ಮಾ.20ರಿಂದ ಕೊಡವ ಕೌಟುಂಬಿಕ ಅಪ್ಪಚಟ್ಟೋಳಂಡ ಹಾಕಿ ಉತ್ಸವ
ಕೊಡಗು

ಮಾ.20ರಿಂದ ಕೊಡವ ಕೌಟುಂಬಿಕ ಅಪ್ಪಚಟ್ಟೋಳಂಡ ಹಾಕಿ ಉತ್ಸವ

December 7, 2022

ಮಡಿಕೇರಿ, ಡಿ.6- ಸುದೀರ್ಘ 4 ವರ್ಷಗಳ ಬಳಿಕ ಇದೀಗ 23ನೇ ಕೊಡವ ಕೌಟುಂಬಿಕ `ಅಪ್ಪಚೆಟ್ಟೋಳಂಡ ಹಾಕಿ ಉತ್ಸವ-2023′ ನಾಪೋಕ್ಲುವಿನಲ್ಲಿ ಮಾರ್ಚ್ 20ರಿಂದ ಏಪ್ರಿಲ್ 10ರವರೆಗೆ ನಡೆಯಲಿದೆ ಎಂದು ಉತ್ಸವ ಆಯೋಜಕ ಸಮಿತಿಯ ಅಧ್ಯಕ್ಷ ಅಪ್ಪಚೆÀಟ್ಟೋ ಳಂಡ ಮನು ಮುತ್ತಪ್ಪ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮನು ಮುತ್ತಪ್ಪ, ಪ್ರಾಕೃತಿಕ ವಿಕೋಪ, ಕೊರೊನಾ ಹಿನ್ನೆಲೆಯಲ್ಲಿ ಯುವ ಸಮೂಹದ ಕ್ರೀಡಾ ಪ್ರತಿಭೆಗಳಿಗೆ ಉತ್ತೇಜನ ನೀಡುವ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ ಆಯೋಜನೆಗೊಂಡಿ ರಲಿಲ್ಲ. ಇದೀಗ ಕೊಡವ ಕೌಟುಂಬಿಕ ಹಾಕಿ ಉತ್ಸವಕ್ಕೆ ಅಪ್ಪಚೆÀಟ್ಟೋಳಂಡ ಹಾಕಿ ಉತ್ಸವದ ಮೂಲಕ ಪುನಶ್ಚೇತನ ನೀಡುವ ಪ್ರಯತ್ನ ನಡೆಯಲಿದೆ ಎಂದು ತಿಳಿಸಿದರು.

1 ಕೋಟಿ ರೂ. ಅನುದಾನ: ಕೊಡವ ಕೌಟುಂಬಿಕ ಹಾಕಿ ಉತ್ಸವದ ಆಯೋಜನೆ ಹಿನ್ನೆಲೆಯಲ್ಲಿ ಜಿಲ್ಲೆಯ ಶಾಸಕ ರಾದ ಕೆ.ಜಿ. ಬೋಪಯ್ಯ, ಅಪ್ಪಚ್ಚು ರಂಜನ್, ಸುಜಾ ಕುಶಾಲಪ್ಪ ಅವರ ಸಹಕಾರದೊಂದಿಗೆ ಉತ್ಸವ ಆಯೋಜನಾ ಸಮಿತಿಯ ನಿಯೋಗ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಚರ್ಚಿಸಿದೆ. ಈ ಸಂದರ್ಭ ಕೌಟುಂಬಿಕ ಹಾಕಿ ಉತ್ಸವಕ್ಕೆ ಇದೇ ಮೊದಲ ಬಾರಿಗೆ 1 ಕೋಟಿ ರೂ. ಅನುದಾನ ನೀಡಲು ಮುಖ್ಯಮಂತ್ರಿ ಗಳು ಸಮ್ಮತಿ ನೀಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. ಪಂದ್ಯಾವಳಿಯ ಆರಂಭಿಕ ದಿನವಾದ ಮಾ.20ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ ಉದ್ಘಾಟನೆ ಯಾಗಲಿದೆ. ಇದಕ್ಕೆ ಮುಖ್ಯಮಂತ್ರಿಗಳು ಸಮ್ಮತಿಯನ್ನು ನಮ್ಮ ಭೇಟಿಯ ಸಂದರ್ಭ ನೀಡಿದ್ದಾರೆ ಎಂದು ಸ್ಪಷ್ಟಪಡಿಸಿದರು.

