ಹದಗೆಟ್ಟ ರಸ್ತೆ ದುರಸ್ತಿ ಬಗ್ಗೆ ಪ್ರಶ್ನಿಸಿದರೆ ವಿರಾಜಪೇಟೆ ಶಾಸಕರಿಂದ ಧಮ್‍ಕಿ
ಕೊಡಗು

ಹದಗೆಟ್ಟ ರಸ್ತೆ ದುರಸ್ತಿ ಬಗ್ಗೆ ಪ್ರಶ್ನಿಸಿದರೆ ವಿರಾಜಪೇಟೆ ಶಾಸಕರಿಂದ ಧಮ್‍ಕಿ

November 17, 2022

ಶ್ರೀಮಂಗಲ, ನ.16- ಮೂಲಭೂತ ಸಮಸ್ಯೆಗಳ ಬಗ್ಗೆ ಜನಪ್ರತಿ ನಿಧಿಗಳು ಮತ್ತು ಅಧಿಕಾರಿಗಳನ್ನು ಪ್ರಶ್ನಿಸುವುದು ಪ್ರತಿಯೋರ್ವ ಪ್ರಜೆಯ ಹಕ್ಕಾಗಿದೆ. ಆದರೆ ಕೊಡಗಿನಲ್ಲಿ ಮೂಲಭೂತ ಸಮಸ್ಯೆಗಳಾದ ರಸ್ತೆಯ ಬಗ್ಗೆ ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಅವರನ್ನು ಕೇಳಿದರೆ ಧಮಕಿ ಹಾಕಲಾಗುತ್ತಿದ್ದು, ಭಯದ ನೆರಳಿನಲ್ಲಿ ಬದುಕುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕೊಡಗು ಜಿಲ್ಲಾ, ಬಿಜೆಪಿ ಯುವ ಮೋರ್ಚಾ ಮಾಜಿ ಅಧ್ಯಕ್ಷ ಚೊಟ್ಟೆಕ್’ ಮಾಡ ರಾಜೀವ್ ಬೋಪಯ್ಯ ಮತ್ತು ಕೊಡಗು ಸಂರಕ್ಷಣಾ ವೇದಿಕೆ ಉಪಾಧ್ಯಕ್ಷ ಮಚ್ಚಮಾಡ ಅನೀಶ್ ಮಾದಪ್ಪ ತಿಳಿಸಿದ್ದಾರೆ.

ಪೆÇನ್ನಂಪೇಟೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಶ್ನೆ ಮಾಡಿದವರಿಗೆ ಸೂಕ್ತ ರೀತಿಯಲ್ಲಿ ಉತ್ತರ ನೀಡುವುದು ಶಾಸಕ ಕೆ.ಜಿ.ಬೋಪಯ್ಯ ಅವರ ಕರ್ತವ್ಯ. ಅದು ಬಿಟ್ಟು ಪಕ್ಷದ ಪದಾಧಿಕಾರಿಗಳ ಮೂಲಕ ತೇಜೋವದೆ ಮಾಡುವುದು, ಪ್ರಜಾಪ್ರಭುತ್ವದ ನೀತಿಯಲ್ಲ. ಇದು ನಿರಂಕುಶತ್ವದ ಲಕ್ಷಣ ಎಂದು ಖಂಡಿಸಿದರಲ್ಲದೆ ಇದರ ನೈತಿಕ ಹೊಣೆ ಹೊತ್ತು ಬೋಪಯ್ಯ ನವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದರು.

ಪೆÇನ್ನಂಪೇಟೆ- ಕಾನೂರು-ನಿಟ್ಟೂರು ರಸ್ತೆ ಅಭಿವೃದ್ಧಿಗೆ ಟೆಂಡರ್ ಆಗಿ ಮೂರು ವರ್ಷ ಆದರೂ ಗುತ್ತಿಗೆದಾರರು ಕೆಲಸ ಮಾಡುತ್ತಿಲ್ಲ. ಟೆಂಡರ್ ಅನ್ನು ರದ್ದು ಮಾಡಲು ಬಿಡುತ್ತಿಲ್ಲ ಎಂದು ಬೋಪಯ್ಯ ಅವರು ಮಾಧ್ಯಮ ಹೇಳಿಕೆಯಲ್ಲಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಇಂತಹ ಸ್ಥಿತಿಯಲ್ಲಿ ಶಾಸಕರಾಗಿ ಬೋಪಯ್ಯ ಮುಂದುವರಿಯುವುದರಲ್ಲಿ ಅರ್ಥವಿಲ್ಲ. ಆದ್ದರಿಂದ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದು ಸೂಕ್ತ ಎಂದು ರಾಜೀವ್ ಬೋಪಯ್ಯ ಅವರು ಅಭಿಪ್ರಾಯಪಟ್ಟರು.

