ತಲಕಾವೇರಿಯಲ್ಲಿ ತೀರ್ಥೋದ್ಭವ
ಕೊಡಗು

ತಲಕಾವೇರಿಯಲ್ಲಿ ತೀರ್ಥೋದ್ಭವ

October 18, 2022

ಮಡಿಕೇರಿ,ಅ.17- ತಣ್ಣನೆ ಧರೆಗಿಳಿಯು ತ್ತಿದ್ದ ದಟ್ಟ ಮಂಜಿನೊಂದಿಗೆ ಪುಷ್ಪವೃಷ್ಟಿ ಗರೆಯುವಂತೆ ತೋರುತ್ತಿದ್ದ ಹನಿಮಳೆ, ವೇದ ಮಂತ್ರ ಘೋಷಗಳ ಅನುರಣನದ ನಡುವೆ ಬ್ರಹ್ಮಗಿರಿಯ ತಪ್ಪಲಿನ ತಲಕಾವೇ ರಿಯ ಪವಿತ್ರ ಬ್ರಹ್ಮಕುಂಡಿಕೆಯಿಂದ ಸೋಮವಾರ ರಾತ್ರಿ ಮೇಷ ಲಗ್ನದ ಶುಭ ಮುಹೂರ್ತದಲ್ಲಿ 7 ಗಂಟೆ 22 ನಿಮಿ ಷಕ್ಕೆ ಮಾತೆ ಕಾವೇರಿ ತೀರ್ಥರೂಪಿಣಿ ಯಾಗಿ ತನ್ನ ನಂಬಿದ ಭಕ್ತ ಜನಸಾಗರಕ್ಕೆ ದರ್ಶನ ನೀಡಿದಳು.

ಸಹಸ್ರಾರು ಭಕ್ತಾದಿಗಳ ‘ಜೈ ಜೈ ಮಾತಾ ಕಾವೇರಿ ಮಾತಾ’ ಉದ್ಘೋಷಗಳ ನಡುವೆ ಪ್ರಧಾನ ಅರ್ಚಕರುಗಳಾದ ಪ್ರಶಾಂತ್ ಆಚಾರ್ ನೇತೃತ್ವದಲ್ಲಿ, ಗುರುರಾಜ ಆಚಾರ್, ರವಿರಾಜ್ ಆಚಾರ್ ಒಳಗೊಂಡಂತೆ ಅರ್ಚ ಕರ ತಂಡ ವೇದ ಘೋಷದೊಂದಿಗೆ ಮಹಾ ಸಂಕಲ್ಪ ಪೂಜೆ ನೆರವೇರಿಸಿದರು. ಮಹಾ ಮಂಗಳಾರತಿ ನೆರವೇರಿಸುತ್ತಿರುವಂ ತೆಯೆ ಜೀವನದಿ ಕಾವೇರಿ ತೀರ್ಥ ರೂಪಿಣಿಯಾಗಿ ಪವಿತ್ರ ಕುಂಡಿಕೆಯಿಂದ ಹೊರಹೊಮ್ಮಿದಳು.

ತಲಕಾವೇರಿ ಕ್ಷೇತ್ರದಲ್ಲಿ  ಮಾತೆ ಕಾವೇರಿ ಯು ತೀರ್ಥ ರೂಪಿಣಿಯಾಗಿ ಆವಿರ್ಭ ವಿಸುವ ಅಪೂರ್ವ ಕ್ಷಣಕ್ಕೆ ಜಿಲ್ಲಾ ಉಸ್ತು ವಾರಿ ಸಚಿವ ಬಿ.ಸಿ.ನಾಗೇಶ್, ಶಾಸಕರಾದ ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚ್ಚು ರಂಜನ್, ಎಂ.ಪಿ.ಸುಜಾ ಕುಶಾಲಪ್ಪ, ಎಸ್.ಎಲ್.ಭೋಜೇಗೌಡ, ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಭಾಗಮಂಡಲ ಗ್ರಾಪಂ ಅಧ್ಯಕ್ಷರಾದ ಪೆಮಿತ, ಉಪಾಧ್ಯಕ್ಷ ಹೊಸೂರು ಸತೀಶ್ ಕುಮಾರ್, ಕೊಡಗು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿ.ಅನ್ಬು ಕುಮಾರ್, ಜಿಪಂ ಸಿಇಓ ಭಂವರ್ ಸಿಂಗ್ ಮೀನಾ, ಉಪವಿಭಾಗಾಧಿಕಾರಿ ಡಾ. ಯತೀಶ್ ಉಲ್ಲಾಳ್, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಎಂ.ಎ.ಅಯ್ಯಪ್ಪ, ಹೆಚ್ಚು ವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ,  ಭಗಂಡೇಶ್ವರ- ತಲಕಾವೇರಿ ದೇವಾಲ ಯದ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎಂ.ಕೃಷ್ಣಪ್ಪ ಸಾಕ್ಷಿಯಾಗಿದ್ದರು.

