ಜ.20ರಿಂದ ಅಮ್ಮತ್ತಿಯಲ್ಲಿಅಖಿಲ ಭಾರತ ಹೊನಲು ಬೆಳಕಿನ ಫುಟ್ಬಾಲ್ ಪಂದ್ಯಾವಳಿ
ಕೊಡಗು

ಜ.20ರಿಂದ ಅಮ್ಮತ್ತಿಯಲ್ಲಿಅಖಿಲ ಭಾರತ ಹೊನಲು ಬೆಳಕಿನ ಫುಟ್ಬಾಲ್ ಪಂದ್ಯಾವಳಿ

December 10, 2022

ಮಡಿಕೇರಿ, ಡಿ.9- ಮಿಲನ್ಸ್ ಕ್ಲಬ್, ಕರ್ನಾಟಕ ರಾಜ್ಯ ಫÀÅಟ್ಬಾಲ್ ಸಂಸ್ಥೆ ಮತ್ತು ಕೊಡಗು ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಸಂಯುಕ್ತಾ ಶ್ರಯದಲ್ಲಿ ಜ.20ರಿಂದ 29ರವರೆಗೆ ಇದೇ ಪ್ರಥಮ ಬಾರಿಗೆ ಅಮ್ಮತ್ತಿ ಪ್ರೌಢ ಶಾಲಾ ಮೈದಾನದಲ್ಲಿ ‘ಅಖಿಲ ಭಾರತ ಹೊನಲು ಬೆಳಕಿನ ಫುಟ್ಬಾಲ್ ಪಂದ್ಯಾವಳಿ’ ಆಯೋಜಿಸಲಾಗಿದೆ.
ಅಮ್ಮತ್ತಿ ಮಿಲನ್ಸ್ ಕ್ಲಬ್ ಮತ್ತು ಕೊಡಗು ಜಿಲ್ಲಾ ಫುಟ್ಬಾಲ್ ಸಂಸ್ಥೆ ಜಂಟಿಯಾಗಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಪ್ರಮುಖರು ಮಾತನಾಡಿ, ರಾಜಸ್ಥಾನ, ಗೋವಾ, ಕೇರಳ, ತಮಿಳು ನಾಡು, ಬೆಂಗಳೂರು, ಆರ್ಮಿ ತಂಡ ಸೇರಿದಂತೆ ನೋಂದಾಯಿತ 16 ತಂಡಗಳು ಹಾಗೂ ಕೊಡಗಿನ ಪ್ರತಿಭಾವಂತ ಆಟ ಗಾರರನ್ನು ಒಳಗೊಂಡ ಕೊಡಗು ತಂಡ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ. ಪಂದ್ಯಾವಳಿ ವಿಜೇತ ತಂಡಕ್ಕೆ 1.50 ಲಕ್ಷ ನಗದು ಹಾಗೂ ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ 1 ಲಕ್ಷ ರೂ. ನಗದು ಬಹುಮಾನವನ್ನು ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಪಂದ್ಯಾವಳಿಯ ಉದ್ಘಾಟನಾ ಸಮಾ ರಂಭದಲ್ಲಿ ಭಾರತ ಕಂಡ ಅಪರೂಪದ ಫುಟ್ಬಾಲ್ ಆಟಗಾರ ಕೇರಳದ ಐ.ಎಂ. ವಿಜಯನ್, ಕರ್ಣಾಟಕ ರಾಜ್ಯ ಫುಟ್ಬಾಲ್ ಸಂಸ್ಥೆಯ ಅಧ್ಯಕ್ಷ ಹ್ಯಾರಿಸ್, ಚೆಮ್ಮನ್ನೂರು ಜ್ಯುವೆಲ್ಲರ್ಸ್‍ನ ಬಾಬಿ, ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು.

ನಾಕ್‍ಔಟ್ ಮಾದರಿಯಲ್ಲಿ ಪಂದ್ಯಾವಳಿ ನಡೆಯಲಿದ್ದು, ಪ್ರತಿನಿತ್ಯ ರಾತ್ರಿ 7.30ರಿಂದ 10.30 ಗಂಟೆಯವರೆಗೆ ಒಂದು ಪಂದ್ಯ ನಡೆಯಲಿದೆ. ಅಂತರಾಷ್ಟ್ರೀಯ ಫುಟ್ಬಾಲ್ ನಿಯಮಗಳ ಅನ್ವಯ ಪಂದ್ಯಗಳು ನಡೆಯ ಲಿರುವುದಾಗಿ ಸ್ಪಷ್ಟಪಡಿಸಿದರು. ಪಂದ್ಯಾವಳಿ 20 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ನಡೆಯ ಲಿದೆ. ಪಂದ್ಯಾವಳಿ ವೀಕ್ಷಣೆÉಗೆ ಗ್ಯಾಲರಿ ವ್ಯವಸ್ಥೆಯನ್ನು ಮಾಡಲಾಗುತ್ತದೆಂದು ಮಾಹಿತಿ ನೀಡಿದರು.

ಫುಟ್ಬಾಲ್ ಮೈದಾನಕ್ಕೆ ಪ್ರಯತ್ನ: ಕೊಡಗು ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಕಾರ್ಯದರ್ಶಿ ಪಿ.ಎ. ನಾಗೇಶ್ ಮಾತ ನಾಡಿ, ಜಿಲ್ಲೆಯಲ್ಲಿ ಕೃತಕ ಹಾಸಿನ ಫುಟ್ಬಾಲ್ ಮೈದಾನ ನಿರ್ಮಾಣಕ್ಕೆ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ಅಖಿಲ ಭಾರತ ಫುಟ್ಬಾಲ್ ಸಂಸ್ಥೆಯ ಪ್ರಮುಖರು ಹಾಗೂ ರಾಜ್ಯ ಸಂಸ್ಥೆಯ ಅಧ್ಯಕ್ಷ ಹ್ಯಾರಿಸ್ ಅವರು, ಕೊಡಗಿ ನಲ್ಲಿ ಅಗತ್ಯ ಜಾಗ ಇದ್ದಲ್ಲಿ ಕೃತಕ ಹಾಸಿನ ಫುಟ್ಬಾಲ್ ಮೈದಾನ ನಿರ್ಮಿಸಿ ಕೊಡು ವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕೊಡಗು ಫುಟ್ಬಾಲ್ ಸಂಸ್ಥೆಯ ಅಧ್ಯಕ್ಷರಾದ ಪಾಣತ್ತಲೆ ಜಗದೀಶ್ ಮೊಣ್ಣಪ್ಪ, ಮಿಲನ್ಸ್ ಕ್ಲಬ್ ಅಧ್ಯಕ್ಷ ಲಿಜೇಶ್ ಎಂ.ಎಂ, ಕಾರ್ಯದರ್ಶಿ ವಿನು ಎಂ.ಎಂ, ಪಂದ್ಯಾವಳಿ ಉಸ್ತುವಾರಿ ಕೆ.ಎಂ. ಆಸಿಫ್ ಉಪಸ್ಥಿತರಿದ್ದರು.

Translate »