ದಂಪತಿ ಕಲಹ: ಪತ್ನಿ ಕೊಲೆಯಲ್ಲಿ ಅಂತ್ಯ ಒಂಟಿ ನಳಿಗೆ ಬಂದೂಕಿನಿಂದ ಗುಂಡಿಕ್ಕಿ ಹತ್ಯೆ
ಕೊಡಗು

ದಂಪತಿ ಕಲಹ: ಪತ್ನಿ ಕೊಲೆಯಲ್ಲಿ ಅಂತ್ಯ ಒಂಟಿ ನಳಿಗೆ ಬಂದೂಕಿನಿಂದ ಗುಂಡಿಕ್ಕಿ ಹತ್ಯೆ

August 11, 2022

ಮಡಿಕೇರಿ,ಆ.10- ಗಂಡ-ಹೆಂಡತಿಯ ಜಗಳವು ಪತ್ನಿಯ ಕೊಲೆಯಲ್ಲಿ ಅಂತ್ಯವಾದ ಘಟನೆ ಮಡಿಕೇರಿ ತಾಲೂಕಿನ ಚೆಟ್ಟಳ್ಳಿ ಗ್ರಾಮ ದಲ್ಲಿ ನಡೆದಿದೆ. ಚೇರಳ ಶ್ರೀಮಂಗಲ ಗ್ರಾಮ ನಿವಾಸಿ ಬಟ್ಟೀರ ಶುಷ್ಮ(43) ಕೊಲೆಯಾದ ಮಹಿಳೆ. ಆರೋಪಿ ಬಟ್ಟೀರ ಗೋಪಾಲನನ್ನು ಮಡಿ ಕೇರಿ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಘಟನೆ ವಿವರ: ಪತ್ನಿಯ ಮೇಲೆ ಸಂಶಯ ಗೊಂಡ ಪತಿ ಬಟ್ಟೀರ ಗೋಪಾಲ ಮಂಗಳ ವಾರ ರಾತ್ರಿ ಪತ್ನಿ ಶುಷ್ಮ ಅವರೊಂದಿಗೆ ಜಗಳ ಆರಂಭಿಸಿದ್ದಾನೆ. ಬಳಿಕ ಕೋಣೆಯೊ ಳಗೆ ಇದ್ದ ತನ್ನ ಒಂಟಿನಳಿಗೆ ಕೋವಿಯಿಂದ ಎದೆಯ ಭಾಗಕ್ಕೆ ಗುಂಡಿಕ್ಕಿದ್ದಾನೆ. ತದ ನಂತರ ಶುಷ್ಮಾ ಕೋವಿಯಿಂದ ತಾನೇ ಗುಂಡಿಕ್ಕಿ ಕೊಂಡು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಕುಟುಂಬದವರಿಗೆ ಮಾಹಿತಿ ನೀಡಿದ್ದಾನೆ.

ವಿಷಯ ತಿಳಿದ ಗ್ರಾಮಸ್ಥರು ರಾತ್ರಿ ಚೆಟ್ಟಳ್ಳಿ ಪೊಲೀಸ್ ಉಪಠಾಣೆಗೆ ಮಾಹಿತಿ ನೀಡಿ ದ್ದಾರೆ. ಸ್ಥಳ್ಕಕಾಗಮಿಸಿದ ಠಾಣಾ ಎಎಸ್‍ಐ ಶ್ರೀನಿವಾಸ್ ಮೇಲಾಧಿಕಾರಿಗಳ ಸೂಚನೆ ಯಂತೆ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.ಮಡಿಕೇರಿ ಗ್ರಾಮಾಂತರ ಠಾಣೆಗೆ ವೃತ್ತ ನಿರೀಕ್ಷಕ ಅನುಪ್ ಮಾದಪ್ಪ, ಪಿಎಸ್‍ಐ ದೇವ ರಾಜು, ಘಟನಾ ಸ್ಥಳಕ್ಕೆ ಆಗಮಿಸಿ ಆರೋಪಿ ಯನ್ನು ವಿಚಾರಣೆಗೆ ಒಳಪಡಿಸಿದಾಗ ತಾನೇ ಗುಂಡಿಕ್ಕಿ ಪತ್ನಿಯನ್ನು ಹತ್ಯೆ ಮಾಡಿ ರುವುದಾಗಿ ಪತಿ ಗೋಪಾಲ ಒಪ್ಪಿಗೊಂಡಿ ದ್ದಾನೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ. ಆರೋಪಿ ಗೋಪಾಲನನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

Translate »