ಡಿ.10, 11ಕ್ಕೆಕೊಡಗು ಕಾಫಿ ಉತ್ಸವ
ಕೊಡಗು

ಡಿ.10, 11ಕ್ಕೆಕೊಡಗು ಕಾಫಿ ಉತ್ಸವ

December 6, 2022

ಮಡಿಕೇರಿ, ಡಿ.5- ಪಶ್ಚಿಮಘಟ್ಟ ಸಾಲಿನ ಕೊಡಗಿನ ಸ್ವಾದಭರಿತ ವೈಶಿಷ್ಟ್ಯ ಪೂರ್ಣವಾದ ಕಾಫಿ ಮತ್ತು ಅದರ ಮೌಲ್ಯವರ್ಧಿತ ಉತ್ಪನ್ನಗಳನ್ನು ಹೊರ ಜಗತ್ತಿಗೆ ಪರಿಚಯಿಸಲು ಮತ್ತು ಆಂತರಿಕ ಕಾಫಿ ಮಾರುಕಟ್ಟೆಯನ್ನು ಬಲಪಡಿಸುವ ಪ್ರಮುಖ ಉದ್ದೇಶದಿಂದ ಡಿ.10ಮತ್ತು 11ರಂದು ರಾಜಾಸೀಟಿನಲ್ಲಿ `ಕೊಡಗು ಕಾಫಿ ಉತ್ಸವ-2022′ ಅನ್ನು ಆಯೋ ಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ತಿಳಿಸಿದ್ದಾರೆ.

ನಗರದ ಕಾಫಿ ಮಂಡಳಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರು, ಜಿಲ್ಲಾಡಳಿತ, ಕಾಫಿ ಮಂಡಳಿ ಮತ್ತು ತೋಟಗಾರಿಕಾ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಆಯೋಜಿತ ಈ ಕಾಫಿ ಉತ್ಸವದಲ್ಲಿ ಕಾಫಿ ಉದ್ಯಮದ ಸರಪಳಿ ಯಲ್ಲಿ ಬರುವ ಅತ್ಯುತ್ತಮ ಕಾಫಿ ಬ್ರ್ಯಾಂಡ್ ಗಳು, ಸ್ವಸಹಾಯ ಗುಂಪುಗಳ ಕಾಫಿ ಉತ್ಪನ್ನಗಳು, ರೋಸ್ಟರ್‍ಗಳು, ಬ್ರೂಯಿಂಗ್ ಮೆಷಿನರಿಗಳು, ಮೌಲ್ಯವರ್ಧಿತ ಕಾಫಿ ಉತ್ಪನ್ನ ಗಳ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದರು. ಈಗಾಗಲೇ 2 ದಿನಗಳ ಕಾಲ ನಡೆಯಲಿ ರುವ ಕಾಫಿ ಉತ್ಸವದಲ್ಲಿ ಕಾಫಿ ಉದ್ಯಮ ದಲ್ಲಿ ತೊಡಗಿಸಿಕೊಂಡಿರುವ ದೇಶದ ವಿವಿಧೆಡೆಗಳ ಖಾಸಗಿ ಸಂಸ್ಥೆಗಳನ್ನು ಆಹ್ವಾನಿಸ ಲಾಗಿದೆ. ಇದರ ಪ್ರಯೋಜನವನ್ನು ಪ್ರತಿ ಯೊಬ್ಬರು ಪಡೆದುಕೊಳ್ಳುವಂತೆ ಕರೆ ನೀಡಿದರು.

ಅತೀ ಹೆಚ್ಚು ಕಾಫಿಯನ್ನು ಉತ್ಪಾದಿಸು ತ್ತಿರುವ ಕೊಡಗಿನಲ್ಲಿ ಅದನ್ನು ಬೆಳೆಯುವ ರೀತಿ, ಅಂತಿಮವಾಗಿ ಕಾಫಿ ಮಾರುಕಟ್ಟೆಗೆ ಬರುವ ಕ್ರಮ, ಮೌಲ್ಯವರ್ಧಿತ ಕಾಫಿ ಉತ್ಪನ್ನ ಗಳನ್ನು ಪ್ರವಾಸಿಗರಿಗೆ ಪರಿಚಯಿಸುವ ಪ್ರಯತ್ನ ಕಾಫಿ ಮೇಳದ ಉದ್ದೇಶವಾಗಿದೆ. ಈ ಮೇಳದಲ್ಲಿ ಮಳಿಗೆಗಳ ಬದಲಾಗಿ ರಾಜಾ ಸೀಟಿನಲ್ಲಿ ಪ್ರಸ್ತುತ ಇರುವ 4 ವ್ಯೂ ಪಾಯಿಂಟ್ ಗಳು ಮತ್ತು ಅದನ್ನು ಸಂಪರ್ಕಿಸುವ ಹಾದಿ ಯಲ್ಲಿ ತಾತ್ಕಾಲಿಕವಾಗಿ ಅಳವಡಿಸುವ ಛತ್ರಿಗಳ ಅಡಿಯಲ್ಲಿ ವಿವಿಧ ಉತ್ಪನ್ನಗಳ ಪ್ರದರ್ಶನ ನಡೆಯಲಿದೆ ಎಂದು ವಿವರಿಸಿದರು.