‘ತಲಕಾವೇರಿಗೆ ಭಂಡಾರ’ ಸಂಪ್ರದಾಯ ದಂತೆ ತೀರ್ಥೋದ್ಭವಕ್ಕೆ ಒಂದು ಗಂಟೆ ಮುಂಚಿತವಾಗಿ ಭಾಗಮಂಡಲದ ಶ್ರೀ ಭಗಂಡೇಶ್ವರ ಸನ್ನಿಧಿಯ ತಕ್ಕಮುಖ್ಯಸ್ಥ ಬಳ್ಳಡ್ಕ ಅಪ್ಪಾಜಿ ಮತ್ತು ದೇವಸ್ಥಾನದ ಪ್ರಮುಖರು ಮಂಗಳವಾದ್ಯಗಳೊಂದಿಗೆ, ತಲಕಾವೇರಿಯ ತಕ್ಕ ಮುಖ್ಯಸ್ಥ ಕೋಡಿ ಮೋಟಯ್ಯ ಅವರೊಂದಿಗೆ ಭಂಡಾರ ದೊಂದಿಗೆ ತಲಕಾವೇರಿಗೆ ಆಗಮಿಸಿದರು. ತೀರ್ಥೋದ್ಭವದ ಬಳಿಕ ಬೆಳ್ಳಿಯ ತಂಬಿಗೆಯಲ್ಲಿ ಕಾವೇರಿಯ ತೀರ್ಥವನ್ನು ಕುಂಡಿಕೆಯಿಂದ ಪ್ರಥಮವಾಗಿ ಸಂಗ್ರಹಿಸಿ ಭಾಗಮಂಡಲದ ಶ್ರೀ ಭಗಂಡೇಶ್ವರನಿಗೆ ಅಭಿಷೇಕ ಮಾಡಲು ಕೊಂಡೊಯ್ದ ವಿದ್ಯಮಾನಗಳು ಪ್ರಮುಖವಾಗಿತ್ತು.

ಸ್ನಾನಕೊಳದ ಬಳಿ ನೂಕುನುಗ್ಗಲು ತಡೆಯಲು ಪೆÇಲೀಸ್ ಇಲಾಖೆ ಬ್ಯಾರಿ ಕೇಡ್ ವ್ಯವಸ್ಥೆ ಮಾಡಿತ್ತು. ಹೀಗಿದ್ದೂ ಭಕ್ತಾದಿಗಳು ತೀರ್ಥ ಕೊಳಕ್ಕೆ ಧುಮುಕಿ ‘ಕಾವೇರಿ ಮಾತಾಕೀ ಜೈ’ ಘೋಷಣೆಗ ಳೊಂದಿಗೆ ತೀರ್ಥೋದ್ಭವದ ಕ್ಷಣಗಳಿಗೆ ಸಾಕ್ಷಿಯಾದರು. ಬಳಿಕ ತೀರ್ಥ ಸ್ವೀಕರಿಸಿ ಕೊಡಗಳಲ್ಲಿ, ಪ್ಲಾಸ್ಟಿಕ್ ಕ್ಯಾನ್‍ಗಳೊಂದಿಗೆ ತೀರ್ಥವನ್ನು ತುಂಬಿಕೊಂಡು ತೆರಳಿದರು.

ತ್ರಿವೇಣಿಯಲ್ಲಿ ಪುಣ್ಯ ಸ್ನಾನ: ತೀರ್ಥೋ ದ್ಭವದ ಹಿನ್ನೆಲೆ ಸೋಮವಾರ ಬೆಳಗ್ಗಿ ನಿಂದಲೇ ಜಿಲ್ಲೆ ಮತ್ತು ಹೊರ ಜಿಲ್ಲೆಗಳಿಂದ ಭಕ್ತಾದಿಗಳು ನೂರಾರು ಸಂಖ್ಯೆಯಲ್ಲಿ ಕ್ಷೇತ್ರಕ್ಕೆ ಆಗಮಿಸಿದರು. ಸಂಪ್ರದಾಯದಂತೆ ಭಕ್ತರು ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿ, ಶ್ರೀ ಭಗಂಡೇಶ್ವರನಿಗೆ ಪೂಜೆ ಸಲ್ಲಿಸಿ ತಲಕಾವೇರಿಯತ್ತ ತೆರಳುತ್ತಿದ್ದುದು ಕಂಡು ಬಂತು. ಸಂಗಮದ ದಡದಲ್ಲಿ ಭಕ್ತಾದಿಗಳು ತಮ್ಮ ಹಿರಿಯರಿಗೆ ಪಿಂಡ ಪ್ರದಾನ, ಕೇಶ ಮುಂಡನ  ಕಾರ್ಯಕ್ಕೂ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಲಾಗಿತ್ತು.

