ಮಡಿಕೇರಿ, ಡಿ.5- ಪಶ್ಚಿಮಘಟ್ಟ ಸಾಲಿನ ಕೊಡಗಿನ ಸ್ವಾದಭರಿತ ವೈಶಿಷ್ಟ್ಯ ಪೂರ್ಣವಾದ ಕಾಫಿ ಮತ್ತು ಅದರ ಮೌಲ್ಯವರ್ಧಿತ ಉತ್ಪನ್ನಗಳನ್ನು ಹೊರ ಜಗತ್ತಿಗೆ ಪರಿಚಯಿಸಲು ಮತ್ತು ಆಂತರಿಕ ಕಾಫಿ ಮಾರುಕಟ್ಟೆಯನ್ನು ಬಲಪಡಿಸುವ ಪ್ರಮುಖ ಉದ್ದೇಶದಿಂದ ಡಿ.10ಮತ್ತು 11ರಂದು ರಾಜಾಸೀಟಿನಲ್ಲಿ `ಕೊಡಗು ಕಾಫಿ ಉತ್ಸವ-2022′ ಅನ್ನು ಆಯೋ ಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ತಿಳಿಸಿದ್ದಾರೆ. ನಗರದ ಕಾಫಿ ಮಂಡಳಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರು, ಜಿಲ್ಲಾಡಳಿತ, ಕಾಫಿ ಮಂಡಳಿ…
ರಾಷ್ಟç ಮಟ್ಟಕ್ಕೆ ಆಯ್ಕೆ
November 27, 2022ಮಡಿಕೇರಿ,ನ.೨೬- ಮಡಿಕೇರಿಯಲ್ಲಿ ನಡೆದ ರಾಜ್ಯ ಮಟ್ಟದ ಪ್ರಾಥಮಿಕ ವಿಭಾಗದ ೧೪ ವರ್ಷದ ಬಾಲಕಿಯರ ಹಾಕಿ ಪಂದ್ಯಾವಳಿ ಯಲ್ಲಿ ಬೆಳಗಾವಿ ತಂಡವನ್ನು ೪-೦ ಗೋಲುಗಳಿಂದ ಸೋಲಿಸುವ ಮೂಲಕ ಕೊಡಗು ತಂಡದ ಟಿ.ಶೆಟ್ಟಿಗೇರಿ ರೂಟ್ಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಾದ ೬ನೇ ತರಗತಿಯ ನೇನಾ ಕರುಂಬಯ್ಯ ಹಾಗೂ ೭ನೇ ತರಗತಿಯ ಜಾಗೃತಿ ಕರುಂಬಯ್ಯ ರಾಷ್ಟçಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರು ನೆಮ್ಮಲೆ ಗ್ರಾಮದ ಚಟ್ಟಂಗಡ ರಂಜು ಕರುಂಬಯ್ಯ ಹಾಗೂ ರಶ್ಮಿ ಕರುಂಬಯ್ಯ ದಂಪತಿ ಪುತ್ರಿಯರಾಗಿದ್ದಾರೆ.
ಅರೆಸೇನಾ ಪಡೆ, ಮಾಜಿ ಯೋಧರ ಬಗ್ಗೆ ಕೇಂದ್ರ, ರಾಜ್ಯ ಸರ್ಕಾರದಿಂದ ನಿರ್ಲಕ್ಷ್ಯ ಡಿ.13, ಬೆಂಗಳೂರು ಚಲೋ
November 23, 2022ಮಡಿಕೇರಿ, ನ.22- ಅರೆಸೇನಾಪಡೆ ಯೋಧರು ಹಾಗೂ ಮಾಜಿ ಯೋಧರ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿರುವ ಕೊಡಗು ಜಿಲ್ಲಾ ಅರೆ ಸೇನಾಪಡೆ ನಿವೃತ್ತ ಯೋಧರ ಒಕ್ಕೂಟ, ಡಿ.13ರಂದು `ಬೆಂಗಳೂರು ಚಲೋ’ ಹೋರಾಟದ ಮೂಲಕ ವಿವಿಧ ಬೇಡಿಕೆಗಳನ್ನು ಸರ್ಕಾರದ ಮುಂದಿಡಲು ನಿರ್ಧರಿಸಿರುವುದಾಗಿ ತಿಳಿಸಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಪ್ರಮುಖರು ಸರ್ಕಾರದ ನಿರ್ಲಕ್ಷ್ಯ ಧೋರಣೆ ಯನ್ನು ಖಂಡಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದರು. 2001ರ ಡಿ.13ರಂದು ಸಂಸತ್…
ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಡಿಸೆಂಬರ್‍ನಲ್ಲಿ ಗ್ರಾಪಂ ನೌಕರರ ಭಾರೀ ಪ್ರತಿಭಟನೆ
November 17, 2022ಮಡಿಕೇರಿ,ನ.16- ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಲೇ ಇದೆ, ಜನಸಾಮಾನ್ಯರು ಜೀವನ ಸಾಗಿಸುವುದೇ ಕಷ್ಟವಾಗಿದೆ. ಈ ಸಂದಿಗ್ಧ ಪರಿಸ್ಥಿತಿಯಲ್ಲೂ ಸರ್ಕಾರ ಕನಿಷ್ಠ ವೇತನ ನೀಡದೆ ವಂಚಿಸುತ್ತಿದೆ ಎಂದು ಕರ್ನಾಟಕ ರಾಜ್ಯ ಗ್ರಾಪಂ ನೌಕರರ ಸಂಘದ ಕೊಡಗು ಜಿಲ್ಲಾ ಸಮಿತಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಡೆದ ಗ್ರಾಪಂ ನೌಕರರ ಸಂಘದ ಸಭೆಯಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಡಿಸೆಂಬರ್ ತಿಂಗಳಿನಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಸಿ ಸರ್ಕಾರದ ಗಮನ ಸೆಳೆಯಲು ನಿರ್ಧಾರ ಕೈಗೊಳ್ಳಲಾಯಿತು. ಗ್ರಾಪಂ ನೌಕರರಿಗೆ…
ಹದಗೆಟ್ಟ ರಸ್ತೆ ದುರಸ್ತಿ ಬಗ್ಗೆ ಪ್ರಶ್ನಿಸಿದರೆ ವಿರಾಜಪೇಟೆ ಶಾಸಕರಿಂದ ಧಮ್‍ಕಿ
November 17, 2022ಶ್ರೀಮಂಗಲ, ನ.16- ಮೂಲಭೂತ ಸಮಸ್ಯೆಗಳ ಬಗ್ಗೆ ಜನಪ್ರತಿ ನಿಧಿಗಳು ಮತ್ತು ಅಧಿಕಾರಿಗಳನ್ನು ಪ್ರಶ್ನಿಸುವುದು ಪ್ರತಿಯೋರ್ವ ಪ್ರಜೆಯ ಹಕ್ಕಾಗಿದೆ. ಆದರೆ ಕೊಡಗಿನಲ್ಲಿ ಮೂಲಭೂತ ಸಮಸ್ಯೆಗಳಾದ ರಸ್ತೆಯ ಬಗ್ಗೆ ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಅವರನ್ನು ಕೇಳಿದರೆ ಧಮಕಿ ಹಾಕಲಾಗುತ್ತಿದ್ದು, ಭಯದ ನೆರಳಿನಲ್ಲಿ ಬದುಕುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕೊಡಗು ಜಿಲ್ಲಾ, ಬಿಜೆಪಿ ಯುವ ಮೋರ್ಚಾ ಮಾಜಿ ಅಧ್ಯಕ್ಷ ಚೊಟ್ಟೆಕ್’ ಮಾಡ ರಾಜೀವ್ ಬೋಪಯ್ಯ ಮತ್ತು ಕೊಡಗು ಸಂರಕ್ಷಣಾ ವೇದಿಕೆ ಉಪಾಧ್ಯಕ್ಷ ಮಚ್ಚಮಾಡ ಅನೀಶ್ ಮಾದಪ್ಪ ತಿಳಿಸಿದ್ದಾರೆ. ಪೆÇನ್ನಂಪೇಟೆಯಲ್ಲಿ ಸುದ್ದಿಗೋಷ್ಠಿ ನಡೆಸಿ…
ಗ್ರೇಟರ್ ರಾಜಸೀಟು ಅಭಿವೃದ್ಧಿ ಕಾಮಗಾರಿ ವೀಕ್ಷಿಸಿದ ಡಿಸಿ