ಕಳೆದ ನಾಲ್ಕು ಅವಧಿಯಿಂದ ಶಾಸಕರಾಗಿರುವ ಬೋಪಯ್ಯ ವನ್ಯಪ್ರಾಣಿ ಹಾಗೂ ಮಾನವ ಸಂಘರ್ಷ ಶಾಶ್ವತ ಪರಿಹಾರ ಕಂಡು ಹಿಡಿಯಲು ವಿಫಲರಾಗಿದ್ದು, ಗೋವುಗಳನ್ನು ಅತ್ಯಂತ ಪ್ರೀತಿಯಲ್ಲಿ ಸಾಕುವ ಜಿಲ್ಲೆಯ ಜನತೆಗೆ ಇಂದು ಹುಲಿ ಹಾವಳಿಯಿಂದ ಗೋವುಗಳ ಸಾಕುವುದನ್ನು ಬಿಟ್ಟಿದ್ದಾರೆ.ಇದರಿಂದ ಜಿಲ್ಲೆಯಲ್ಲಿ ಗೋವು ಸಂತತಿ ಅವನತಿಯಲ್ಲಿದೆ. ವನ್ಯ ಪ್ರಾಣಿಗಳ ಹಾವಳಿಯಿಂದ ಕೊಡಗಿನ ಸಂಸ್ಕೃತಿಯ ಭಾಗವಾದ ಭತ್ತದ ಗದ್ದೆಗಳನ್ನು ಕೃಷಿ ಮಾಡದೆ ಪಾಳು ಬಿಡುವಂತಾಗಿದೆ. ಇದಲ್ಲದೆ ಹುಲಿ ಹಾಗೂ ಕಾಡಾನೆ ದಾಳಿಗೆ ಸಿಲುಕಿ ಜನರು ಹಾಗೂ ಜಾನುವಾರುಗಳು ಸಾವನ್ನಪ್ಪುತ್ತಿದ್ದು-ಈ ಸಮಸ್ಯೆಗೆ ಯಾವುದೇ ಶಾಶ್ವತ ಪರಿಹಾರ ಯೋಜನೆ ರೂಪಿಸದೆ ವೈಫಲ್ಯ ಕಂಡಿರುವ ಶಾಸಕ ಕೆ .ಜಿ. ಬೋಪಯ್ಯ ಅವರು ಇದಕ್ಕೆ ಅಮಾಯಕರ ಮತ್ತು ಜಾನುವಾರುಗಳ ಸಾವಿಗೆ ನೇರ ಹೊಣೆ ಎಂದು ಅವರು ಆರೋಪಿಸಿದ್ದಾರೆ.

ಅನೀಶ್ ಮಾದಪ್ಪ ಅವರು ಮಾತನಾಡಿ, ಅಭಿವೃದ್ಧಿ ಹರಿಕಾರ ಎಂದು ಸ್ವಯಂ ಘೋಷಿತ ಬಿರುದು ಹಾಕಿಕೊಂಡಿರುವ ಬೋಪಯ್ಯ ವಿರಾಜ ಪೇಟೆ ಕ್ಷೇತ್ರ ವ್ಯಾಪ್ತಿಯ ಪ್ರಮುಖ ರಸ್ತೆ ಹಾಗೂ ಗ್ರಾಮೀಣ ರಸ್ತೆಗಳು ತೀವ್ರವಾಗಿ ಹಾಳಾಗಿದ್ದರೂ ಅವುಗಳನ್ನು ಸರಿಪಡಿಸದೆ ಸರ್ಕಾರದ ಗೂಟದ ಕಾರಿನಲ್ಲಿ ಬೋಪಯ್ಯ ಸುತ್ತುತ್ತಿದ್ದಾರೆ ಎಂದು ಕಿಡಿಕಾರಿದರು.

Translate »