ಅನ್ನದಾನ: ತುಲಾ ಸಂಕ್ರಮಣ ಪ್ರಯುಕ್ತ ತಲಕಾವೇರಿಯಲ್ಲಿ ಕೊಡಗು ಏಕೀಕರಣ ರಂಗದಿಂದ ಅನ್ನದಾನ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಬೆಳಗ್ಗಿನಿಂದಲೇ ಕ್ಷೇತ್ರಕ್ಕೆ ಆಗಮಿಸಿದ ಭಕ್ತರು ಅನ್ನ ಸಂತರ್ಪಣೆ ಯಲ್ಲಿ ಪಾಲ್ಗೊಂಡಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮ:ತುಲಾ ಸಂಕ್ರಮಣ ಜಾತ್ರೆಯ ಸಂದರ್ಭ ತಲಕಾವೇರಿಯಲ್ಲಿ ಭಕ್ತಿ ಪ್ರದಾನ ಗಾಯನ ಕಾರ್ಯಕ್ರಮವನ್ನು ಜಿಲ್ಲೆಯ ಪ್ರತಿಭಾವಂತ ಗಾಯಕರು ನಡೆಸಿಕೊಟ್ಟರು.

ವಾಹನ ನಿಲುಗಡೆ:ಜಾತ್ರಾ ಮಹೋ ತ್ಸವಕ್ಕಾಗಿ ತಲಕಾವೇರಿ ಮತ್ತು ಭಾಗ ಮಂಡಲದಲ್ಲಿ ವಾಹನ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿತ್ತು. ಜಿಲ್ಲೆ ಮತ್ತು ಹೊರ ಜಿಲ್ಲೆಗಳಿಂದ ಆಗಮಿಸಿದ ನೂರಾರು ವಾಹನಗಳು ಅಲ್ಲಿ ನಿಲುಗಡೆಗೊಂಡಿದ್ದವು.

ಭಾಗಮಂಡಲ: ಕಾವೇರಿ ತೀರ್ಥೋ ದ್ಭವದ ಹಿನ್ನೆಲೆಯಲ್ಲಿ ವಿವಿಧ ಕೊಡವ ಸಂಘಟನೆಗಳಿಂದ ಭಾಗಮಂಡಲದಿಂದ ತಲಕಾವೇರಿವರೆಗೆ ಪಾದಯಾತ್ರೆ ನಡೆಯಿತು.

ದುಡಿಕೊಟ್ಟ್ ಪಾಟ್, ತಳಿಯತಕ್ಕಿ ಬೊಳ್ಚ ವನ್ನೊಳಗೊಂಡು ನಡೆದ ಪಾದಯಾತ್ರೆ ಯಲ್ಲಿ ಅಖಿಲ ಕೊಡವ ಸಮಾಜ ಯೂತ್ ವಿಂಗ್, ಕನೆಕ್ಟಿಂಗ್ ಕೊಡವಾಸ್, ಕೊಡವ ರೈಡರ್ಸ್ ಕ್ಲಬ್, ಜಬ್ಬೂಮಿ ಟ್ರಸ್ಟ್, ತಿಂಗ ಕ್ಕೊರ್ ಮೊಟ್ಟ್ ಸಂಘಟನೆ, ಅಮ್ಮತ್ತಿ ಕೊಡವ ಸಮಾಜ, ಪೆÇನ್ನಂಪೇಟೆ ಕೊಡವ ಸಮಾಜ, ಮಡಿಕೇರಿ ಕೊಡವ ಸಮಾಜ, ಬಾಳೆಲೆ ಕೊಡವ ಸಮಾಜ, ಕೊಡವ ಕೂಟಾಳಿಯಡ ಕೂಟ, ನಾಪೆÇಕ್ಲು ಕೊಡವ ಸಮಾಜ, ವೀರಾಜಪೇಟೆ ಕೊಡವ ಸಮಾಜ, ಹುದಿಕೇರಿ ಕೊಡವ ಸಮಾಜ, ಅಮ್ಮ ಕೊಡವ ಸಮಾಜ, ಸಿಎನ್‍ಸಿ, ಮೈಸೂರು ಕೊಡವ ಸಮಾಜ, ಬೆಂಗಳೂರು ಕೊಡವ ಸಮಾಜ ಮತ್ತು ಯೂತ್ ಕೌನ್ಸಿಲ್, ಕೊಡವಾಮೆರ ಕೊಂಡಾಟ, ಯುಕೋ ಮತ್ತಿತರ ಸಂಘಟನೆಗಳು ಪಾಲ್ಗೊಂಡಿದ್ದವು.

Translate »