ತಲಕಾವೇರಿ ತೀರ್ಥೋದ್ಭವ ಸಿದ್ಧತೆ: ಉಸ್ತುವಾರಿ ಸಚಿವರ ಸಭೆ
ಕೊಡಗು

ತಲಕಾವೇರಿ ತೀರ್ಥೋದ್ಭವ ಸಿದ್ಧತೆ: ಉಸ್ತುವಾರಿ ಸಚಿವರ ಸಭೆ

October 11, 2022

ಮಡಿಕೇರಿ, ಅ.10- ನಾಡಿನ ಜೀವನದಿ, ಪವಿತ್ರ ಕ್ಷೇತ್ರ ತಲಕಾವೇರಿಯಲ್ಲಿ ಜರುಗುವ ತುಲಾಸಂಕ್ರಮಣ ತೀರ್ಥೋದ್ಭವ ಸಿದ್ಧತೆ ಸಂಬಂಧ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ.ನಾಗೇಶ್ ಅವರು ಅಧಿಕಾರಿಗಳಿಂದ ಮಾಹಿತಿ ಪಡೆದರು.

ನಗರದ ಜಿಪಂ ಸಿಇಒ ಅವರ ಕಚೇರಿ ಯಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆದ ಸಭೆಯಲ್ಲಿ ಮಾಹಿತಿ ಪಡೆದ ಸಚಿವರು ಕೋವಿಡ್-19 ಕಡಿಮೆಯಾಗಿರುವ ಹಿನ್ನೆಲೆ ಈ ಬಾರಿ ಭಕ್ತಾಧಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಗಮನಹರಿಸಬೇಕು. ಸಂಜೆ ವೇಳೆಯಲ್ಲಿ ತೀರ್ಥೋದ್ಭವ ಸಂಭವಿ ಸುವುದರಿಂದ ಬೆಳಕಿನ ವ್ಯವಸ್ಥೆ, ಸುಗಮ ಸಾರಿಗೆ ಸಂಚಾರ ವ್ಯವಸ್ಥೆ, ಬಸ್ ಸೌಲಭ್ಯ ಹೀಗೆ ಮತ್ತಿತರ ಅಗತ್ಯ ತಯಾರಿ ಮಾಡಿ ಕೊಳ್ಳುವಂತೆ ಸಚಿವರು ಸೂಚಿಸಿದರು.
ಸಭೆಯ ಆರಂಭದಲ್ಲಿ ಪ್ರಮುಖರಾದ ಎಂ.ಬಿ.ದೇವಯ್ಯ ಅವರು ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಪಿಂಡ ಪ್ರಧಾನ ಮಾಡಿದ ಭಕ್ತಾದಿಗಳಿಗೆ ಪವಿತ್ರ ಕೊಳಕ್ಕೆ ತೆರಳಲು ಅವಕಾಶ ಮಾಡಬೇಕು ಎಂದು ಅವರು ಕೋರಿದರು. ಇದಕ್ಕೆ ವಿಧಾನಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಅವರು ಧ್ವನಿಗೂಡಿಸಿ ಭಕ್ತಾದಿಗಳಿಗೆ ಯಾವುದೇ ರೀತಿಯ ಕಿರಿ ಕಿರಿ ಉಂಟಾಗದಂತೆ ಗಮನ ಹರಿಸಬೇಕು ಎಂದು ಸಲಹೆ ಮಾಡಿದರು.

ಡಿವೈಎಸ್‍ಪಿ ಗಜೇಂದ್ರ ಪ್ರಸಾದ್ ಅವರು ತಲಕಾವೇರಿ ಕೊಳದ ಬಳಿ ಈ ಹಿಂದಿನಂತೆ ಬ್ಯಾರಿಕೇಡ್ ಅಳವಡಿಸಿ ನೂಕುನುಗ್ಗಲು ಉಂಟಾಗದಂತೆ ಎಚ್ಚರಿಕೆ ವಹಿಸಲಾಗು ತ್ತದೆ. ಇದಕ್ಕೆ ಭಕ್ತಾದಿಗಳು ಸಹಕರಿಸಬೇಕು ಎಂದು ಅವರು ಕೋರಿದರು.