ಜೇನು, ವೈನ್ ಮೇಳ: ಕಾಫಿ ಮೇಳದ ರೀತಿಯಲ್ಲೇ ಡಿ.24 ಮತ್ತು 25ರಂದು ಕೊಡಗಿನ ಜೇನು ಕೃಷಿಯ ಬಗ್ಗೆ ಬೆಳಕು ಚೆಲ್ಲುವ `ಜೇನು ಮೇಳ’ವನ್ನು ಆಯೋಜಿಸಲಾಗು ತ್ತದೆ ಎಂದು ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರು ತಿಳಿಸಿದರು. ಕೊಡಗಿನ ಕಾಫಿ, ಜೇನು ಮೊದಲಾದವುಗಳ ಬಗ್ಗೆ ಮಾಹಿತಿ ನೀಡುವ ಮೇಳಗಳ ರೀತಿಯಲ್ಲೇ ಮುಂದಿನ ಸಾಲಿನ ಜನವರಿಯ ಎರಡನೇ ಶನಿವಾರ ಮತ್ತು ಭಾನುವಾರಗಳಂದು `ಕೊಡಗಿನ ವೈನ್ ಮೇಳ’ವನ್ನು ನಡೆಸುವ ಉದ್ದೇಶವು ಇದೆ. ಆ ಮೂಲಕ ಸ್ಥಳೀಯ ಉದ್ಯಮಗಳ ಉತ್ತೇಜನಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ವಿಶ್ವಾಸ ವ್ಯಕ್ತಪಡಿಸಿದರು.

ಕಾಫಿ ಔಟ್‍ಲೆಟ್ ಚಿಂತನೆ: ಕೊಡಗಿನ ಕಾಫಿ ಕೃಷಿ ಸಂಸ್ಕøತಿ, ಕಾಫಿಯ ಉತ್ಪನ್ನ ಗಳು ಸೇರಿದಂತೆ, ಇದಕ್ಕೆ ಸಂಬಂಧಿಸಿದ ವಿವಿಧ ಮಾಹಿತಿಗಳನ್ನು ಜನರಿಗೆ ತಲುಪಿ ಸುವ ನಿಟ್ಟಿನಲ್ಲಿ ಜಿಲ್ಲಾ ಕೇಂದ್ರÀ್ರ ಮಡಿಕೆÉೀರಿ ಯಲ್ಲಿ `ಕಾಫಿ ಔಟ್‍ಲೆಟ್’ ಆರಂಭದ ಬಗ್ಗೆಯೂ ಚಿಂತನೆ ನಡೆದಿದೆ. ಇಂತಹ ಕಾಫಿ ಔಟ್‍ಲೆಟ್‍ನನ್ನು ಸರ್ಕಾರದಿಂದ ಅನುಮೋ ದಿತ ಸಂಸ್ಥೆಗಳ ಮೂಲಕ ನಡೆಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.

ಕಾಫಿಯ ಆಂತರಿಕ ಬಳಕೆ: ಕಾಫಿ ಮಂಡಳಿಯ ಸಹಾಯಕ ನಿರ್ದೇಶಕ ಚಂದ್ರಶೇಖರ್ ಮಾತನಾಡಿ, ಒಟ್ಟು ದೇಶದಲ್ಲಿ ಬೆಳೆಯುವ ಕಾಫಿಯಲ್ಲಿ ಶೇ.30 ರಷ್ಟು ಕಾಫಿ ಆಂತರಿಕ ಬಳಕೆಯಾಗು ತ್ತಿದೆ. ಉಳಿದ ಶೇ.70ರಷ್ಟು ಕಾಫಿ ರಫ್ತಾಗು ತ್ತದೆ ಎಂದು ತಿಳಿಸಿದರು. ಕಾಫಿಯ ಆಂತರಿಕ ಬಳಕೆ ಹೆಚ್ಚಳಕ್ಕೆ ಪೂರಕವಾಗಿ ಕಾಫಿ ಮೇಳವನ್ನು ಆಯೋಜಿಸುತ್ತಿರು ವುದಾಗಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ತೋಟಗಾರಿಕಾ ಇಲಾಖಾ ಸಹಾಯಕ ನಿರ್ದೇಶಕ ಪ್ರಮೋದ್ ಉಪಸ್ಥಿತರಿದ್ದರು.

Translate »