ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದ ಸಂಪತ್ ಸಹೋದರನ ಮದುವೆಯಲ್ಲಿ ಜೀವಿಜಯ ಫೋಟೊ ವೈರಲ್
ಕೊಡಗು

ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದ ಸಂಪತ್ ಸಹೋದರನ ಮದುವೆಯಲ್ಲಿ ಜೀವಿಜಯ ಫೋಟೊ ವೈರಲ್

August 23, 2022

ಮಡಿಕೇರಿ,ಆ.22- ಮಾಜಿ ಸಿಎಂ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದು ವಿವಾದ ಸೃಷ್ಟಿಸಿರುವ ಸಂಪತ್ ಸಹೋದರನ ಮದುವೆ ಸಮಾರಂಭದಲ್ಲಿ ಮಾಜಿ ಸಚಿವ ಬಿ.ಎ. ಜೀವಿಜಯ ಪಾಲ್ಗೊಂಡಿರುವ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಿನ್ನೆ ದಿನ ಸಂಪತ್ ನನಗೆ ಗೊತ್ತಿಲ್ಲ. ಆತ ಕಾಂಗ್ರೆಸ್ ಕಾರ್ಯಕರ್ತನೂ ಅಲ್ಲ ಎಂದು ಜೀವಿಜಯ ಹೇಳಿದ್ದರು.

ಈ ಫೋಟೋ ವೈರಲ್ ಕುರಿತು ಸೋಮವಾರಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾ ಡಿದ ಶಾಸಕ ಅಪ್ಪಚ್ಚು ರಂಜನ್, ಜೀವಿಜಯ ಅವರು ಸಂಪತ್ ಸಹೋದರನ ಮದುವೆಗೆ ಹೋಗಿ ರುವ ಫೋಟೋ ವೈರಲ್ ಆಗಿದೆ. ಹೀಗಿದ್ದರೂ ಜೀವಿಜಯ ಯಾಕೆ ಸುಳ್ಳು ಹೇಳುತ್ತಿದ್ದಾರೋ ಗೊತ್ತಿಲ್ಲ. ಮಾಧÀ್ಯಮಗಳಿಗೂ ಜೀವಿಜಯ ತಪ್ಪು ಮಾಹಿತಿ ನೀಡಿದ್ದಾರೆ ಎಂದರು.

ಶಾಸಕ ಅಪ್ಪಚ್ಚು ರಂಜನ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಜೀವಿಜಯ, ಜೀವನದಲ್ಲಿ ನನ್ನದೇ ಆದ ಕೆಲವು ಸಾಮಾಜಿಕ ಮೌಲ್ಯಗಳನ್ನು ಅಳವಸಿಕೊಂಡಿರುವ ಕಾರಣ ನನ್ನ ಮನೆಗೆ ಸಹಕಾರ ಕೋರಿ ಬರುವವರಿಗೆ ಸಹಾಯ ಮಾಡುತ್ತೇನೆ. ಜೊತೆಗೆ ಅಂತಹವರ ಶುಭ ಸಮಾರಂಭ, ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ಮದುವೆ ಸಮಾರಂಭ ಒಂದರಲ್ಲಿ ಸಂಪತ್ ಜೊತೆ ಕಾಣಿಸಿಕೊಂಡಿರುವ ಬಗ್ಗೆ ನನಗೆ ಸರಿಯಾದ ಮಾಹಿತಿ ಇಲ್ಲ. ಇದು ಬಿಜೆಪಿಗರು ತಿರುಚಿದ ಫೋಟೋ ಕೂಡ ಆಗಿರ ಬಹುದು ಎಂದರು. ಉದ್ಯಮ ವಹಿವಾಟಿನಲ್ಲಿ ತೊಡಗಿಸಿಕೊಂಡಿರುವ ನನ್ನ ಪುತ್ರನ ಬಳಿ ಚಾಲಕನಾಗಿ ಕಾರ್ಯನಿರ್ವಹಿಸುತ್ತಿರುವ ರಾಜು ಎಂಬವರ ಸಂಬಂಧಿ ಈ ಸಂಪತ್ ಎಂಬುದು ಇತ್ತೀಚೆಗಷ್ಟೇ ತಿಳಿದು ಬಂದಿದೆ ಎಂದು ಜೀವಿಜಯ ಹೇಳಿದ್ದಾರೆ.

Translate »