ಈ ಸಂದರ್ಭದಲ್ಲಿ ಮಾತನಾಡಿದ ಎಂ.ಬಿ. ದೇವಯ್ಯ, ಪವಿತ್ರ ಕುಂಡಿಕೆ ಬಳಿ ಕುಂಕು ಮಾರ್ಚನೆಗೆ ಅವಕಾಶ ಮಾಡಬೇಕು ಎಂದರು.
ಈ ಕುರಿತು ಮಾತನಾಡಿದ ಎಂ.ಪಿ. ಅಪ್ಪಚ್ಚು ರಂಜನ್, ತೀರ್ಥೋದ್ಭವ ದಿನದಂದು ಪವಿತ್ರ ಕುಂಡಿಕೆ ಬಳಿ ಕುಂಕುಮಾರ್ಚನೆ ಮಾಡಲು ಸಾಧ್ಯವಿಲ್ಲ. ಜೊತೆಗೆ ಕೊಳದಲ್ಲಿ ಪುಣ್ಯಸ್ನಾನ ಮಾಡುವುದು ಬೇಡ. ಇದಕ್ಕೆ ಭಕ್ತಾದಿಗಳು ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು. ಇದಕ್ಕೆ ಧ್ವನಿಗೂಡಿಸಿದ ಶಾಸಕ ಕೆ.ಜಿ.ಬೋಪಯ್ಯ, ಇದಕ್ಕೆ ನನ್ನ ಸಹಮತವಿದೆ. ಭಕ್ತಾದಿಗಳು ತೀರ್ಥ ತೆಗೆದು ಕೊಂಡು ಹೋಗುವುದರಿಂದ ಸಹಕರಿಸ ಬೇಕು ಎಂದು ಕೋರಿದರು.
ಇದಕ್ಕೆ ನಾಪಂಡ ರವಿಕಾಳಪ್ಪ ಅವರು ಧ್ವನಿ ಗೂಡಿಸಿ ಈ ಹಿಂದಿನಂತೆ ಭಕ್ತಾದಿಗಳಿಗೆ ಅವಕಾಶ ನೀಡಬೇಕು ಎಂದರು. ಈ ಕುರಿತು ಮತ್ತೊಬ್ಬ ಸ್ಥಳೀಯರು ಮಾತನಾಡಿ ಪವಿತ್ರ ಕೊಳದಲ್ಲಿ ಪುಣ್ಯಸ್ನಾನ ಮಾಡುವುದರಿಂದ ಒಳ್ಳೆಯದಾಗುತ್ತದೆ. ಹಾಗಾಗಿ ಯಾವುದೇ ನಿರ್ಬಂಧ ಹೇರಬಾರದು ಎಂದು ಅವರು ಕೋರಿದರು. ವಿಧಾನಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಮಾತನಾಡಿ, ಕೊಡಗಿನ ಭಕ್ತಾದಿಗಳಿಗೆ ಯಾವುದೇ ನಿರ್ಬಂಧ ಹೇರಬಾರದು ಎಂದರು.
ಈ ಬಗ್ಗೆ ಮಾತನಾಡಿದ ಶಾಸಕರು ಸ್ಥಳೀಯರು ಮತ್ತು ಹೊರಗಿನವರು ಎಂದು ವಿಂಗಡಿಸುವುದು ಬೇಡ ಎಂದು ಸಲಹೆ ಮಾಡಿದರು. ಜಿ.ಪಂ. ಸಿಇಒ ಭಂವರ್ ಸಿಂಗ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ ಇತರರು ಹಲವು ಮಾಹಿತಿ ನೀಡಿದರು.

Translate »