November 11, 2022ಮಡಿಕೇರಿ, ನ.10- ರಾಜಸೀಟು ಅಭಿವೃದ್ಧಿ ಸಮಿತಿ ಸಭೆಯು ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ ಅವರ ಅಧ್ಯಕ್ಷತೆಯಲ್ಲಿ ನಗರದ ರಾಜ ಸೀಟು ಉದ್ಯಾನವನದಲ್ಲಿ ಗುರುವಾರ ನಡೆಯಿತು. ಗ್ರೇಟರ್ ರಾಜಸೀಟು ಅಭಿವೃದ್ಧಿ ಕಾಮಗಾರಿ ವೀಕ್ಷಣೆ ನಂತರ ನಡೆದ ಸಭೆಯಲ್ಲಿ ಮಾತ ನಾಡಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ರಾಜಸೀಟು ಅಭಿವೃದ್ಧಿ ಸಂಬಂಧಿಸಿ ದಂತೆ ಲೋ ರೋಪ್ವೇ, ಕಿಡ್ಸ್ ನೆಟ್ ಕ್ಲೈಂಬಿಂಗ್ ಸೇರಿದಂತೆ ಮಕ್ಕಳು ಆಟವಾಡುವ ಸಾಹಸ ಚಟುವಟಿಕೆಗಳಿಗೆ ಅನುಮೋದನೆ ನೀಡಿದರು. ರಾಜಸೀಟು ಉದ್ಯಾನವನದ ನಿರ್ಗಮನದ ಬಾಗಿಲು, ಟಿಕೇಟ್ ಕೌಂಟರ್ ಮುಂಭಾಗದಲ್ಲಿ ಸ್ಟೀಲ್ ರೈಲಿಂಗ್…
ನ.12, ಜಿಲ್ಲಾ ನ್ಯಾಯಾಲಯದ ನೂತನ ಕಟ್ಟಡ ಉದ್ಘಾಟನೆ
November 10, 2022ಮಡಿಕೇರಿ,ನ.9- ಮಡಿಕೇರಿಯಲ್ಲಿ ನೂತನ ವಾಗಿ ನಿರ್ಮಾಣಗೊಂಡಿರುವ ಜಿಲ್ಲಾ ನ್ಯಾಯಾಲಯದ ಸಂಕೀರ್ಣ ನ.12ರಂದು ಉದ್ಘಾಟನೆಗೊಳ್ಳಲಿದ್ದು, ನ.14ರಿಂದ ಕಾರ್ಯ, ಕಲಾಪಗಳು ಆರಂಭಗೊಳ್ಳಲಿವೆ ಎಂದು ಬಾರ್ ಅಸೋಸಿಯೇಷನ್ ಅಧ್ಯಕ್ಷ, ವಕೀಲ ಕೆ.ಡಿ.ದಯಾನಂದ್ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಜಿಲ್ಲಾ ನ್ಯಾಯಾಂಗ, ಕೊಡಗು-ಮಡಿಕೇರಿ ಲೋಕೋಪಯೋಗಿ ಇಲಾಖೆ ಮತ್ತು ಕೊಡಗು ಜಿಲ್ಲಾ ಬಾರ್ ಅಸೋಸಿಯೇಷನ್ ಸಂಯುಕ್ತಾಶ್ರಯದಲ್ಲಿ ಮಡಿಕೇರಿಯ ವಿದ್ಯಾನಗರದಲ್ಲಿ ನೂತನ ವಾಗಿ ನಿರ್ಮಿಸಲಾದ ಜಿಲ್ಲಾ ನ್ಯಾಯಾಲಯ ಸಂಕೀರ್ಣವನ್ನು ಭಾರತದ ಸರ್ವೋಚ್ಚ ನ್ಯಾಯಾ ಲಯ ನ್ಯಾಯಾಧೀಶರಾದ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಕರ್ನಾಟಕ…
ವಿದೇಶದಲ್ಲಿ ಕೆಲಸದ ಆಮಿಷವೊಡ್ಡಿ 1.50 ಲಕ್ಷ ರೂ. ವಂಚಿಸಿದ್ದ ವಂಚಕನ ಬಂಧನ
November 9, 2022ಮಡಿಕೇರಿ, ನ.8- ವಿದೇಶದಲ್ಲಿ ಉದ್ಯೋಗ ಕೊಡಿಸು ವುದಾಗಿ ಹೇಳಿ ಯುವಕನೊಬ್ಬನಿಂದ 1.50 ಲಕ್ಷ ರೂ.ಗಳನ್ನು ಪಡೆದು ವಂಚಿಸಿದ ಘಟನೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ್ದು, ಪ್ರಕರಣಕ್ಕೆ ಸಂಬಂ ಧಿಸಿದಂತೆ ಕೇರಳ ರಾಜ್ಯ ಕಾಸರಗೋಡು ಮೂಲದ ಆರೋಪಿ ಎಂ.