ್ರಿ ಯಿಡೀ ಶವವಿಟ್ಟು ಪ್ರತಿಭಟನೆ  ಅರಣ್ಯ ಇಲಾಖೆಯಿಂದ ಮೃತನ ಪತ್ನಿಗೆ ಉದ್ಯೋಗ, ೫ ವರ್ಷಗಳವರೆಗೆ ೨ ಸಾವಿರ ರೂ. ಮಾಸಾಶನ, ಮಕ್ಕಳಿಗೆ ಉಚಿತ ಶಿಕ್ಷಣದ ಭರವಸೆ  ತಾಲೂಕು ಆಡಳಿತದಿಂದ ಪಡಿತರ, ಇತರ ಸೌಲಭ್ಯ ಕಲ್ಪಿಸುವ ಭರವಸೆ  ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ, ಡಿವೈಎಸ್‌ಪಿಗೆ ದೂರು ವಿರಾಜಪೇಟೆ, ಮಾ.೨೯- ತಾಲೂಕಿನ ರುದ್ರಗುಪ್ಪೆ ಗ್ರಾಮದಲ್ಲಿ ಮಂಗಳವಾರ ಹುಲಿ ದಾಳಿಯಿಂದ ಕೂಲಿ ಕಾರ್ಮಿಕ ಗಣೇಶ್‌ಪುಟ್ಟು(೨೯) ಸಾವನ್ನಪ್ಪಿದ್ದು, ಘಟನೆ ಸಂಬAಧ ಅರಣ್ಯ ಇಲಾಖೆ ಅಧಿಕಾರಿಗಳ…

ನಿರಂತರ ಹುಲಿ ದಾಳಿ:ಸರ್ಕಾರಕ್ಕೆ ಬೇಡವಾದ ಕೊಡಗು
ಕೊಡಗು

ನಿರಂತರ ಹುಲಿ ದಾಳಿ:ಸರ್ಕಾರಕ್ಕೆ ಬೇಡವಾದ ಕೊಡಗು

March 30, 2022

ಮಡಿಕೇರಿ, ಮಾ.೨೯- ಕೊಡಗು ಜಿಲ್ಲೆಯಲ್ಲಿ ವನ್ಯಜೀವಿಗಳ ದಾಳಿ ನಿರಂತರವಾಗಿ ನಡೆಯುತ್ತಿದ್ದು, ಮಾನವ ಜೀವಹಾನಿಯಾಗುತ್ತಿದ್ದರೂ ಸಮಸ್ಯೆಯ ಗಂಭೀರತೆಯನ್ನು ಅರಿಯುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಅರಣ್ಯ ಪ್ರದೇಶದಿಂದ ಕೂಡಿರುವ ಕೊಡಗು ಜಿಲ್ಲೆಯನ್ನು ಅರಣ್ಯ ಸಚಿವರು ಮರೆತಿದ್ದಾರೆ ಎಂದು ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ ಆರೋಪಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು, ದಕ್ಷಿಣ ಕೊಡಗಿನ ರುದ್ರಗುಪ್ಪೆಯಲ್ಲಿ ಹುಲಿ ದಾಳಿಯಿಂದ ಕಾರ್ಮಿಕ ಬಲಿಯಾಗಿ ರುವ ಘಟನೆ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ. ಕಳೆದ ೫ ವರ್ಷಗಳಿಂದ ಕೊಡಗು ಜಿಲ್ಲೆಯನ್ನು ವನ್ಯಜೀವಿಗಳು ಅತಿಯಾಗಿ ಕಾಡುತ್ತಿವೆ. ಕಳೆದ…

ಡಿಎಫ್‌ಓ ಚಕ್ರಪಾಣ ವರ್ಗಾವಣೆಗೆ ಎಂಎಲ್‌ಸಿ ವೀಣಾ ಅಚ್ಚಯ್ಯ ಆಗ್ರಹ
ಕೊಡಗು

ಡಿಎಫ್‌ಓ ಚಕ್ರಪಾಣ ವರ್ಗಾವಣೆಗೆ ಎಂಎಲ್‌ಸಿ ವೀಣಾ ಅಚ್ಚಯ್ಯ ಆಗ್ರಹ

March 30, 2022

ಮಡಿಕೇರಿ, ಮಾ.೨೯- ಕೊಡಗಿನ ಡಿಎಫ್‌ಓ ಚಕ್ರಪಾಣ ಅವರನ್ನು ಕೂಡಲೇ ವರ್ಗಾವಣೆ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಸರ್ಕಾರವನ್ನು ಆಗ್ರಹಿಸಿದರು. ಸದನದ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ವನ್ಯ ಪ್ರಾಣ – ಮಾನವ ಸಂಘರ್ಷ ಮಿತಿ ಮೀರಿದ್ದು, ಸರ್ಕಾರ ಕೊಡಗಿನ ಜನರ ನೆರವಿಗೆ ಬರಬೇಕು ಎಂದ ಅವರು, ವಿರಾಜ ಪೇಟೆ ರುದ್ರಗುಪ್ಪೆ ಗ್ರಾಮದಲ್ಲಿ ಹುಲಿ ದಾಳಿಯಿಂದ ಕಾರ್ಮಿಕ ಮೃತ ಪಟ್ಟಿದ್ದಾನೆ. ಆದರೆ, ಅಲ್ಲಿನ ಡಿಎಫ್‌ಓ ಚಕ್ರಪಾಣ ಅವರು ಮಾತ್ರ ಯಾವುದೇ…

1 2 3 4 5 6 184
Translate »