ಕುಶಾಲನಗರದಲ್ಲಿ ಸಂಭ್ರಮದ ಪುತ್ತರಿ ನಮ್ಮೆಆಚರಣೆ
Uncategorized, ಕೊಡಗು

ಕುಶಾಲನಗರದಲ್ಲಿ ಸಂಭ್ರಮದ ಪುತ್ತರಿ ನಮ್ಮೆಆಚರಣೆ

December 9, 2022

ಕುಶಾಲನಗರ, ಡಿ.8- ಪಟ್ಟಣದ ಕೊಡವ ಸಮಾಜದ ವತಿಯಿಂದ ಬುಧವಾರ ರಾತ್ರಿ ಪುತ್ತರಿ ನಮ್ಮೆಯನ್ನು ಅರ್ಥ ಪೂರ್ಣವಾಗಿ ಆಚರಿಸಲಾಯಿತು.
ಪಟ್ಟಣದಲ್ಲಿ ನೆಲೆಸಿರುವ ಕೊಡವ ಬಾಂಧವರು ತಮ್ಮ ಸಾಂಪ್ರದಾಯಿಕ ಉಡುಗೆ ತೊಟ್ಟು ಕೊಡವ ಸಮಾಜದಲ್ಲಿ ರಾತ್ರಿ 7.30ಕ್ಕೆ ಸೇರಿದರು. ಮೊದಲಿಗೆ ನೆಲ್ಲಕ್ಕಿಯಡಿಯಲ್ಲಿ ಗುರುಕಾರೋಣರು ಮತ್ತು ದೇವರಿಗೆ ಭಕ್ತಿ ಪೂರ್ವಕ ಪೂಜೆ ಸಲ್ಲಿಸಲಾಯಿತು. ನಂತರ ಅರಳಿ, ಮಾವು, ಹಲಸು, ಕುಂಬಳಿ ಹಾಗೂ ಗೇರು ಮರಗಳ ಎಲೆಗಳಿಂದ ನೆರೆಕಟ್ಟುವ ಮೂಲಕ ವಿಧಿವಿಧಾನ ನೆರವೇರಿಸಿದರು.

ನಂತರ ಸಿದ್ಧಪಡಿಸಿದ ಕುತ್ತಿಯನ್ನು ತೋಕ್ ಕತ್ತಿ, ದುಡಿಕೊಟ್ಟ್ ಪಾಟ್ ತಳಿಯ ತಕ್ಕಿ ಹಾಗೂ ಒಡ್ಡೋಲಗದೊಂದಿಗೆ ಗದ್ದೆಗೆ ಮೆರವಣಿಗೆ ಮೂಲಕ ತೆರಳಲಾಯಿತು. ಮೂರು ಸುತ್ತು ಕುಶಾಲತೋಪು ಸಿಡಿಸುವ ಮೂಲಕ ಸಮಾಜದ ಗದ್ದೆಯಲ್ಲಿ ಬಲ್ಲಾರಂಡ ಜಾಲಿ ತಮ್ಮಯ್ಯ ಅವರು ಪೂಜೆ ಸಲ್ಲಿಸಿ ಕದಿರು ತೆಗೆಯುವ ಮೂಲಕ ಸಾರ್ವತ್ರಿಕವಾಗಿ ಪುತ್ತರಿ ನಮ್ಮೆ ಆಚರಿಸಲಾಯಿತು. ಎಲ್ಲರೂ ಪೆÇಲಿ ಪೆÇಲಿ ದೇವ ಪೆÇಲಿಯೋ ಬಾ ಎಂದು ಘೋಷಣೆಯನ್ನು ಜೋರಾಗಿ ಕೂಗಿ ಹರ್ಷೋದ್ಗಾರ ಮಾಡಿದರು. ಈ ಸಂದರ್ಭ ಪಟಾಕಿ ಹಾಗೂ ಬಾಣ ಬಿರುಸುಗಳನ್ನು ಸಿಡಿಸಲಾಯಿತು. ನಂತರ ಧಾನ್ಯಲಕ್ಷ್ಮಿ ಯನ್ನು ಮೆರವಣಿಗೆ ಮೂಲಕ ತಂದು ಕದಿರನ್ನು ಇಟ್ಟು ಪೂಜೆ ಸಲ್ಲಿಸಿದರು. ಗದ್ದೆಯಲ್ಲಿನ ಕದಿರು ತೆಗೆದು ಎಲ್ಲರಿಗೂ ವ್ಯವಸ್ಥಿತವಾಗಿ ವಿತರಣೆ ಮಾಡಿ ತಮ್ಮ ಮನೆಗಳಿಗೆ ತೆಗೆದುಕೊಂಡು ಹೋದರು.

ಈ ಸಂದರ್ಭ ಕೊಡವ ಸಮಾಜದ ಅಧ್ಯಕ್ಷ ಬೋಸ್ ಮೊಣ್ಣಪ್ಪ, ಉಪಾಧ್ಯಕ್ಷ ಪುಲಿಯಂಡ ಚಂಗಪ್ಪ, ಕಾರ್ಯದರ್ಶಿ ಮನು ನಂಜುಂಡ, ಜಂಟಿ ಕಾರ್ಯದರ್ಶಿ ಸೋಮಣ್ಣ, ನಿರ್ದೇಶಕರಾದ ತಿಮ್ಮಪ್ಪ, ಮುದ್ದಪ್ಪ, ಪೆÇನ್ನಣ್ಣ, ನಂದ, ಪೆÇನ್ನಪ್ಪ, ಉತ್ತಪ್ಪ, ಸುಬ್ಬಯ್ಯ, ದಮ ಯಂತಿ, ಧರಣಿ ಸೋಮಣ್ಣ ಇತರರಿದ್ದರು.

Translate »