2018ರಲ್ಲಿ ನಡೆದ ಕೊಡವ ಕೌಟುಂಬಿಕ ಹಾಕಿ ಉತ್ಸವದಲ್ಲಿ 330 ವಿವಿಧ ಕೊಡವ ಕುಟುಂಬಗಳು ಪಾಲ್ಗೊಂಡಿ ದ್ದವು. ಈ ಬಾರಿ ದಾಖಲೆಯ 350 ತಂಡಗಳ ಪಾಲ್ಗೊಳ್ಳುವಿಕೆ ಯನ್ನು ನಿರೀಕ್ಷಿಸಲಾಗಿದೆ. ಮುಂದಿನ ಜನವರಿ ಆರಂಭ ದಿಂದ ತಂಡಗಳ ನೋಂದಣಿ ಕಾರ್ಯಕ್ಕೆ ಚಾಲನೆ ದೊರಕ ಲಿದೆ ಎಂದು ಮನು ಮುತ್ತಪ್ಪ ಮಾಹಿತಿ ನೀಡಿದರು.

ಆಟಗಾರರಿಗೆ ಗೌರವಾರ್ಪಣೆ: ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ಸಂದರ್ಭ ಕೊಡಗಿನಿಂದ ರಾಷ್ಟ್ರೀಯ ಹಾಕಿ ತಂಡವನ್ನು ಪ್ರತಿನಿಧಿಸಿದ ಕೊಡವ ಸಮೂಹ ಸೇರಿದಂತೆ ಇನ್ನಿತರ ಸಮೂಹದ ಎಲ್ಲರನ್ನು ಗುರುತಿಸಿ ಸನ್ಮಾನಿಸಿ ಗೌರವಿಸಲಾಗುವುದೆಂದು ತಿಳಿಸಿದರು. ಪಂದ್ಯಾವಳಿಯ ಉದ್ಘಾಟನಾ ಪಂದ್ಯಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಆಟ ವಾಡಿದ ಆಟಗಾರರ ತಂಡವನ್ನು ಕರೆಸುವ ಪ್ರಯತ್ನಗಳು ನಡೆಯುತ್ತಿರುವುದಾಗಿ ತಿಳಿಸಿದ ಅವರು, ಪಂದ್ಯಾವಳಿಯು ಹಾಕಿ ಕೊಡಗು ಸಂಸ್ಥೆಯ ಸಹಕಾರ ದೊಂದಿಗೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಪಂದ್ಯಾವಳಿಗೆ 4 ಮೈದಾನ:ತಿಂಗಳ ಕಾಲ ನಡೆ ಯುವ ಪಂದ್ಯಾವಳಿಯನ್ನು 3 ಮೈದಾನಗಳಲ್ಲಿ ನಡೆಸಲಾಗುತ್ತದೆ. ಮಳೆ ಮೊದಲಾದ ಕಾರಣಗಳಿಂದ ಪಂದ್ಯಗಳು ಮುಂದೂಡಲ್ಪಟ್ಟ ಸಂದರ್ಭಗಳಲ್ಲಿ ಬಳಸಲು ಮತ್ತೊಂದು ಮೈದಾನವನ್ನು ಸಜ್ಜುಗೊಳಿಸಲಾಗುತ್ತದೆ ಎಂದು ಮಾಹಿತಿ ನೀಡಿದ ಮನು ಮುತ್ತಪ್ಪ, ಹಾಕಿ ಉತ್ಸವದ ಜನಕ ದಿ. ಪಾಂಡಂಡ ಕುಟ್ಟಪ್ಪ ಅವರ ಪುತ್ರ ಪಾಂಡಂಡ ಬೋಪಣ್ಣ ಅವರು ಪ್ರಸ್ತುತ ಕೊಡವ ಹಾಕಿ ಅಕಾಡೆಮಿಯ ಅಧ್ಯಕ್ಷರಾಗಿದ್ದು, ಇವರೂ ಪಂದ್ಯಾವಳಿ ಉದ್ಘಾಟನೆಯಲ್ಲಿ ಪಾಲ್ಗೊ ಳ್ಳಲಿದ್ದಾರೆ ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಖಜಾಂಚಿ ಅಪ್ಪಚೆಟ್ಟೋ ಳಂಡ ವಸಂತ್ ಮುತ್ತಪ್ಪ, ಸಮಿತಿ ಸದಸ್ಯರಾದ ಅಪ್ಪಚೆಟ್ಟೋಳಂಡ ಹರೀಶ್ ಸೋಮಯ್ಯ, ಅಪ್ಪಚೆಟ್ಟೋ ಳವಂಡ ರವಿ ಮೊಣ್ಣಪ್ಪ, ಅಪ್ಪಚೆಟ್ಟೋಳಂಡ ಜನತ್ ಕುಮಾರ್ ಉಪಸ್ಥಿತರಿದ್ದರು.

Translate »