ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯ ಮಂಡ್ಯ, ಮದ್ದೂರು, ಶ್ರೀರಂಗಪಟ್ಟಣ ಬೈಪಾಸ್‍ಗಳು ಡಿಸೆಂಬರ್ ಒಳಗಾಗಿ ಸಂಚಾರಕ್ಕೆ ಮುಕ್ತ
ಮೈಸೂರು

ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯ ಮಂಡ್ಯ, ಮದ್ದೂರು, ಶ್ರೀರಂಗಪಟ್ಟಣ ಬೈಪಾಸ್‍ಗಳು ಡಿಸೆಂಬರ್ ಒಳಗಾಗಿ ಸಂಚಾರಕ್ಕೆ ಮುಕ್ತ

October 18, 2022

ಮೈಸೂರು, ಅ. 17(ಆರ್‍ಕೆ)-ಮೈಸೂರು-ಬೆಂಗಳೂರು ನಡು ವಿನ ದಶಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಗತಿಯಲ್ಲಿದ್ದು, ಶ್ರೀರಂಗಪಟ್ಟಣ, ಮಂಡ್ಯ ಹಾಗೂ ಮದ್ದೂರು ನಗರಗಳ ಬೈಪಾಸ್ ರಸ್ತೆಯು ಡಿಸೆಂಬರ್ ಒಳಗೆ ಸಿದ್ಧವಾಗಲಿದೆ.

ಬೆಂಗಳೂರಿನಿಂದ ಮದ್ದೂರುವರೆಗೆ ಈಗಾಗಲೇ ಹೆದ್ದಾರಿ ಸಿದ್ಧವಾಗಿದ್ದು, ಸೇತುವೆ, ಅಂಡರ್‍ಪಾಸ್, ಓವರ್ ಬ್ರಿಡ್ಜ್‍ಗಳ ನಿರ್ಮಾಣ ಪೂರ್ಣಗೊಂಡಿದೆ. ಹಾಗಾಗಿ ಮದ್ದೂರು, ಮಂಡ್ಯ ಹಾಗೂ ಶ್ರೀರಂಗಪಟ್ಟಣಗಳ ಹೊರಗೆ ಬೈಪಾಸ್ ನಿರ್ಮಾಣ ಉಳಿದ ಕಾಮ ಗಾರಿ ವೇಗವಾಗಿ ನಡೆಯುತ್ತಿದ್ದು, ಇದೇ ಡಿಸೆಂಬರ್ ಮಾಹೆ ಅಂತ್ಯ ದೊಳಗೆ ಪೂರ್ಣಗೊಳಿಸಲಾಗುವುದು ಎಂದು ಭಾರತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿರ್ದೇಶಕ ಬಿ.ಟಿ.ಶ್ರೀಧರ್ ತಿಳಿಸಿದ್ದಾರೆ.
ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಆಗಿಂದಾಗ್ಗೆ ಮದ್ದೂರು ಬಳಿ ಕೆರೆಗಳು ಒಡೆದು ನೀರು ನುಗ್ಗಿದ ಕಾರಣ ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು. ಇದೀಗ ರಿಪೇರಿ ಮಾಡಲಾಗಿದ್ದು, ಮೈಸೂರು-ಬೆಂಗಳೂರು ನಡುವೆ ವಾಹನಗಳು ಸರಾಗವಾಗಿ ಓಡಾಡುತ್ತಿವೆ. ಕೆರೆ ಒಡೆದಿದ್ದರಿಂದ ಅಕ್ಟೋಬರ್ 15 ಮತ್ತು 16ರಂದು ಮದ್ದೂರು ಬಳಿ ಬದಲಿ ಮಾರ್ಗದಿಂದ ವಾಹನ ಸಂಚರಿಸುತ್ತಿದ್ದವು. ಆದರೆ ಈಗ ಸಂಚಾರ ಎಂದಿನಂತೆ ಸುಗಮವಾಗಿದೆ. ಮಳೆ ಹೆಚ್ಚಿನ ಪ್ರಮಾಣದಲ್ಲಿ ಸುರಿದಿದ್ದರಿಂದ ನೈಸರ್ಗಿಕ ವಿಪತ್ತಿನಿಂದ ಉಂಟಾದ ತೊಂದರೆಯನ್ನು ಸರಿ ಪಡಿಸಲಾಗಿದೆ ಎಂದು ಬಿ.ಟಿ.ಶ್ರೀಧರ್ ನುಡಿದರು.

Translate »