ಹೆಚ್. ಶ್ರೀನಾಥ್(45) ಎಂಬಾತನನ್ನು ಮಡಿಕೇರಿ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ಹಿನ್ನೆಲೆ: ಮೂಲತಃ ಮಡಿಕೇರಿ ತಾಲೂಕು ಸಂಪಾಜೆ ಹೋಬಳಿ ಬಾಲಂಬಿ ಗ್ರಾಮ, ಎಂ.ಚೆಂಬು ನಿವಾಸಿ ಜೇಮ್ಸ್ ಜೋಸೆಫ್(24) ಎಂಬವರಿಗೆ ತಮ್ಮ ಧರ್ಮಗುರುಗಳ ಮೂಲಕ ಕೇರಳ ಕಾಸರಗೋಡು ಮುಟ್ಟತ್ತೋಡಿ…
ಮೈಸೂರು-ಕುಶಾಲನಗರ ರೈಲು ಮಾರ್ಗ ಮೈಸೂರಿಂದ ಕಂಪಲಾಪುರವರೆಗೆ ಸರ್ವೇ ಕಾರ್ಯ ಪೂರ್ಣ
October 20, 2022ಮಡಿಕೇರಿ,ಅ.19- ಮೈಸೂರು-ಬೆಳಗೊಳ- ಕುಶಾಲನಗರವರೆಗಿನ ರೈಲ್ವೇ ಮಾರ್ಗದ ಅಂತಿಮ ಹಂತದ ಸರ್ವೆ ಕಾರ್ಯ ಮೈಸೂರಿಂದ ಕಂಪಲಾಪುರವರೆಗೆ ಪೂರ್ಣ ಗೊಂಡಿದೆ. ಮೈಸೂರು-ಕೊಪ್ಪವರೆಗಿನ 87.2 ಕಿ.ಮೀ ಸರ್ವೇ ಕಾರ್ಯದ ಪೈಕಿ ಪಿರಿಯಾಪಟ್ಟಣದ ಕಂಪಲಾಪುರವರೆಗೆ ಸರ್ವೇ ಕಾರ್ಯ ಮುಕ್ತಾಯಗೊಂಡಿದೆ. ಒಟ್ಟು 1854.62 ಕೋಟಿ ರೂ. ವೆಚ್ಚದ ಉದ್ದೇಶಿತ ರೈಲ್ವೇ ಯೋಜನೆಗೆ 2019ರ ಫೆಬ್ರವರಿ 27ರಂದು ರೈಲ್ವೇ ಸಚಿವಾ ಲಯ ಅನುಮೋದನೆ ನೀಡಿತ್ತು. ಈ ನಡುವೆ 2020ರ ಅಕ್ಟೋಬರ್ ತಿಂಗಳಲ್ಲಿ ನೈರುತ್ಯ ರೈಲ್ವೆಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ(ನಿರ್ಮಾಣ) ಮೈಸೂರು-ಬೆಳಗೊಳ-ಕುಶಾಲನಗರ `ಬ್ರಾಡ್ಗೇಜ್’ ರೈಲ್ವೇ ಮಾರ್ಗದ…
ದೇವಟ್ ಪರಂಬುವಿನಲ್ಲಿ ಹಿರಿಯರ ಸ್ಮರಣೆ
October 19, 2022ಮಡಿಕೇರಿ, ಅ.18- ತಲಕಾವೇರಿಯಲ್ಲಿ ಪವಿತ್ರ ಕಾವೇರಿ ತೀರ್ಥೋದ್ಭವವಾದ ಮರುದಿನ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ದೇವಟ್ ಪರಂಬುವಿನಲ್ಲಿ ಹಿರಿಯರ ಸ್ಮರಣೆ ಕಾರ್ಯಕ್ರಮ ನಡೆಯಿತು. ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ದೇವಟ್ ಪರಂಬು ವಿಗೆ ತೆರಳಿದ ಪ್ರಮುಖರು ಹಿರಿಯರಿಗೆ ಪುಷ್ಪನಮನ ಸಲ್ಲಿಸಿದರು. ಕಾವೇರಿ ತುಲಾ ಸಂಕ್ರಮಣದ ಸಂಪ್ರದಾಯದಂತೆ ಕಾವೇರಿ ತೀರ್ಥ, ದೋಸೆ ಮತ್ತು ಪುಟ್ಟ್ ಎಂಬ ಭಕ್ಷ್ಯವನ್ನು ಹಾಗೂ ಗಿಡಮೂಲಿಕೆಯಾದ ಬೊತ್ ಬಳ್ಳಿಯನ್ನು ಇಡಲಾಯಿತು. ನಂತರ ಪವಿತ್ರ ಕಾವೇರಿ ತೀರ್ಥೋ ದ್ಭವ ಮತ್ತು ಜನಪದೀಯ ಬುಡಕಟ್ಟು…